ETV Bharat / sports

ಯುವ ಆಟಗಾರರ ಉತ್ತಮ ಪ್ರದರ್ಶನದಿಂದ ಟೀಂ ಇಂಡಿಯಾ ಮತ್ತಷ್ಟು ಬಲಿಷ್ಠ.. ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ - ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌

ತಂಡಕ್ಕೆ ಸಾಕಷ್ಟು ಯುವ ಬ್ಯಾಟರ್‌ಗಳು ಕೂಡ ಬೇಕಾಗಿದ್ದಾರೆ. ಇಂದಿನ ಪಂದ್ಯದಂತಹ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮಾಡಲು ಅವರಿಗೆ ಅವಕಾಶವನ್ನು ನೀಡಬೇಕು. ಇದು ಒಂದು ಉತ್ತಮ ಅವಕಾಶ ಹಾಗೂ ಆಟಗಾರರನ್ನು ಬಲಿಷ್ಠವಾಗಿಸಲು ಸಾಧ್ಯವಾಗುತ್ತದೆ. ಇದು ನಮ್ಮ ಆಟಗಾರರ ಅಭಿವೃದ್ಧಿಗೆ ಸಹಾಯ ಮಾಡಲು ಉತ್ತಮವಾಗಿದೆ ಎಂದು ದ್ರಾವಿಡ್‌ ಹೇಳಿದ್ದಾರೆ..

Young guys performing gives us options, helps us become stronger: Dravid
ಯುವ ಆಟಗಾರರ ಉತ್ತಮ ಪ್ರದರ್ಶನದಿಂದ ಟೀಂ ಇಂಡಿಯಾ ಮತ್ತಷ್ಟು ಬಲಿಷ್ಠ - ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌
author img

By

Published : Dec 6, 2021, 2:12 PM IST

ಮುಂಬೈ : ಯುವ ಆಟಗಾರರು ತಮ್ಮ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಇದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬಲಿಷ್ಠವಾಗಲು ಸಹಾಯ ಮಾಡುತ್ತದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ಹಾಗೂ ಜಯಂತ್ ಯಾದವ್ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ಸಾಧನೆಯ ನೆರವಿನಿಂದ ಭಾರತವು ಕಿವೀಸ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 372 ರನ್‌ಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿದೆ.

ಪಂದ್ಯದ ಬಳಿಕ ಮಾತನಾಡಿ ರಾಹುಲ್‌ ದ್ರಾವಿಡ್‌, ಟೆಸ್ಟ್‌ ಸರಣಿಯನ್ನು ಗೆಲುವಿನೊಂದಿಗೆ ಮುಗಿಸುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಕಾನ್ಪುರದಲ್ಲಿ ಗೆಲುವಿನ ಸನಿಹಕ್ಕೆ ಬರಲಾಗಿತ್ತು. ಕೊನೆಯ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಯಿತು. ಈ ಫಲಿತಾಂಶವು ಏಕಪಕ್ಷೀಯವಾಗಿತ್ತಾದರೂ ಸರಣಿ ಗೆಲುವಿಗಾಗಿ ನಾವು ಕೆಲಸ ಮಾಡಿದ್ದೇವೆ ಎಂದಿದ್ದಾರೆ.

ಮಯಾಂಕ್‌, ಜಯಂತ್ ಉತ್ತಮ ಕಾಣಿಕೆ..

ಮತ್ತೆ ಹೋರಾಡಬೇಕಾದ ಹಂತಗಳಿವೆ. ತಂಡಕ್ಕೆ ಉತ್ತಮ ಕಾಣಿಕೆ ನೀಡುವುದರ ಮೂಲಕ ಯುವ ಪ್ರತಿಭೆಗಳು ಅವಕಾಶಗಳನ್ನು ಪಡೆದುಕೊಳ್ಳುವುದನ್ನು ನೋಡಲು ಖುಷಿಯಾಗುತ್ತಿದೆ. ನಾವು ಕೆಲವು ಹಿರಿಯ ಆಟಗಾರರನ್ನು ಕಳೆದುಕೊಂಡಿದ್ದೇವೆ. ಅವಕಾಶ ಪಡೆದ ಯುವ ಆಟಗಾರರು ಕೊಡುಗೆ ನೀಡಿದ್ದಾರೆ.

ಬ್ಯಾಟರ್‌ ಮಯಾಂಕ್‌ ಅಗರ್ವಾಲ್‌, ಸ್ಪಿನ್ನರ್‌ ಜಯಂತ್ ಉತ್ತಮ ಕಾಣಿಕೆ ನೀಡಿದ್ದಾರೆ. ಹೆಚ್ಚಿನ ಅವಕಾಶಗಳನ್ನು ಪಡೆಯದ ಶ್ರೇಯಸ್, ಸಿರಾಜ್, ಅಕ್ಷರ್, ಅವರು ಚೆಂಡಿನೊಂದಿಗೆ ಏನು ಮಾಡಬಹುದು ಎಂಬುದರ ಜೊತೆಗೆ ಬ್ಯಾಟ್‌ನೊಂದಿಗೂ ಇವರ ಬೆಳವಣಿಗೆ ಅದ್ಭುತವಾಗಿದೆ ಎಂದು ಟೀಂ ಇಂಡಿಯಾ ಆಟಗಾರರ ಸಾಧನೆಯನ್ನು ಮುಖ್ಯ ಕೋಚ್‌ ಕೊಂಡಾಡಿದ್ದಾರೆ.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದಿದೆ. ಇದೀಗ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾಕ್ಕೆ ಮೂರು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳಿಗಾಗಿ ಡಿಸೆಂಬರ್ 26ರಿಂದ ಪ್ರಾರಂಭವಾಗಲಿದೆ. ಇದು ನಮಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ, ನಾವು ಪ್ರಬಲ ತಂಡವಾಗಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ತಂಡಕ್ಕೆ ಸಾಕಷ್ಟು ಯುವ ಬ್ಯಾಟರ್‌ಗಳು ಕೂಡ ಬೇಕಾಗಿದ್ದಾರೆ. ಇಂದಿನ ಪಂದ್ಯದಂತಹ ಪರಿಸ್ಥಿತಿಗಳಲ್ಲಿ ಬ್ಯಾಟಿಂಗ್ ಮಾಡಲು ಅವರಿಗೆ ಅವಕಾಶವನ್ನು ನೀಡಬೇಕು. ಇದು ಒಂದು ಉತ್ತಮ ಅವಕಾಶ ಹಾಗೂ ಆಟಗಾರರನ್ನು ಬಲಿಷ್ಠವಾಗಿಸಲು ಸಾಧ್ಯವಾಗುತ್ತದೆ. ಇದು ನಮ್ಮ ಆಟಗಾರರ ಅಭಿವೃದ್ಧಿಗೆ ಸಹಾಯ ಮಾಡಲು ಉತ್ತಮವಾಗಿದೆ ಎಂದು ದ್ರಾವಿಡ್‌ ಹೇಳಿದ್ದಾರೆ.

ಇದನ್ನೂ ಓದಿ: ಕಿವೀಸ್‌ ವಿರುದ್ಧ ಟೆಸ್ಟ್‌ ಸರಣಿ ಗೆದ್ದು ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ಕೊಹ್ಲಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.