ETV Bharat / sports

ಇಂದು ಚೆನ್ನೈ-ಹೈದರಾಬಾದ್ ಹಣಾಹಣಿ: ಪ್ಲೇ ಆಫ್​ ಕನಸು ಜೀವಂತವಾಗಿರಿಸಿಕೊಳ್ಳುತ್ತಾ ಧೋನಿ ಪಡೆ!?

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ​ರೈಸರ್ಸ್ ಹೈದರಾಬಾದ್​ ಇಂದು ಮುಖಾಮುಖಿಯಾಗಲಿದ್ದು, ಧೋನಿ ಪಡೆ ಪ್ಲೇ ಆಫ್ ಹಾದಿ ಕಠಿಣವಾಗಿದೆ.

SRH VS CSK
ಚೆನ್ನೈ-ಹೈದರಾಬಾದ್ ಹಣಾಹಣಿ
author img

By

Published : Oct 13, 2020, 11:33 AM IST

ದುಬೈ: ರ್ಸ್​ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಇಂದು ಸನ್​ ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಮುಖಾಮುಖಿಯಾಗಲಿದ್ದು, ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿಕೊಳ್ಳಲು ಅಧಿಕ ರನ್ ​ರೇಟ್​ಗಳಿಂದ ಜಯ ಗಳಿಸಬೇಕಿದೆ.

SRH VS CSK
ಚೆನ್ನೈ-ಹೈದರಾಬಾದ್ ಹಣಾಹಣಿ

ಮೂರು ಬಾರಿ ಚಾಂಪಿಯನ್ ಆಗಿದ್ದ ಸಿಎಸ್​ಕೆ ಈ ಬಾರಿಯ ಐಪಿಎಲ್​ನಲ್ಲಿ ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ. ಇದರಿಂದ ಪ್ಲೇ ಆಫ್ ಹಂತಕ್ಕೆ ತಲುಪುವುದೂ ಕಷ್ಟದ ಮಾರ್ಗವಾಗಿದೆ.

SRH VS CSK
ಚೆನ್ನೈ-ಹೈದರಾಬಾದ್ ಹಣಾಹಣಿ

ಚೆನ್ನೈ ಸೂಪರ್ ಕಿಂಗ್ಸ್ 2016 ಹಾಗೂ 2017ರಲ್ಲಿ ಐಪಿಎಲ್​ನಿಂದ ನಿಷೇಧಕ್ಕೆ ಒಳಗಾಗಿದ್ದನ್ನು ಹೊರತುಪಡಿಸಿದರೆ ಯಾವುದೇ ಪ್ಲೇ ಆಫ್ ತಪ್ಪಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಪ್ಲೇ ಆಫ್ ಹಾದಿ ಕಠಿಣವಾಗಿರೋದು ಧೋನಿ ಪಡೆಗೆ ಮುಖಭಂಗವಾದಂತಾಗಿದೆ.

SRH VS CSK
ಚೆನ್ನೈ-ಹೈದರಾಬಾದ್ ಹಣಾಹಣಿ

ಚೆನ್ನೈ ತಂಡದಲ್ಲಿ ಧೋನಿ ಒಳಗೊಂಡಂತೆ ಹಲವರು ನಿರೀಕ್ಷೆಯಂತೆ ಆಡುತ್ತಿಲ್ಲ. ಆರಂಭಿಕ ಆಟಗಾರರಾದ ಫಾಪ್​ ಡು ಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿದರೂ ವಿಫಲವಾಗುತ್ತಿದೆ. ಅಂಬಾಟಿ ರಾಯುಡು ಹಾಗೂ ಕೇದಾರ್ ಜಾಧವ್ ಯತ್ನವೂ ಫಲಿಸುತ್ತಿಲ್ಲ. ಉದಯೋನ್ಮುಖ ಆಟಗಾರ ಜಗದೀಶನ್ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

ರವೀಂದ್ರ ಜಡೇಜಾ, ಡ್ವೇನ್ ಬ್ರಾವೋನಂತಹ ಆಲ್​ರೌಂಡರ್​ಗಳು ಕೂಡ ತಂಡಕ್ಕೆ ಗೆಲುವು ತರಲು ಹಾಕುತ್ತಿರುವ ಶ್ರಮ ಸಫಲವಾಗುತ್ತಿಲ್ಲ. ಬೌಲರ್​​ಗಳೂ ಕೂಡ ಸಮರ್ಥವಾಗಿ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿದರೂ ಕೆಲವೊಂದು ಪಂದ್ಯಗಳಲ್ಲಿ ನಿರೀಕ್ಷೆ ಸುಳ್ಳಾಗಿದೆ.

ಸನ್ ​​​ರೈಸರ್ಸ್​ ಹೈದರಾಬಾದ್​ ತಂಡ ಬಲಿಷ್ಟವಾಗಿದ್ದು, ಭುವನೇಶ್ವರ್ ಕುಮಾರ್ ಚೆನ್ನೈ ವಿರುದ್ಧದ ಪಂದ್ಯಕ್ಕೆ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಇದರಿಂದಾಗಿ ಟಿ.ನಟರಾಜನ್, ಖಲೀಲ್ ಅಹಮದ್ ಅವರ ಮೇಲೆ ಒತ್ತಡ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ತಂಡದಲ್ಲಿನ ಆಟಗಾರರರು

ಚೆನ್ನೈ ಸೂಪರ್ ಕಿಂಗ್ಸ್​: ಎಂ.ಎಸ್.ಧೋನಿ (ನಾಯಕ), ಎಂ.ವಿಜಯ್, ಅಂಬಟಿ ರಾಯುಡು, ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಕೇದಾರ್ ಜಾಧವ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಲುಂಗಿ ಎನ್ಗಿಡಿ, ದೀಪಕ್ ಚಹರ್, ಪಿಯೂಷ್ ಚಾವ್ಲಾ, ಇಮ್ರಾನ್ ತಾಹಿರ್, ಮಿಚೆಲ್ ಸ್ಯಾಂಟ್ನರ್, ಜೋಶ್ ಹ್ಯಾಜಲ್​​ವುಡ್, ಶಾರ್ದೂಲ್ ಠಾಕೂರ್, ಸ್ಯಾಮ್​​ ಕುರ್ರನ್, ಎನ್. ಜಗದೀಶನ್, ಕೆ.ಎಂ. ಆಸಿಫ್, ಮೋನು ಕುಮಾರ್, ಆರ್.ಸಾಯಿ ಕಿಶೋರ್, ರುತುರಾಜ್ ಗಾಯಕ್​ವಾಡ್​​, ಕರ್ಣ್​​ ಶರ್ಮಾ.

ಸನ್‌ ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ ‌ಸ್ಟೋವ್​, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಶ್ರೀವತ್ಸ್ ಗೋಸ್ವಾಮಿ, ವಿರಾಟ್ ಸಿಂಗ್, ಪ್ರಿಯಮ್ ಗಾರ್ಗ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ರಶೀದ್ ಖಾನ್, ಜೇಸನ್ ಹೋಲ್ಡರ್, ಸಂಜಯ್ ಯಾದವ್, ಫ್ಯಾಬಿಯನ್ ಅಲೆನ್, ಪೃಥ್ವಿರಾಜ್ ಯರ್ರಾ, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಸಿದ್ಧಾರ್ಥ್ ಕೌಲ್, ಬಿಲ್ಲಿ ಸ್ಟಾನ್ಲೇಕ್, ಟಿ.ನಟರಾಜನ್, ಬೆಸಿಲ್ ಥಾಂಪಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.