ಶಾರ್ಜಾ: ಎಲ್ಲಾ ವಿಭಾಗಗಳಲ್ಲೂ ಅದ್ಭುತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 46 ರನ್ಗಳಿಂದ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
185 ರನ್ಗಳ ಗೆಲುವಿನ ಗುರಿ ಪಡೆದ ಸ್ಟಿವ್ ಸ್ಮಿತ್ ಪಡೆ, ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೇವಲ 13 ರನ್ ಗಳಿಸಿ ಶಿಖರ್ ಧವನ್ ಪಡೆದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇನ್ನೊಂದೆಡೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ 34 (36 ಎಸೆತ) ರನ್ಗೆ ಔಟ್ ಆದರು.
ಬಳಿಕ ನಾಯಕ ಸ್ಮಿತ್ ಕೊಂಚ ಪ್ರತಿರೋಧ ತೋರಿದರೂ 24 ರನ್ ಆಗಿದ್ದಾಗ ಹೆಟ್ಮಾಯರ್ಗೆ ಕ್ಯಾಚ್ ನೀಡಿ ಹೊರನಡೆದರು. ನಂತರ ರಾಹುಲ್ ತೆವಾಟಿಯಾ (38) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ. ಅಂತಿಮವಾಗಿ ರಾಯಲ್ಸ್ 19.4 ಓವರ್ಗಳಲ್ಲಿ 138 ರನ್ಗೆ ಸರ್ವಪತನ ಕಾಣುವ ಮೂಲಕ 46 ರನ್ಗಳಿಂದ ಸೋಲುಂಡಿತು.
-
That's that from Sharjah. @DelhiCapitals register a 46-run win over #RR in Match 23 of #Dream11IPL.#RRvDC pic.twitter.com/jHll4x76yG
— IndianPremierLeague (@IPL) October 9, 2020 " class="align-text-top noRightClick twitterSection" data="
">That's that from Sharjah. @DelhiCapitals register a 46-run win over #RR in Match 23 of #Dream11IPL.#RRvDC pic.twitter.com/jHll4x76yG
— IndianPremierLeague (@IPL) October 9, 2020That's that from Sharjah. @DelhiCapitals register a 46-run win over #RR in Match 23 of #Dream11IPL.#RRvDC pic.twitter.com/jHll4x76yG
— IndianPremierLeague (@IPL) October 9, 2020
ಕ್ಯಾಪಿಟಲ್ಸ್ ಪರ ರಬಾಡಾ 3, ಅಶ್ವಿನ್ ಹಾಗೂ ಸ್ಟೋನಿಸ್ ತಲಾ 2, ನಾರ್ಟ್ಜಿ, ಹರ್ಷಲ್ ಪಟೇಲ್ ಹಾಗೂ ಅಕ್ಷರ್ ಪಟೇಲ್ ಒಂದೊಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯಮ ಕ್ರಮಾಂಕದಲ್ಲಿ ಸ್ಟೋನಿಸ್ 39, ಹೆಟ್ಮಾಯರ್ ಗಳಿಸಿದ 45 (24 ಎಸೆತ) ರನ್ಗಳ ನೆರವಿನಿಂದ ರಾಜಸ್ಥಾನ ತಂಡಕ್ಕೆ 185 ರನ್ಗಳ ಗೆಲುವಿನ ಗುರಿ ನೀಡಿತ್ತು.
ಆರಂಭಿಕರಾದ ಶಿಖರ್ ಧವನ್ 5, ಪೃಥ್ವಿ ಶಾ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಶ್ರೇಯಸ್ (22) ಉತ್ತಮ ಬ್ಯಾಟಿಂಗ್ ಮಾಡುವ ಭರವಸೆ ನೀಡಿದ್ರೂ ಕೂಡ ರನೌಟ್ಗೆ ಬಲಿಯಾದರು. ಇದರ ಬೆನ್ನಲ್ಲೇ ಪಂತ್ (5) ಕೂಡ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನುಳಿದಂತೆ ಹರ್ಷಲ್ ಪಟೇಲ್ 16, ಅಕ್ಸರ್ ಪಟೇಲ್ 17 ರನ್ ಬಾರಿಸಿ ತಂಡದ ಮೊತ್ತವನ್ನು 184 ರನ್ಗೆ ಕೊಂಡೊಯ್ದರು.
ರಾಜಸ್ಥಾನ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ, ಆಂಡ್ರೋ ಟೈ ಹಾಗೂ ರಾಹುಲ್ ತೆವಾಟಿಯಾ ತಲಾ 1 ವಿಕೆಟ್ ಗಳಿಸಿದರು.
ಈ ಜಯದ ಮೂಲಕ ಶ್ರೇಯಸ್ ಪಡೆಯು 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದಂತಾಗಿದೆ. ಒಟ್ಟಾರೆ 10 ಪಾಯಿಂಟ್ಗಳೊಂದಿಗೆ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದೆ.