ETV Bharat / sports

ಐಪಿಎಲ್​ಗೆ ಭರ್ಜರಿ ಕಮ್​ಬ್ಯಾಕ್​.. ​ಮೊದಲ ಪಂದ್ಯದಲ್ಲೇ ವಾರ್ನರ್ ದಾಖಲೆ

author img

By

Published : Mar 25, 2019, 12:30 PM IST

Updated : Mar 25, 2019, 3:43 PM IST

ಆಸ್ಟ್ರೇಲಿಯಾದ ಡೆವಿಡ್​ ವಾರ್ನರ್​​ 12ನೇ ಐಪಿಎಲ್​ ಟೂರ್ನಿಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ದಾಖಲೆ ಬರೆದು ಮಿಂಚಿದರು.

ಡೆವಿಡ್​ ವಾರ್ನರ್

ಕೋಲ್ಕತಾ : ಬಾಲ್​ ಟ್ಯಾಂಪರಿಂಗ್ ಸುಳಿಗೆ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಆಸೀಸ್‌ನ ಡೇವಿಡ್‌ ವಾರ್ನರ್‌ ಕಳೆದ ಐಪಿಎಲ್‌ನಿಂದ ಹೊರಗುಳಿದಿದ್ದರು. ಆದರೆ, ಈಗ ಹೈದರಾಬಾದ್‌ ಸನ್‌ರೈಸರ್ಸ್‌ಗೆ ಮತ್ತೆ ಕಮ್‌ಬ್ಯಾಕ್‌ ಮಾಡಿರುವ ವಾರ್ನರ್‌, ತಾವು ಆಡಿದ ಮೊದಲ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ.

ನಿನ್ನೆ ಕೆಕೆಆರ್​ ವಿರುದ್ಧ ನಡೆದ 12ನೇ ಐಪಿಎಲ್​ನ 2ನೇ ಪಂದ್ಯದಲ್ಲಿ ಡೇವಿಡ್‌ ವಾರ್ನರ್ ಸನ್‌ರೈಸರ್ಸ್‌ ಪರ ಆರಂಭಿಕ ಬ್ಯಾಟ್ಸ್‌ಮೆನಾಗಿ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಅಷ್ಟೇ ಅಲ್ಲ,ಭರ್ಜರಿಯಾಗಿ ಅರ್ಧಶತಕ ಗಳಿಸಿದ್ದರು. 53 ಎಸೆತಗಳಲ್ಲಿ 85 ರನ್​ ಸಿಡಿಸಿದ್ದ ಅವರು ಹೈದರಾಬಾದ್​ಗೆ ಭರ್ಜರಿ ಆರಂಭ ಒದಗಿಸಿ ಬೃಹತ್​ ಮೊತ್ತಕ್ಕೆ ಕಾರಣರಾಗಿದ್ದರು. ಆದರೆ, 181 ರನ್​ ಗಳಿಸಿದ್ದರೂ ಕೂಡ ಕೆಕೆಆರ್​ ಈ ಸ್ಕೋರ್​ ಚೇಸ್​ ಮಾಡಿ ಗೆಲುವಿನ ನಗೆ ಬೀರಿತು.

ಹೆಚ್ಚು ಅರ್ಧಶತಕ ಸಿಡಿಸಿ ರೆಕಾರ್ಡ್:

85 ರನ್​ ಸಿಡಿಸಿದ್ದ ಡೇವಿಡ್ ವಾರ್ನರ್‌ ಐಪಿಎಲ್​ ಟೂರ್ನಿಯಲ್ಲಿ ಅತೀ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. 37ನೇ ಅರ್ಧಶತಕ ಭಾರಿಸಿ ಗೌತಮ್​ ಗಂಭೀರ್​ ದಾಖಲೆಯನ್ನು ಅಳಿಸಿಹಾಕಿದರು. ಗಂಭೀರ್​​ 36 ಫಿಫ್ಟಿ ಗಳಿಸಿರುವ ಸಾಧನೆ ಮಾಡಿದ್ದರು. ಸುರೇಶ್​ ರೈನಾ 35, ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ತಲಾ 34 ಅರ್ಧಶತಕ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.

Intro:Body:Conclusion:
Last Updated : Mar 25, 2019, 3:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.