ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರ್ನಲ್ಲಿ ಗೆಲುವು ಸಾಧಿಸಿದೆ.
ಪಂದ್ಯದ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ಸೂಪರ್ ಓವರ್ ಬೌಲ್ ಮಾಡಿದ ತಂಡದ ಸಹ ಆಟಗಾರ ನವದೀಪ್ ಶೈನಿ ಬಗ್ಗೆ ಕೇಳಿದಾಗ, ಪ್ರಾಮಾಣಿಕವಾಗಿ ಅವರು ಅದ್ಭುತ ಆಟಗಾರ. ಈ ವರ್ಷ ಮಾತ್ರವಲ್ಲ, ಕಳೆದ ಎರಡು ವರ್ಷಗಳೂ ಕೂಡ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಮೂಲಕ ಅವರು ಎತ್ತರದಿಂದ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಟೀಂ ಇಂಡಿಯಾದಲ್ಲೂ ಅವರು ಇದೇ ರೀತಿಯ ಪ್ರದರ್ಶನ ತೋರಿದ್ದಾರೆ. ಹೀಗಾಗಿಯೇ 19ನೇ ಓವರ್ನಲ್ಲಿ ಇಬ್ಬರು ಸೆಟ್ ಬ್ಯಾಟ್ಸ್‌ಮನ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರನ್ನು ಕೇವಲ 7 ರನ್ಗಳಿಗೆ ತಡೆದು ನಿಲ್ಲಿಸಲು ಸಾಧ್ಯವಾಯಿತು. ಆದ್ದರಿಂದ ವಿಜಯದ ಕ್ರೆಡಿಟ್ ಅವರಿಗೆ ಹೋಗಬೇಕು ಎಂದಿದ್ದಾರೆ.
ಅನುಭವಿ ಎಬಿ ಡಿವಿಲಿಯರ್ಸ್ ಆರ್‌ಸಿಬಿಗೆ ವಿಕೆಟ್ ಉಳಿಸಿಕೊಟ್ಟರು:
ತಂಡಕ್ಕೆ ಏನು ಬೇಕೋ ಅದನ್ನೇ ಅವರು ಮಾಡುತ್ತಾರೆ. ಇದರಲ್ಲಿ ಅವರು ಹೆಚ್ಚು ಸಂತೋಷ ಪಡುತ್ತಾರೆ. ಅರ್ಸಿಬಿಗೆ ಇಷ್ಟು ವರ್ಷಗಳಿಂದ ಅವರು ಇದನ್ನೇ ಮಾಡುತ್ತಾ ಬಂದಿದ್ದಾರೆ. ನೀವು ಹೆಚ್ಚುವರಿ ಬ್ಯಾಟ್ಸ್ಮನ್ ಅಥವಾ ಬೌಲರ್ ತಂಡಕ್ಕೆ ಹೇಗೆ ಬೇಕೋ ಹಾಗೆ ಆಡಬಹುದು. ಆದರೆ ಬೌಲಿಂಗ್ನ ಪಾತ್ರ ಅತೀ ಮುಖ್ಯವಾಗಿರುತ್ತದೆ. ಇದನ್ನು ಎಬಿಡಿ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಪೂರ್ತಿ ಮಾಡುತ್ತಾರೆ ಎಂದು ಎಬಿ ಡಿವಿಲಿರ್ಸ್ ಅವರನ್ನು ಸುಂದರ್ ಕೊಂಡಾಡಿದರು.