ETV Bharat / sports

ನೆಟ್​​ನಲ್ಲಿ ತರಬೇತಿ ಪಡೆಯುವಾಗಲೂ ಎಬಿಡಿಗೆ ಬೌಲ್​ ಮಾಡೋದು ಕಷ್ಟವಂತೆ..! - ಎಬಿಡಿ ಬಗ್ಗೆ ಕ್ರಿಸ್ ಮೋರಿಸ್ ಮಾತು

ಎಬಿಡಿಯ ಸ್ಫೋಟಕ ಆಟದಿಂದ ಆರ್​ಆರ್​ ವಿರುದ್ಧ ಆರ್​ಸಿಬಿ ಗೆಲುವಿನ ನಗೆ ಬೀರಿದೆ. ಈ ಕುರಿತು ಕ್ರಿಸ್ ಮೋರಿಸ್ ಈ ರೀತಿಯ ಅಭಿಪ್ರಾಯ ನೀಡಿದ್ದಾರೆ.

ABD
ಎ.ಬಿ.ಡಿವಿಲಿಯರ್ಸ್
author img

By

Published : Oct 18, 2020, 12:09 PM IST

ದುಬೈ: ಎಬಿ ಡಿ -ವಿಲಿಯರ್ಸ್​​ ಈ ರೀತಿ ಆಟವಾಡಿದರೆ ಯಾವುದೇ ಮೊತ್ತವೂ ಕೂಡಾ ಸುರಕ್ಷಿತವಲ್ಲ ಎಂದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಲ್​ರೌಂಡರ್​ ಆಟಗಾರ ಕ್ರಿಸ್ ಮೋರಿಸ್ ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್​ಗಳ ಜಯಗಳಿಸಿದ ನಂತರ ಮಾತನಾಡಿದ ಕ್ರಿಸ್ ಮೋರಿಸ್ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದು, ಎಬಿಡಿ ಕ್ರೀಸ್​ನಲ್ಲಿರುವಾಗ ಬೌಲರ್​ಗಳಿಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತದೆ.

ನೆಟ್​ನಲ್ಲಿ ತರಬೇತಿ ಪಡೆಯುವಾಗಲೆಲ್ಲ ಎಬಿಡಿಗೆ ಬೌಲ್ ಮಾಡಲು ನಾನು ತುಂಬಾ ಕಷ್ಟ ಪಡುತ್ತೇನೆ. ಎಬಿಡಿಗೆ ಬೌಲ್ ಮಾಡಲು ನನ್ನ ಬಳಿ ಯಾವುದೇ ಯೋಜನೆ ಅಥವಾ ತಂತ್ರಗಳಿಲ್ಲ ಎಂದು ಮೋರಿಸ್ ಸ್ಪಷ್ಟನೆ ನೀಡಿದ್ದಾರೆ.

ಎಬಿಡಿ ಆರ್ಭಟಕ್ಕೆ ಧೂಳಿಪಟವಾದ ರಾಜಸ್ಥಾನ್​: ಆರ್​ಸಿಬಿಗೆ 7 ವಿಕೆಟ್​ಗಳ ಭರ್ಜರಿ ಜಯ

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 22 ಎಸೆತಗಳಿಗೆ 55 ರನ್ ಗಳಿಸಿದ ಎಬಿಡಿ ಆರ್​ಸಿಬಿ ಜಯಗಳಿಸಲು ಕಾರಣವಾಗಿದ್ದರು. ಸ್ಫೋಟಕ ಬ್ಯಾಟಿಂಗ್​ನಿಂದ ಆರ್​ ಆರ್​ ತಂಡದ ಹೆಡೆಮುರಿ ಕಟ್ಟಿದ್ದರು.

ಶನಿವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್ ನೀಡಿದ 178 ರನ್​ಗಳ ಗುರಿಯನ್ನ ಬೆನ್ನತ್ತಿದ ಬೆಂಗಳೂರು ತಂಡ ಎಬಿ ಡಿ ವಿಲಿಯರ್ಸ್ ಅವರ ಅರ್ಧಶತಕ ಹಾಗೂ ನಾಯಕ ಕೊಹ್ಲಿ ಅವರ 43 ರನ್​ಗಳ ನೆರವಿನಿಂದ ಇನ್ನು 2 ಎಸೆತಗಳು ಉಳಿದಿರುವಂತೆ ಗೆಲುವಿನ ನಗೆ ಬೀರಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.