ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್‌ನಲ್ಲಿ 9,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಈ ಮೈಲಿಗಲ್ಲು ತಲುಪಿದ್ದು, ತಮ್ಮ 286ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿಯನ್ನು 59 ರನ್‌ಗಳಿಂದ ಸೋಲಿಸಿತು.
-
.@DelhiCapitals have regained the top spot in the Points Table after Match 19.#Dream11IPL #RCBvDC pic.twitter.com/cdMgbGbjRl
— IndianPremierLeague (@IPL) October 5, 2020 " class="align-text-top noRightClick twitterSection" data="
">.@DelhiCapitals have regained the top spot in the Points Table after Match 19.#Dream11IPL #RCBvDC pic.twitter.com/cdMgbGbjRl
— IndianPremierLeague (@IPL) October 5, 2020.@DelhiCapitals have regained the top spot in the Points Table after Match 19.#Dream11IPL #RCBvDC pic.twitter.com/cdMgbGbjRl
— IndianPremierLeague (@IPL) October 5, 2020
197 ರನ್ಗಳ ಭರ್ಜರಿ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ದೃಢವಾದ ಆರಂಭ ಸಿಗಲಿಲ್ಲ. ಏಕೆಂದರೆ ಇಬ್ಬರೂ ಆರಂಭಿಕ ಆಟಗಾರರು ದೊಡ್ಡ ಮೊತ್ತದ ರನ್ ಗಳಿಸುವಲ್ಲಿ ವಿಫಲರಾದರು. ಬಳಿಕ ವಿರಾಟ್ ಕೊಹ್ಲಿ 43 ರನ್ ಗಳಿಸಿ ಔಟ್ ಆದರು.