ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ ನೇತೃತ್ವದ ಸಿಎಸ್ಕೆ ಬಳಗ ಪಂಜಾಬ್ ವಿರುದ್ಧ ಗೆಲುವು ದಾಖಲು ಮಾಡುವ ಮೂಲಕ ಖಾತೆ ಓಪನ್ ಮಾಡಿದೆ. ವಿಶೇಷವಾಗಿ ಈ ಪಂದ್ಯ ಮಹೇಂದ್ರ ಸಿಂಗ್ ಧೋನಿಗೆ ಒಂದೇ ಫ್ರಾಂಚೈಸಿ ಪರ 200ನೇ ಐಪಿಎಲ್ ಪಂದ್ಯ ಎಂಬುದು ಮಹತ್ವದ ಸಂಗತಿಯಾಗಿದೆ.
-
#MSDhoni on playing his milestone game for #CSK
— IndianPremierLeague (@IPL) April 16, 2021 " class="align-text-top noRightClick twitterSection" data="
"Makes me feel very old" 😅#VIVOIPL | #PBKSvCSK pic.twitter.com/CspWxrWOJV
">#MSDhoni on playing his milestone game for #CSK
— IndianPremierLeague (@IPL) April 16, 2021
"Makes me feel very old" 😅#VIVOIPL | #PBKSvCSK pic.twitter.com/CspWxrWOJV#MSDhoni on playing his milestone game for #CSK
— IndianPremierLeague (@IPL) April 16, 2021
"Makes me feel very old" 😅#VIVOIPL | #PBKSvCSK pic.twitter.com/CspWxrWOJV
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವನ್ನ ಕೇವಲ 106 ರನ್ಗಳಿಗೆ ಕಟ್ಟಿ ಹಾಕಿದ ಸಿಎಸ್ಕೆ ಅಧಿಕಾರಯುತ್ತ ಗೆಲುವು ದಾಖಲು ಮಾಡುವ ಮೂಲಕ ಧೋನಿಗೆ ಜಯದ ಗಿಫ್ಟ್ ನೀಡಿದೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಧೋನಿ, ಒಂದೇ ಫ್ರಾಂಚೈಸಿ ಪರ 200 ಪಂದ್ಯಗಳನ್ನಾಡಿರುವುದು ನಿಜಕ್ಕೂ ಅದ್ಭುತ. ಇದನ್ನ ನೋಡಿದ್ರೆ ನನಗೆ ತುಂಬಾ ವಯಸ್ಸಾಗಿದೆ ಎಂದು ಅನಿಸುತ್ತದೆ. ಇದೊಂದು ಬಹಳ ದೀರ್ಘ ಪ್ರಯಾಣವಾಗಿದ್ದು, 2008ರಲ್ಲಿ ಪ್ರಾರಂಭವಾಯಿತು ಎಂದರು.
ಇದನ್ನೂ ಓದಿ: ಪಂಜಾಬ್ ವಿರುದ್ಧ ಸುಲಭ ಗೆಲುವು.. ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆದ ಚೆನ್ನೈ!
ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಸಿಎಸ್ಕೆ 2010,2011 ಹಾಗೂ 2018ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್ನಲ್ಲಿ ಧೋನಿ ಸಿಎಸ್ಕೆ ಪರ 176 ಪಂದ್ಯಗಳನ್ನಾಡಿದ್ದು, ಚಾಂಪಿಯನ್ ಲೀಗ್ ಟಿ-20ಯಲ್ಲಿ 24 ಪಂದ್ಯಗಳನ್ನಾಡಿದ್ದಾರೆ. ಆದರೆ, 2016-2017ರಲ್ಲಿ ಚೆನ್ನೈ ತಂಡ ಬ್ಯಾನ್ ಆಗಿದ್ದ ವೇಳೆ ಧೋನಿ ಪುಣೆ ಸೂಪರ್ಜೈಂಟ್ಸ್ ಪರ ಕಣಕ್ಕಿಳಿದಿದ್ದರು. ಐಪಿಎಲ್ನಲ್ಲಿ 4,632ರನ್ಗಳಿಕೆ ಮಾಡಿರುವ ಧೋನಿ ಸಿಎಸ್ಕೆ ಪರ 4058 ರನ್ ಗಳಿಸಿದ್ದು, 148 ವಿಕೆಟ್ ಔಟ್ ಮಾಡಿದ್ದಾರೆ.