ETV Bharat / sports

ಫೈನಲ್ ಪಂದ್ಯದಲ್ಲಿ ಸ್ಟೋಯ್ನಿಸ್​ ಪ್ರಮುಖ ಪಾತ್ರ ಸಾಧ್ಯತೆ: ಯಾಕೆ ಅಂತೀರಾ?

ಇಂದು ಹಾಲಿ ಚಾಂಪಿಯನ್​ ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಇದೇ ರೀತಿಯ ಪ್ರದರ್ಶನ ನೀಡುತ್ತದೆ ಎಂದು ತಂಡದ ನಾಯಕ ಹಾಗೂ ಕೋಚ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IPL 2020 Final: Marcus Stoinis the bowler will play key role vs MI
ದೆಹಲಿ ಕ್ಯಾಪಿಟಲ್ಸ್ ತಂಡದ ಆಲ್​ರೌಂಡರ್​ ಮಾರ್ಕಸ್ ಸ್ಟೋಯಿನಿಸ್
author img

By

Published : Nov 10, 2020, 2:04 PM IST

ಹೈದರಾಬಾದ್: ಕ್ವಾಲಿಫೈಯರ್ 2 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಆಲ್​ರೌಂಡರ್​ ಮಾರ್ಕಸ್ ಸ್ಟೋಯ್ನಿಸ್​ ಆಲ್​​ರೌಂಡರ್​ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮಖ ಪಾತ್ರ ನಿರ್ವಹಿಸಿದ್ದರು.

ಈ ಪಂದ್ಯದಲ್ಲಿ ಸ್ಟೋಯ್ನಿಸ್​​​ ಓಪನರ್​ ಆಗಿ ಕಣಕ್ಕಿಳಿದಿದ್ದ ಅವರು 38 ರನ್​ಗಳಿಸಿದ್ದರು. ಬೌಲಿಂಗ್​ ನಲ್ಲಿ ಉತ್ತಮ ಪ್ರದರ್ಶನ ತೋರಿದ ಇವರು ಹೈದರಾಬಾದ್​ ತಂಡದ ಪ್ರಮುಖ ಮೂರು ವಿಕೆಟ್​ ಪಡೆದು ಮಿಂಚಿದ್ದರು.

ಇಂದು ಹಾಲಿ ಚಾಂಪಿಯನ್​ ಮುಂಬೈ ವಿರುದ್ಧದ ಪಂದ್ಯದಲ್ಲಿ ಇದೇ ರೀತಿಯ ಪ್ರದರ್ಶನ ನೀಡುತ್ತಾರೆ ಎಂದು ತಂಡದ ನಾಯಕ ಹಾಗೂ ಕೋಚ್​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

" ನಾನು ನನ್ನ ಆಲೋಚನೆಗಳ ಪ್ರಕಾರ ಬೌಲಿಂಗ್​ ಮಾಡುತ್ತೇನೆ, ಆದಷ್ಟೂ ಯಾರ್ಕರ್​​ ಹಾಗೂ ನಿಧಾನವಾದ ಬೌಲ್​​ ಮಾಡಲು ಯೋಚಿಸುತ್ತೇನೆ. ಏಕೆಂದರೆ ಹೀಗೆ ಬೌಲ್​​ ಮಾಡುವುದರಿಂದ ಎದುರಾಳಿ ಬ್ಯಾಟ್ಸ್​​ಮನ್​ಗಳನ್ನ ಸಂಕಷ್ಟಕ್ಕೆ ಸಿಲುಕಿಸಬಹುದು ಎಂದು ಸ್ಟೋಯ್ನಿಸ್​​ ಹೇಳಿದರು.

"ನಿಮ್ಮ ಸಾಮರ್ಥ್ಯಕ್ಕೆ ಅಂಟಿಕೊಳ್ಳುವುದು ಮುಖ್ಯ. ಟಿ-20 ಯಲ್ಲಿ, ನೀವು ವಿಕೆಟ್ ತೆಗೆದುಕೊಳ್ಳಲು ಆಗದಿದ್ದರೆ ರನ್​ಗಳನ್ನ ನಿಯಂತ್ರಿಸಲು ಯೋಚಿಸಬೇಕು. ಆಗ ಎದುರಾಳಿಗಳ ಮೇಲೆ ಸ್ವಲ್ಪ ಒತ್ತಡ ಹಾಕಬಹುದು ಎಂದರು.

ಸ್ಟೋಯ್ನಿಸ್​ 21.66 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಅವರ ಐಪಿಎಲ್ ವೃತ್ತಿ ಜೀವನದ ಅತ್ಯುತ್ತಮ ಬೌಲಿಂಗ್ ಸರಾಸರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.