ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರನ್ಗಳ ಸುರಿಮಳೆಯಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 224 ರನ್ಗಳ ಬೃಹತ್ ಮೊತ್ತವನ್ನು ಚೇಸ್ ಮಾಡುವ ಮೂಲಕ ರಾಜಸ್ಥಾನ ತಂಡ ಹೊಸ ಇತಿಹಾಸ ಬರೆದಿದೆ.
ಸೋಲಿನ ಸುಳಿಯಲ್ಲಿದ್ದ ರಾಜಸ್ಥಾನ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದು ಯುವ ಬ್ಯಾಟ್ಸ್ಮನ್ ರಾಹುಲ್ ತೆವಾಟಿಯಾ. ಕೊನೆಯ ಮೂರು ಓವರ್ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ತೆವಾಟಿಯಾ, ರಾಜಸ್ಥಾನ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ರಾಜಸ್ಥಾನ ತಂಡದ ನಾಯಕ ಸ್ಟೀವ್ ಸ್ಮಿತ್, ಟೆವಾಟಿಯಾ, ಕಾಟ್ರೆಲ್ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ರು. ಸಂಜು ಸ್ಯಾಮ್ಸನ್ ಕೂಡ ಅತ್ಯುತ್ತಮ ಸಿಕ್ಸರ್ಗಳನ್ನು ಸಿಡಿಸಿದ್ರು. ಆತ ನೆಟ್ನಲ್ಲಿ ಬ್ಯಾಟ್ ಬೀಸಿದ್ದನ್ನು ನೋಡಿದ್ದೇವೆ. ಕಾಟ್ರೆಲ್ ಬೌಲಿಂಗ್ ಸಿಡಿಸಿದ ಸಿಕ್ಸರ್ನಿಂದ ನಾವು ಗೆಲುವು ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.
- ' class='align-text-top noRightClick twitterSection' data=''>
ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ತೆವಾಟಿಯಾ, ನಾನು ಆಡಿದ ಮೊದಲ 20 ಎಸೆತಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದೇನೆ, ನಾನು ನೆಟ್ನಲ್ಲಿ ಚೆನ್ನಾಗಿ ಹೊಡೆಯುತ್ತಿದ್ದೆ. ಹಾಗಾಗಿ ನನ್ನ ಬಗ್ಗೆ ನನಗೆ ನಂಬಿಕೆ ಇತ್ತು. ನಾನು ಆರಂಭದಲ್ಲಿ ಉತ್ತಮ ಪ್ರದರ್ರಶನ ತೋರಲಿಲ್ಲ. ಅದರೆ ಡಗೌಟ್‌ನತ್ತ ನೋಡಿದೆ. ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿದ್ದರು. ಏಕೆಂದರೆ ನಾನು ಸಿಕ್ಸರ್ ಹೊಡೆಯಬಹುದೆಂದು ಅವರಿಗೆ ತಿಳಿದಿತ್ತು. ಒಂದು ಸಿಕ್ಸರ್ ಬಾರಿಸುವವರೆಗೆ ಮಾತ್ರ ಕಷ್ಟವಾಯಿತು. ನಂತರ ಎಲ್ಲಾ ಸರಿ ಆಯಿತು ಎಂದಿದ್ದಾರೆ.
- ' class='align-text-top noRightClick twitterSection' data=''>
ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ, ಮಯಾಂಕ್ ಅಗರ್ವಾಲ್(106) ಅವರ ಶತಕ ಹಾಗೂ ಕೆ.ಎಲ್.ರಾಹುಲ್(69) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 223 ರನ್ ಗಳಿಸಿತ್ತು. 224 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ 19.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಅಧಿಕ ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು.