ದುಬೈ: ಈ ಬಾರಿ ಯುಎಇಯಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಐಪಿಎಲ್ 2020 ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಕಾಳಗ ನಡೆಯಲಿದೆ.
-
IPL 13: Mumbai Indians to lock horns with CSK in tournament opener
— ANI Digital (@ani_digital) September 6, 2020 " class="align-text-top noRightClick twitterSection" data="
Read @ANI Story | https://t.co/5WI1kF8uJ4 pic.twitter.com/RoVURAF9jz
">IPL 13: Mumbai Indians to lock horns with CSK in tournament opener
— ANI Digital (@ani_digital) September 6, 2020
Read @ANI Story | https://t.co/5WI1kF8uJ4 pic.twitter.com/RoVURAF9jzIPL 13: Mumbai Indians to lock horns with CSK in tournament opener
— ANI Digital (@ani_digital) September 6, 2020
Read @ANI Story | https://t.co/5WI1kF8uJ4 pic.twitter.com/RoVURAF9jz
ಅಬುಧಾಬಿಯಲ್ಲಿ ಮೊದಲ ಪಂದ್ಯ ನಡೆದ ನಂತರ 2ನೇ ಪಂದ್ಯ ದುಬೈಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 20, ಭಾನುವಾರ ನಡೆಯುವ ಈ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಸೋಮವಾರ ಸೆಪ್ಟೆಂಬರ್ 21ರಂದು ಕನ್ನಡಿಗರಿಗೆ ಹಬ್ಬ. ಯಾಕೆಂದರೆ ತಮ್ಮ ನೆಚ್ಚಿನ ತಂಡದ ಆಟ ನೋಡುವ ಭಾಗ್ಯ ಕನ್ನಡಿಗರಿಗೆ ಸಿಗಲಿದೆ. ಅಂದು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಸೆಣಸಲಿದೆ.
-
Indian Premier League (IPL) Governing Council releases the complete fixtures for the league stage of the Dream11 IPL 2020 to be held in UAE. https://t.co/7FRfkI6Cbg pic.twitter.com/iM4HTBpMNo
— ANI (@ANI) September 6, 2020 " class="align-text-top noRightClick twitterSection" data="
">Indian Premier League (IPL) Governing Council releases the complete fixtures for the league stage of the Dream11 IPL 2020 to be held in UAE. https://t.co/7FRfkI6Cbg pic.twitter.com/iM4HTBpMNo
— ANI (@ANI) September 6, 2020Indian Premier League (IPL) Governing Council releases the complete fixtures for the league stage of the Dream11 IPL 2020 to be held in UAE. https://t.co/7FRfkI6Cbg pic.twitter.com/iM4HTBpMNo
— ANI (@ANI) September 6, 2020
ಮಂಗಳವಾರ ಐಪಿಎಲ್ ಪಂದ್ಯಗಳ ಆತಿಥ್ಯವನ್ನು ಶಾರ್ಜಾ ವಹಿಸಿಕೊಳ್ಳಲಿದೆ. ಸೆಪ್ಟೆಂಬರ್ 22ರಂದು ನಡೆಯುವ ಸೆಣಸಾಟದಲ್ಲಿ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಅದೃಷ್ಟ ಪರೀಕ್ಷಿಸಲಿದೆ.ಮೊದಲ ಪಂದ್ಯ (ಯುಎಇಯಲ್ಲಿ ಅಪರಾಹ್ನ 2 ಗಂಟೆಗೆ) ಭಾರತೀಯ ಕಾಲಮಾನದ ಪ್ರಕಾರ ಅಪರಾಹ್ನ 3:30ಕ್ಕೆ ಆರಂಭವಾಗಲಿದೆ. ಸಂಜೆ ನಡೆಯುವ ಎಲ್ಲಾ ಮ್ಯಾಚ್ಗಳು ಭಾರತೀಯ ಕಾಲಮಾನದ ಪ್ರಕಾರ 7:30ಕ್ಕೆ ಶುರುವಾಗಲಿವೆ. ಒಟ್ಟು 24 ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಅಬುಧಾಬಿಯಲ್ಲಿ 20 ಮತ್ತು ಶಾರ್ಜಾ 12 ಮ್ಯಾಚ್ಗಳಿಗೆ ಆತಿಥ್ಯ ವಹಿಸಲಿದೆ.
ಪ್ಲೇಆಫ್ ಹಂತದ ಪಂದ್ಯಗಳು ಎಲ್ಲಿ ಮತ್ತು ಯಾವಾಗ ನಡೆಯಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಐಪಿಎಲ್ 2020 ಫೈನಲ್ ಪಂದ್ಯ ಇದೇ ಮೊದಲ ಬಾರಿಗೆ ವೀಕ್ ಡೇ ಮಂಗಳವಾರ (ನ.10) ನಡೆಯಲಿದೆ ಆದ್ರೆ ಎಲ್ಲಿ ಎಂಬುದು ನಿರ್ಧಾರವಾಗಿಲ್ಲ.