ETV Bharat / sports

ಹಾರ್ದಿಕ್​ ಪಾಂಡ್ಯ ಆಲ್​ರೌಂಡ್​ ಆಟ... ಸಿಎಸ್​ಕೆ ಕಟ್ಟಿಹಾಕಿದ ಮುಂಬೈ - hardik pandya

ಚೆನ್ನೈ ಸೂಪರ್ ಕಿಂಗ್ಸ್ ನಾಗಾಲೋಟಕ್ಕೆ ತಡೆ ನೀಡಿದ ಮುಂಬೈ ಇಂಡಿಯನ್ಸ್. ಪ್ರಸಕ್ತ ಚುಟುಕು ಕ್ರಿಕೆಟ್​ ಲೀಗ್​ನಲ್ಲಿ ಧೋನಿ ಪಡೆಗೆ ಮೊದಲ ಸೋಲು. ಮುಂಬೈ ಪರ ಹಾರ್ದಿಕ್ ಪಾಂಡ್ಯ ಆಲ್​ರೌಂಡ್ ಕಮಾಲ್.

ಹಾರ್ದಿಕ್​ ಪಾಂಡ್ಯ ಆಲ್​ರೌಂಡ್​ ಆಟ
author img

By

Published : Apr 4, 2019, 2:05 AM IST

ಮುಂಬೈ: ಪ್ರಸಕ್ತ ಚುಟುಕು ಕ್ರಿಕೆಟ್​ ಲೀಗ್​ನಲ್ಲಿ ಸತತ ಮೂರು ಪಂದ್ಯ ಜಯಿಸಿ ಮುನ್ನಗ್ಗುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್​ ನಾಗಾಲೋಟಕ್ಕೆ ಮುಂಬೈ ಇಂಡಿಯನ್ಸ್ ಬ್ರೇಕ್ ಹಾಕಿದೆ.

ಐಪಿಎಲ್​ ಕ್ರಿಕೆಟ್ ಚಾಂಪಿಯನ್​ಶಿಪ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡದ ವಿರುದ್ಧ ಮುಂಬೈ ಟೀಂ 37 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮುಂಬೈ ಎರಡಲ್ಲಿ ಜಯಿಸಿದೆ.

ಮೊದಲು ಬ್ಯಾಟಿಂಗ್​ಗೆ ಇಳಿದ ಮುಂಬೈ, ಸೂರ್ಯಕುಮಾರ್ ಯಾದವ್ (59), ಕೃಣಾಲ್ ಪಾಂಡ್ಯ (42), ಹಾರ್ದಿಕ್ ಪಾಂಡ್ಯ (25) ಹಾಗೂ ಕಿರನ್ ಪೊಲಾರ್ಡ್ (17) ಬ್ಯಾಟಿಂಗ್​ ನೆರವಿನಿಂದ 170 ರನ್‌ಗಳ ಬಾರಿಸಿ ಸವಾಲಿನ ಮೊತ್ತ ದಾಖಲಿಸಿತು.

ನಂತರ ಗುರಿ ಬೆನ್ನಟ್ಟಿದ ಚೆನ್ನೈ ಆರಂಭದಲ್ಲಿ ಆಘಾತ ಅನುಭವಿಸಿತು. ಆರಂಭಿಕರಾದ ರಾಯುಡು (0) ಹಾಗೂ ಶೇನ್ ವಾಟ್ಸನ್ (5) ರನ್ ಗಳಿಸಿ ಪೆವಿಲಿಯನ್ ಸೇರಿದರು. ರೇಶ್ ರೈನಾ (16), ಕೇದಾರ್ ಜಾಧವ್ 58 ರನ್ ಬಾರಿಸಿದರು. ನಾಯಕ ಧೋನಿ 12 ಗಳಿಸಿ ನಿರಾಸೆ ಮೂಡಿಸಿದರು.

ಮುಂಬೈ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 133 ರನ್​ಗಳಷ್ಟೇ ಗಳಿಸಿ ಶರಣಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಮೂರು ವಿಕೆಟ್ ಕಿತ್ತ ಹಾರ್ದಿಕ್ ಪಾಂಡ್ಯ ಮುಂಬೈ ಗೆಲುವಿಗೆ ಕಾರಣರಾದರು.

ಇನ್ನು ಮುಂಬೈ ಪರ ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸಿದ ಲಸಿತ್ ಮಲಿಂಗಾ, ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಹಾಗೂ ಬೆರೆಂಡ್ರೊಫ್ 2 ವಿಕೆಟ್ ಕಬಳಿಸಿದರು.

Intro:Body:

Showman Hardik stars as Mumbai Indians humble CSK by 37 runs

ಹಾರ್ದಿಕ್​ ಪಾಂಡ್ಯ ಆಲ್​ರೌಂಡ್​ ಆಟ... ಸಿಎಸ್​ಕೆ ಕಟ್ಟಿಹಾಕಿದ ಮುಂಬೈ 

ಮುಂಬೈ: ಪ್ರಸಕ್ತ ಚುಟುಕು ಕ್ರಿಕೆಟ್​ ಲೀಗ್​ನಲ್ಲಿ ಸತತ ಮೂರು ಪಂದ್ಯ ಜಯಿಸಿ ಮುನ್ನಗ್ಗುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್​ ನಾಗಾಲೋಟಕ್ಕೆ ಮುಂಬೈ ಇಂಡಿಯನ್ಸ್ ಬ್ರೇಕ್ ಹಾಕಿದೆ. 

ಐಪಿಎಲ್​ ಕ್ರಿಕೆಟ್ ಚಾಂಪಿಯನ್​ಶಿಪ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡದ ವಿರುದ್ಧ ಮುಂಬೈ ಟೀಂ 37 ರನ್​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮುಂಬೈ ಎರಡಲ್ಲಿ ಜಯಿಸಿದೆ. 

ಮೊದಲು ಬ್ಯಾಟಿಂಗ್​ಗೆ ಇಳಿದ ಮುಂಬೈ, ಸೂರ್ಯಕುಮಾರ್ ಯಾದವ್ (59), ಕೃಣಾಲ್ ಪಾಂಡ್ಯ (42), ಹಾರ್ದಿಕ್ ಪಾಂಡ್ಯ (25) ಹಾಗೂ ಕಿರನ್ ಪೊಲಾರ್ಡ್ (17) ಬ್ಯಾಟಿಂಗ್​ ನೆರವಿನಿಂದ 170 ರನ್‌ಗಳ ಬಾರಿಸಿ ಸವಾಲಿನ ಮೊತ್ತ ದಾಖಲಿಸಿತು. 

ನಂತರ ಗುರಿ ಬೆನ್ನಟ್ಟಿದ ಚೆನ್ನೈ ಆರಂಭದಲ್ಲಿ ಆಘಾತ ಅನುಭವಿಸಿತು. ಆರಂಭಿಕರಾದ ರಾಯುಡು (0) ಹಾಗೂ ಶೇನ್ ವಾಟ್ಸನ್ (5) ರನ್ ಗಳಿಸಿ ಪೆವಿಲಿಯನ್ ಸೇರಿದರು. ರೇಶ್ ರೈನಾ (16), ಕೇದಾರ್ ಜಾಧವ್ 58 ರನ್ ಬಾರಿಸಿದರು. ನಾಯಕ ಧೋನಿ 12 ಗಳಿಸಿ ನಿರಾಸೆ ಮೂಡಿಸಿದರು. 

ಮುಂಬೈ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 133 ರನ್​ಗಳಷ್ಟೇ ಗಳಿಸಿ ಶರಣಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಮೂರು ವಿಕೆಟ್ ಕಿತ್ತ ಹಾರ್ದಿಕ್ ಪಾಂಡ್ಯ ಮುಂಬೈ ಗೆಲುವಿಗೆ ಕಾರಣರಾದರು.

ಇನ್ನು ಮುಂಬೈ ಪರ ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸಿದ ಲಸಿತ್ ಮಲಿಂಗಾ, ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಹಾಗೂ ಬೆರೆಂಡ್ರೊಫ್ 2 ವಿಕೆಟ್ ಕಬಳಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.