ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ 135 ರನ್ಗಳ ಸಾಧಾರಣ ಗುರಿ ನೀಡಿದೆ.
ಶಾರ್ಜಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಸನ್ರೈಸರ್ಸ್ ಹೈದರಾಬಾದ್ ತಂಡ ಆರಂಭದಿಂದಲೂ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ವೃದ್ಧಿಮಾನ್ ಸಹಾ ಹೊರೆತುಪಡಿಸಿ, ಉಳಿದೆಲ್ಲಾ ಬ್ಯಾಟರ್ಗಳು ಬೇಜವಾಬ್ದಾರಿ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು.
-
INNINGS BREAK!
— IndianPremierLeague (@IPL) September 30, 2021 " class="align-text-top noRightClick twitterSection" data="
3⃣ wickets for Josh Hazlewood
2⃣ wickets for @DJBravo47
4⃣4⃣ for @Wriddhipops
The @ChennaiIPL chase will begin shortly. #VIVOIPL #SRHvCSK
Scorecard 👉 https://t.co/QPrhO4XNVr pic.twitter.com/Y5Cuks24SU
">INNINGS BREAK!
— IndianPremierLeague (@IPL) September 30, 2021
3⃣ wickets for Josh Hazlewood
2⃣ wickets for @DJBravo47
4⃣4⃣ for @Wriddhipops
The @ChennaiIPL chase will begin shortly. #VIVOIPL #SRHvCSK
Scorecard 👉 https://t.co/QPrhO4XNVr pic.twitter.com/Y5Cuks24SUINNINGS BREAK!
— IndianPremierLeague (@IPL) September 30, 2021
3⃣ wickets for Josh Hazlewood
2⃣ wickets for @DJBravo47
4⃣4⃣ for @Wriddhipops
The @ChennaiIPL chase will begin shortly. #VIVOIPL #SRHvCSK
Scorecard 👉 https://t.co/QPrhO4XNVr pic.twitter.com/Y5Cuks24SU
ಕಳೆದ ಪಂದ್ಯದಲ್ಲಿ ಮಿಂಚಿದ್ದ ಆರಂಭಿಕ ಜೇಸನ್ ರಾಯ್ ಇಂದು ಕೇವಲ 2 ರನ್ಗಳಿಸಿ ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ನಾಯಕ ವಿಲಿಯಮ್ಸನ್ ಆಟ ಇಂದು 11ರನ್ಗಳಿಗೆ ಸೀಮಿತವಾಯಿತು. ಯುವ ಬ್ಯಾಟರ್ಗಳಾದ ಪ್ರಿಯಂ ಗರ್ಗ್(7), ಅಭಿಷೇಕ್ ಶರ್ಮಾ(18), ಅಬ್ದುಲ್ ಸಮದ್(18) ಮತ್ತು ಜೇಸನ್ ಹೋಲ್ಡರ್(5) ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಕೈಚೆಲ್ಲಿದರು. ರಶೀದ್ ಖಾನ್ ಅಜೇಯ 17 ರನ್ಗಳಿಸಿ ಅಜೇಯರಾಗುಳಿದರು. ಸಹಾ 46 ಎಸೆತಗಳಲ್ಲಿ 43 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಜೋಶ್ ಹೆಜಲ್ವುಡ್ 24ಕ್ಕೆ3, ಡ್ವೇನ್ ಬ್ರಾವೋ 17ಕ್ಕೆ2, ಜಡೇಜಾ 14ಕ್ಕೆ1 ಮತ್ತು ಶಾರ್ದೂಲ್ ಠಾಕೂರ್ 37ಕ್ಕೆ1 ವಿಕೆಟ್ ಪಡೆದು ಹೈದರಾಬಾದ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.