ETV Bharat / sports

ಸ್ಟಾರ್​ ಅಲ್​ರೌಂಡರ್​ ಕ್ರಿಸ್​ ಮೋರಿಸ್​ಗೆ ಇಂಜ್ಯುರಿ.. ಆರ್​ಸಿಬಿ ನಿರ್ದೇಶಕ ಮೈಕ್ ಹೆಸ್ಸನ್ ಮಾಹಿತಿ - ಆರ್​ಸಿಬಿ ನಿರ್ದೇಶಕ ಮೈಕ್ ಹೆಸ್ಸನ್

ಅವರ ಗೈರು ನಮ್ಮ ತಂಡದ ಸಮತೋಲನ ಬದಲಾಯಿಸುತ್ತದೆ. ಅವರ ಸ್ಥಾನವನ್ನು ಬದಲಿಸುವುದು ಸುಲಭವಲ್ಲ. ಇದರ ಪರಿಣಾಮವಾಗಿ, ನಾವು ನಮ್ಮ ತಂಡದ ರಚನೆ ಬದಲಾಯಿಸಬೇಕಾಗಿತ್ತು..

Hesson reveals reason behind exclusion of Morris
ಕ್ರಿಸ್​ ಮೋರಿಸ್​ಗೆ ಇಂಜ್ಯುರಿ
author img

By

Published : Sep 23, 2020, 2:54 PM IST

Updated : Sep 25, 2020, 5:59 PM IST

ದುಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ರಿಸ್ ಮೋರಿಸ್ ಅವರನ್ನು ತಮ್ಮ ಮೊದಲ ಪಂದ್ಯದಿಂದ ಹೊರಗಿಟ್ಟಿದ್ದು ಕ್ರಿಕೆಟ್ ತಜ್ಞರು ಹುಬ್ಬೇರುವಂತೆ ಮಾಡಿತ್ತು. ಆದರೆ, ಅದರ ಅಸಲಿ ಕಾರಣ ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಆರ್​ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಹೆಸ್ಸನ್, ದುರದೃಷ್ಟವಶಾತ್ ಕ್ರಿಸ್ ಮೋರಿಸ್​ಗೆ ಕೆಲ ದಿನಗಳ ಹಿಂದೆ ಪಕ್ಕೆ ನೋವು (ಸೈಡ್‌ ಸ್ಟ್ರೈನ್) ಕಾಣಿಸಿದೆ. ಅವರು ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ತಂಡಕ್ಕೆ ದೊಡ್ಡ ಕಾಣಿಕೆ ನೀಡಬಹುದಿತ್ತು. ಅವರ ಬ್ಯಾಟಿಂಗ್ ಕೂಡ ಭಾರಿ ಪರಿಣಾಮ ಬೀರುತ್ತಿತ್ತು ಎಂದು ಹೆಸ್ಸನ್ ತಿಳಿಸಿದ್ದಾರೆ.

  • Director of Cricket Operations Mike Hesson explains why Chris Morris didn’t play against SRH, analyses RCB’s bowling changes and fielding performance on Bold Diaries. pic.twitter.com/9ym7UkmUgx

    — Royal Challengers Bangalore (@RCBTweets) September 22, 2020 " class="align-text-top noRightClick twitterSection" data=" ">

ಅವರ ಗೈರು ನಮ್ಮ ತಂಡದ ಸಮತೋಲನ ಬದಲಾಯಿಸುತ್ತದೆ. ಅವರ ಸ್ಥಾನವನ್ನು ಬದಲಿಸುವುದು ಸುಲಭವಲ್ಲ. ಇದರ ಪರಿಣಾಮವಾಗಿ, ನಾವು ನಮ್ಮ ತಂಡದ ರಚನೆ ಬದಲಾಯಿಸಬೇಕಾಗಿತ್ತು. ಒಂದೆರಡು ಪಂದ್ಯಗಳಲ್ಲಿ ಕ್ರಿಸ್ ಮೋರಿಸ್ ವಾಪಸ್ ಆಗುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ನಾವು ಅವರ ಮೇಲ್ವಿಚಾರಣೆ ಮಾಡುತ್ತಿರುತ್ತೇವೆ ಎಂದಿದ್ದಾರೆ.

2019ರಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ತಂಡ ಕ್ರಿಸ್ ಮೋರಿಸ್​ರನ್ನು 10.75 ಕೋಟಿಗೆ ಖರೀದಿ ಮಾಡಿತ್ತು.

Last Updated : Sep 25, 2020, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.