ETV Bharat / sports

ಚೆನ್ನೈ ವಿರುದ್ಧದ ಸೋಲಿಗೆ ರೋಹಿತ್ ಶರ್ಮಾ ನೀಡಿದ ಕಾರಣ ಹೀಗಿದೆ! - ಸೋಲಿಗೆ ಕಾರಣ ನೀಡಿದ ರೋಹಿತ್ ಶರ್ಮಾ

ಚೆನ್ನೈ ತಂಡಕ್ಕೆ ಡು ಪ್ಲೆಸಿಸ್ ಮತ್ತು ರಾಯುಡು ನೆರವಾದಂತೆ, ಮುಂಬೈ ತಂಡಕ್ಕೆ ಯಾರೂ ನೆರವಾಗಲಿಲ್ಲ ಎಂದು ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

None of our batsmen carried on for us
ಸೋಲಿಗೆ ರೋಹಿತ್ ಶರ್ಮಾ ನೀಡಿದ ಕಾರಣ
author img

By

Published : Sep 20, 2020, 10:17 AM IST

Updated : Sep 25, 2020, 5:59 PM IST

ಅಬುಧಾಬಿ: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್ ಅಂತರದಲ್ಲಿ ಸೋಲು ಕಂಡಿರುವುದಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತಮ್ಮ ಬ್ಯಾಟ್ಸ್‌ಮನ್‌ಗಳನ್ನು ದೂಷಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್​ ತಂಡ ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್​ ಗಳಿಸಿತ್ತು. ಆದರೆ ಅಂತಿಮವಾಗಿ ತಮ್ಮ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 162 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಂದ್ಯ ಮುಗಿದ ಬಳಿಕ ಮಾತನಾಡಿರುವ ರೋಹಿತ್ ಶರ್ಮಾ, ಸಿಎಸ್​ಕೆ ತಂಡಕ್ಕೆ ಡು ಪ್ಲೆಸಿಸ್ ಮತ್ತು ರಾಯುಡು ನೆರವಾದಂತೆ, ನಮ್ಮ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ನಮಗೆ ನೆರವಾಗಲಿಲ್ಲ. ಮೊದಲ 10 ಓವರ್‌ಗಳಲ್ಲಿ ನಾವು 85 ರನ್ ಗಳಿಸಿದ್ದೆವು. ಕೊನೆಯಲ್ಲಿ ಉತ್ತಮವಾಗಿ ಬೌಲ್ ಮಾಡಿದ ಸಿಎಸ್​ಕೆ ಬೌಲರ್ಸ್​ ನಮ್ಮ ಬ್ಯಾಟ್ಸ್​ಮನ್​ಗಳನ್ನು ಕಟ್ಟಿ ಹಾಕಿದರು ಎಂದಿದ್ದಾರೆ.

None of our batsmen carried on for us
ವಿಕೆಟ್ ಪಡೆದ ಸಂಭ್ರಮದಲ್ಲಿ ಮುಂಬೈ ತಂಡ

ಇವಿನ್ನೂ ಆರಂಭಿಕ ದಿನಗಳು. ಈ ಆಟದಿಂದ ಕೆಲವು ವಿಷಯಗಳನ್ನು ಕಲಿತಿದ್ದೇವೆ. ಈ ಪಂದ್ಯದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡಿದ್ದೇವೆ. ಆದರೆ ಅವುಗಳನ್ನು ಸರಿಪಡಿಸಿಕೊಂಡು ಮುಂದಿನ ಪಂದ್ಯಕ್ಕಾಗಿ ಚುರುಕಾಗಿ ಹೊರಬರುತ್ತೇವೆ ಎಂಬ ಆಶಾಭಾವನೆ ಇದೆ ಎಂದಿದ್ದಾರೆ.

ಮೈದಾನದಲ್ಲಿ ಅಭಿಮಾನಿಗಳಿಲ್ಲದೆ ಆಡುವ ಅನುಭವದ ಬಗ್ಗೆ ಕೇಳಿದಾಗ, ಜನರು ನಮ್ಮನ್ನು ಹುರಿದುಂಬಿಸುತ್ತಿದ್ದರು. ಆದರೆ ಈ ಬಾರಿ ಆ ಅನುಭವ ಇರುವುದಿಲ್ಲ ಎಂದು ಗೊತ್ತಿತ್ತು, ಇದೊಂದು ಸಾಮಾನ್ಯವಾದ ಹೊಸ ಅನುಭವ. ಆದರೆ ಶೀಘ್ರದಲ್ಲೇ ಎಲ್ಲ ಉತ್ತಮಗೊಳ್ಳುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

Last Updated : Sep 25, 2020, 5:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.