ETV Bharat / sports

ಕೋಲ್ಕತ್ತಾ vs ಡೆಲ್ಲಿ ಸೆಣಸಾಟ: ಗೆಲ್ಲಲೇಬೇಕಾದ ಒತ್ತಡದಲ್ಲಿ ಕೆಕೆಆರ್​​ - ಕೋಲ್ಕತ್ತಾ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ

ಅಬುಧಾಬಿಯಲ್ಲಿ ನಡೆಯಲಿರುವ 42ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

DC looking to put campaign back on track against KKR
ಕೋಲ್ಕತ್ತಾ vs ಡೆಲ್ಲಿ ಸೆಣೆಸಾಟ
author img

By

Published : Oct 24, 2020, 12:29 PM IST

ಅಬುಧಾಬಿ: ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸೆಣಸಾಡಲಿದೆ.

ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದೆ. ಆಡಿದ 10 ಪಂದ್ಯಗಳ ಪೈಕಿ ಏಳರಲ್ಲಿ ಜಯ ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತ ಕೆಕೆಆರ್​ ತಂಡ 10ರಲ್ಲಿ 5 ಪಂದ್ಯ ಜಯಿಸಿದ್ದು, 5ರಲ್ಲಿ ಸೋಲು ಕಂಡಿದೆ.

ಡೆಲ್ಲಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಹೊರತುಪಡಿಸಿ ಯಾವೊಬ್ಬ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರಲಿಲ್ಲ. ಪೃಥ್ವಿ ಶಾ ಕಳೆದ ಕೆಲ ಪಂದ್ಯಗಳಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಶ್ರೇಯಸ್ ಐಯ್ಯರ್, ಪಂತ್, ಸ್ಟೊಯ್ನೀಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ 2 ಪಂದ್ಯಗಳಲ್ಲಿ ಶತಕ ಸಿಡಿಸಿರುವ ಶಿಖರ್ ಧವನ್​ ಡೆಲ್ಲಿಗೆ ಭರವಸೆಯ ಆಟಗಾರರಾಗಿದ್ದಾರೆ.

DC looking to put campaign back on track against KKR
ಡೆಲ್ಲಿ ಕ್ಯಾಪಿಟಲ್ಸ್

ಬೌಲಿಂಗ್ ವಿಭಾಗದಲ್ಲಿ ಕ್ಯಾಪಿಟಲ್ಸ್ ಮೇಲುಗೈ ಹೊಂದಿದೆ. ಕಗಿಸೊ ರಬಾಡ, ನೋರ್ಟ್ಜೆ, ಅಕ್ಸರ್​​ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್​ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ.

ಬಲಿಷ್ಠ ತಂಡಗಳ ವಿರುದ್ಧ ಗೆಲುವು ಸಾಧಿಸಿದ್ದ ಕೆಕೆಆರ್​, ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹೀನಾಯ ಸೋಲು ಕಂಡಿತ್ತು. ಬೆಂಗಳೂರು ಬೌಲಿಂಗ್ ದಾಳಿಗೆ ಕೆಕೆಆರ್ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಸೇರಿದ್ರು. ಆದರೆ ಇಂದಿನ ಪಂದ್ಯ ಕೆಕೆಆರ್​ಗೆ ಮಹತ್ವದ್ದಾಗಿದ್ದು, ಶುಬ್ಮನ್ ಗಿಲ್, ನಿತೀಶ್ ರಾಣ, ತ್ರಿಪಾಠಿ, ಮಾರ್ಗನ್, ದಿನೇಶ್ ಕಾರ್ತಿಕ್​ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

DC looking to put campaign back on track against KKR
ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ

ವಿಂಡೀಸ್ ಆಟಗಾರರಾದ ರಸೆಲ್ ಮತ್ತು ನರೈನ್ ತಂಡದಿಂದ ಹೊರಗುಳಿದಿರುವುದು ಕೆಕೆಆರ್​ಗೆ ಹಿನ್ನಡ ಉಂಟುಮಾಡಿದೆ. ವೇಗಿ ಲೂಕಿ ಫರ್ಗ್ಯುಸನ್​ ಕೆಕೆಆರ್​ಗೆ ಹೊಸ ಭರವಸೆ ಮೂಡಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಕಮಲೇಶ್‌ ನಾಗರಕೋಟಿ, ವರುಣ್‌ ಚಕ್ರವರ್ತಿ, ಪ್ರಸೀದ್ ಕೃಷ್ಣ ಇಂದಿನ ಪಂದ್ಯದಲ್ಲಿ ಮಿಂಚುವ ಅವಶ್ಯಕತೆ ಇದೆ.

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 25 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕೆಕೆಆರ್​ ಗೆಲುವು ಸಾಧಿಸಿದ್ರೆ, 12 ಪಂದ್ಯದಲ್ಲಿ ಡೆಲ್ಲಿ ಜಯದ ನಗೆ ಬೀರಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.