ETV Bharat / sports

ಇಂದಿನ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆಯತ್ತಾರಾ ಮಾಹಿ..?

ಈ ಬಾರಿಯ ಐಪಿಎಲ್​​ನಲ್ಲಿ ಆರು ಪಂದ್ಯಗಳಲ್ಲಿ ಐದು ಪಂದ್ಯವನ್ನು ಗೆದ್ದಿರುವ ಸಿಎಸ್​ಕೆ ಹತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಮಾಹಿ
author img

By

Published : Apr 11, 2019, 1:51 PM IST

ಜೈಪುರ: ಐಪಿಎಲ್​​ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್​ ತಂಡಗಳು ಮುಖಾಮುಖಿಯಾಗುತ್ತಿದ್ದು, ಸಿಎಸ್​ಕೆ ನಾಯಕ ವಿಶಿಷ್ಟ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಈ ಬಾರಿಯ ಐಪಿಎಲ್​​ನಲ್ಲಿ ಆರು ಪಂದ್ಯಗಳಲ್ಲಿ ಐದು ಪಂದ್ಯವನ್ನು ಗೆದ್ದಿರುವ ಸಿಎಸ್​ಕೆ ಹತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

12 ಆವೃತ್ತಿಯಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಾಯಕ ಎಂ.ಎಸ್​.ಧೋನಿ ಇಂದಿನ ಪಂದ್ಯ ಗೆದ್ದರೆ ನಾಯಕನಾಗಿ 100 ಪಂದ್ಯ ಗೆದ್ದ ದಾಖಲೆ ನಿರ್ಮಿಸಲಿದ್ದಾರೆ.

ಸದ್ಯ ನಾಯಕನಾಗಿ 165 ಪಂದ್ಯಗಳಿಂದ 99 ಪಂದ್ಯ ಗೆಲ್ಲಿಸಿಕೊಟ್ಟಿರುವ ಧೋನಿ, ಇಂದಿನ ಪಂದ್ಯವನ್ನೂ ಗೆಲ್ಲಿಸಿದ್ದಲ್ಲಿ ನೂತನ ದಾಖಲೆ ಬರೆಯಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಗೌತಮ್ ಗಂಭೀರ್ 129 ಪಂದ್ಯಗಳಲ್ಲಿ ನಾಯಕನಾಗಿ 71 ಪಂದ್ಯ ಗೆದ್ದಿದ್ದರು.

ಬ್ಯಾಟ್​ನಲ್ಲೂ ಈ ಬಾರಿ ಗಮನ ಸೆಳೆದಿರುವ ಧೋನಿ ಆರು ಪಂದ್ಯಗಳಿಂದ 156 ರನ್​ ಬಾರಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಅಜೇಯರಾಗುಳಿದು ತಂಡಕ್ಕೆ ನೆರವಾಗಿದ್ದಾರೆ.

ದಾಖಲೆಯ ಸನಿಹದಲ್ಲಿ ವ್ಯಾಟ್ಸನ್​, ಜಡೇಜಾ:

ಧೋನಿ ದಾಖಲೆಯ ನಡುವೆ ಸಿಎಸ್​​ಕೆ ಇನ್ನಿಬ್ಬರು ಪ್ರಮುಖ ಆಟಗಾರರಾದ ಶೇನ್ ವ್ಯಾಟ್ಸನ್​ ಹಾಗೂ ರವೀಂದ್ರ ಜಡೇಜಾ ಸಹ ದಾಖಲೆಯ ಸನಿಹದಲ್ಲಿದ್ದಾರೆ.

ಶೇನ್ ವ್ಯಾಟ್ಸನ್​ ಇನ್ನು 31 ರನ್​ ಬಾರಿಸಿದಲ್ಲಿ ಜೈಪುರದ ಸವಾಯ್ ಮಾನ್​ಸಿಂಗ್ ಮೈದಾನದಲ್ಲಿ ಸಾವಿರ ರನ್​ ಪೂರೈಸಿದ ಆಟಗಾರನಾಲಿದ್ದಾರೆ.

ಇತ್ತ ರವೀಂದ್ರ ಜಡೇಜಾ ಇನ್ನೆರಡು ವಿಕೆಟ್ ಕಬಳಿಸಿದಲ್ಲಿ ಟಿ-20 ಮಾದರಿಯಲ್ಲಿ ನೂರು ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಈ ಎಲ್ಲಾ ದಾಖಲೆಗಳು ಇಂದಿನ ಪಂದ್ಯದಲ್ಲಿ ದಾಖಲಾಗುವ ಸಾಧ್ಯತೆ ಹೆಚ್ಚಿದೆ.

Intro:Body:

ಇಂದಿನ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆಯತ್ತಾರಾ ಮಾಹಿ..?

ಜೈಪುರ: ಐಪಿಎಲ್​​ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್​ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್​ ತಂಡಗಳು ಮುಖಾಮುಖಿಯಾಗುತ್ತಿದ್ದು, ಸಿಎಸ್​ಕೆ ನಾಯಕ ವಿಶಿಷ್ಟ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಈ ಬಾರಿಯ ಐಪಿಎಲ್​​ನಲ್ಲಿ ಆರು ಪಂದ್ಯಗಳಲ್ಲಿ ಐದು ಪಂದ್ಯವನ್ನು ಗೆದ್ದಿರುವ ಸಿಎಸ್​ಕೆ ಹತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗಸ್ಥಾನದಲ್ಲಿದೆ.

12 ಆವೃತ್ತಿಯಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಾಯಕ ಎಂ.ಎಸ್​.ಧೋನಿ ಇಂದಿನ ಪಂದ್ಯ ಗೆದ್ದರೆ ನಾಯಕನಾಗಿ 100 ಪಂದ್ಯ ಗೆದ್ದ ದಾಖಲೆ ನಿರ್ಮಿಸಲಿದ್ದಾರೆ.

ಸದ್ಯ ನಾಯಕನಾಗಿ 165 ಪಂದ್ಯಗಳಿಂದ 99 ಪಂದ್ಯ ಗೆಲ್ಲಿಸಿಕೊಟ್ಟಿರುವ ಧೋನಿ, ಇಂದಿನ ಪಂದ್ಯವನ್ನೂ ಗೆಲ್ಲಿಸಿದ್ದಲ್ಲಿ ನೂತನ ದಾಖಲೆ ಬರೆಯಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಗೌತಮ್ ಗಂಭೀರ್ 129 ಪಂದ್ಯಗಳಲ್ಲಿ ನಾಯಕನಾಗಿ 71 ಪಂದ್ಯ ಗೆದ್ದಿದ್ದರು. 

ಬ್ಯಾಟ್​ನಲ್ಲೂ ಈ ಬಾರಿ ಗಮನ ಸೆಳೆದಿರುವ ಧೋನಿ ಆರು ಪಂದ್ಯಗಳಿಂದ 156 ರನ್​ ಬಾರಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಅಜೇಯರಾಗುಳಿದು ತಂಡಕ್ಕೆ ನೆರವಾಗಿದ್ದಾರೆ.

ದಾಖಲೆಯ ಸನಿಹದಲ್ಲಿ ವ್ಯಾಟ್ಸನ್​, ಜಡೇಜಾ:

ಧೋನಿ ದಾಖಲೆಯ ನಡುವೆ ಸಿಎಸ್​​ಕೆ ಇನ್ನಿಬ್ಬರು ಪ್ರಮುಖ ಆಟಗಾರರಾದ ಶೇನ್ ವ್ಯಾಟ್ಸನ್​ ಹಾಗೂ ರವೀಂದ್ರ ಜಡೇಜಾ ಸಹ ದಾಖಲೆಯ ಸನಿಹದಲ್ಲಿದ್ದಾರೆ.

ಶೇನ್ ವ್ಯಾಟ್ಸನ್​ ಇನ್ನು 31 ರನ್​ ಬಾರಿಸಿದಲ್ಲಿ ಜೈಪುರದ ಸವಾಯ್ ಮಾನ್​ಸಿಂಗ್ ಮೈದಾನದಲ್ಲಿ ಸಾವಿರ ರನ್​ ಪೂರೈಸಿದ ಆಟಗಾರನಾಲಿದ್ದಾರೆ.

ಇತ್ತ ರವೀಂದ್ರ ಜಡೇಜಾ ಇನ್ನೆರಡು ವಿಕೆಟ್ ಕಬಳಿಸಿದಲ್ಲಿ ಟಿ-20 ಮಾದರಿಯಲ್ಲಿ ನೂರು ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಈ ಎಲ್ಲಾ ದಾಖಲೆಗಳು ಇಂದಿನ ಪಂದ್ಯದಲ್ಲಿ ದಾಖಲಾಗುವ ಸಾಧ್ಯತೆ ಹೆಚ್ಚಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.