ಶಾರ್ಜಾ: ಕಳೆದ ಎರಡು ಪಂದ್ಯಗಳಲ್ಲಿ ಸೋಲು ಕಂಡ ಪರಿಣಾಮ ಪ್ಲೇ ಆಫ್ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳದ ಆರ್ಸಿಬಿ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ರೆ, 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ.
ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಫಿಂಚ್ ಬಲಿಗೆ ಕಣಕ್ಕಿಳಿದಿದ್ದ ಜೋಶ್ ಫಿಲಿಪ್ಪೆ ಹೊಸ ಭರವಸೆ ಮೂಡಿಸಿದ್ದಾರೆ. ಆದರ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ವೈಫಲ್ಯದಿಂದ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಲಾಗಿತ್ತು. ಇಂದಿನ ಪಂದ್ಯದಲ್ಲಿ ಕ್ರಿಸ್ ಮೋರಿಸ್ ಮತ್ತು ಶಿವಂ ದುಬೆ ಬ್ಯಾಟಿಂಗ್ನಲ್ಲಿ ಮಿಂಚಬೇಕಿದೆ.
ಆರ್ಸಿಬಿ ಬೌಲಿಂಗ್ ಮತ್ತಷ್ಟು ಚುರುಕಾಗಬೇಕಿದೆ, ಡೇಲ್ ಸ್ಟೈನ್ ದುಬಾರಿಯಾಗಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಕ್ರಿಸ್ ಮೋರಿಸ್, ಚಹಾಲ್ ಮತ್ತು ವಾಷಿಂಗ್ಟನ್ ಸುಂದರ್ ಇಂದಿನ ಪಂದ್ಯದಲ್ಲಿ ಮಿಂಚಿದ್ರೆ ಆರ್ಸಿಬಿ ಗೆಲುವು ಕಷ್ಟವೇನಲ್ಲ.
ರನ್ ರೇಟ್ನಲ್ಲಿ ಉತ್ತಮ, ಅಂಕಗಳ ಕೊರತೆ:
ಮುಂಬೈ ನಂತರ ಉತ್ತಮ ರನ್ರೇಟ್ ಹೊಂದಿರುವ ತಂಡವಾಗಿರುವ ಹೈದರಾಬಾದ್ಗೆ ಪಾಯಿಂಟ್ಗಳ ಕೊರತೆ ಇದೆ. ವಾರ್ನರ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಸೋಲು ಕಂಡ್ರೆ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.
ಕಳೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಹೈದರಾಬಾದ್ ತಂಡಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹೊಸ ಭರವಸೆ ಮೂಡಿಸಿದ್ದಾರೆ. ವಾರ್ನರ್, ಕನ್ನಡಿಗ ಮನೀಷ್ ಪಾಂಡೆ, ವಿಜಯ್ ಶಂಕರ್ ಕೂಡ ಉತ್ತಮ ಫಾರ್ಮನ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ಸಂದೀಪ್ ಶರ್ಮಾ, ಟಿ.ನಟರಾಜನ್, ರಶೀದ್ ಖಾನ್, ವಿಜಯ್ ಶಂಕರ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಇಲ್ಲಿಯವರೆಗೆ ಹೈದರಾಬಾದ್ ಮತ್ತು ಆರ್ಸಿಬಿ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 7 ರಲ್ಲಿ ಸನ್ ರೈಸರ್ ತಂಡ ಗೆಲುವು ಸಾಧಿಸಿದ್ರೆ, 7 ಪಂದ್ಯಗಳಲ್ಲಿ ಆರ್ಸಿಬಿ ಗೆಲುವು ಸಾಧಿಸಿದೆ.