ETV Bharat / sports

ಇಂದಿನ ಪಂದ್ಯದಲ್ಲಿ ನಮ್ಮ ತಂಡಕ್ಕೆ ಮಾನಸಿಕವಾಗಿ ಹೆಚ್ಚಿನ ಅನುಕೂಲವಿದೆ: ರೋಹಿತ್

author img

By

Published : Nov 10, 2020, 12:31 PM IST

ಮುಂಬೈ ಇಂಡಿಯನ್ಸ್ ಈ ಸೀಸನ್​ನಲ್ಲಿ ಡೆಲ್ಲಿ ವಿರುದ್ಧ ಈ ಹಿಂದೆ ಆಡಿದ ಮೂರು ಪಂದ್ಯಗಳಲ್ಲಿ ಜಯ ಗಳಿಸಿದೆ. ಮೊದಲ ಪಂದ್ಯವನ್ನು 5 ವಿಕೆಟ್​ನಿಂದ ಗೆದ್ದರ, ಎರಡನೇ ಪಂದ್ಯದಲ್ಲಿ 9 ವಿಕೆಟ್​ಗಳಿಂದ ಜಯ ಸಾಧಿಸಿತ್ತು. ಹಾಗೆಯೇ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 57 ರನ್​​ಗಳಿಂದ ಗೆದ್ದು ಬೀಗಿತ್ತು.

Will have slight psychological advantage but can't think about past games: Rohit
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ

ದುಬೈ: 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಫೈನಲ್​ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗುತ್ತಿವೆ.

4 ಬಾರಿ ಚಾಂಪಿಯನ್​ ಪಟ್ಟ ಗಿಟ್ಟಿಸಿಕೊಂಡಿರುವ ಮುಂಬೈ ತಂಡ ಇಂದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಇಂದಿನ ಪಂದ್ಯದಲ್ಲಿ ನಮ್ಮ ತಂಡಕ್ಕೆ ಹೆಚ್ಚಿನ ಮಾನಸಿಕ ಅನುಕೂಲವಿದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಈ ಪಂದ್ಯದಲ್ಲಿ ನಮಗೆ ಸ್ವಲ್ಪ ಮಾನಸಿಕವಾಗಿ ಪ್ರಯೋಜನ ಹೆಚ್ಚಿದೆ. ಆದರೆ ನಾವು ಐಪಿಎಲ್​​ನಲ್ಲಿ ಹೊಸತನ್ನು ನೋಡಿದ್ದೆವೆ. ಪ್ರತಿ ಪಂದ್ಯದಲ್ಲಿ ಹೊಸ ಒತ್ತಡ ಮತ್ತು ಪ್ರತಿ ಆಟವು ಹೊಸ ಆಟವಾಗಿರುತ್ತದೆ. ಆದ್ದರಿಂದ ನೀವು ಹಿಂದೆ ಏನಾಗಿದೆ ಎಂಬುದರ ಬಗ್ಗೆ ಹೆಚ್ಚು ಯೋಚಿಸಲು ಸಾಧ್ಯವಿಲ್ಲ" ಎಂದು ರೋಹಿತ್ ತಿಳಿಸಿದ್ದಾರೆ.

ಟ್ರೆಂಟ್ ಬೌಲ್ಟ್ ಈ ಪಂದ್ಯಕ್ಕೆ ಮರಳುವ ವಿಶ್ವಾಸವಿದೆ, ಅವರು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ತಂಡಕ್ಕೆ ಮರಳುವ ವಿಶ್ವಾಸವಿದೆ ಎಂದು ಎಂಐ ನಾಯಕ ಹೇಳಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯದ ನಂತರ ಬೌಲ್ಟ್​​ಗೆ ಗಾಯದ ಸಮಸ್ಯೆ ಉಂಟಾಗಿತ್ತು.​

ಮುಂಬೈ ಇಂಡಿಯನ್ಸ್ ಈ ಸೀಸನ್​ನಲ್ಲಿ ಡೆಲ್ಲಿ ವಿರುದ್ಧ ಈ ಹಿಂದೆ ಆಡಿದ ಮೂರು ಪಂದ್ಯಗಳಲ್ಲಿ ಜಯ ಗಳಿಸಿದೆ. ಮೊದಲ ಪಂದ್ಯವನ್ನು 5 ವಿಕೆಟ್​​ನಿಂದ ಗೆದ್ದರೆ, ಎರಡನೇ ಪಂದ್ಯವನ್ನು 9 ವಿಕೆಟ್​ಗಳಿಂದ ಜಯಿಸಿತ್ತು. ಹಾಗೆಯೇ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 57 ರನ್​​ಗಳಿಂದ ಗೆದ್ದು ಬೀಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.