ETV Bharat / sports

ವಯಸ್ಸು ಹೆಚ್ಚಿದ್ರೇನಂತೆ ಉತ್ಸಾಹ ಕುಂದಿಲ್ಲ ; ಏಕದಿನ ವಿಶ್ವಕಪ್​ ಆಡುವ ಬಗ್ಗೆ ರಾಸ್‌ ಟೇಲರ್‌ ವಿಶ್ವಾಸ

author img

By

Published : Nov 24, 2020, 9:28 PM IST

2023ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ನಿವೃತ್ತಿಯ ಅಂಚಿನಲ್ಲಿರುವ 36 ವರ್ಷದ ರಾಸ್‌ ಟೇಲರ್‌ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿವುದು ಕಷ್ಟ. ಆದರೆ, ನನ್ನಲ್ಲಿನ ಕುಂದದ ಉತ್ಸಾಹ ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿಸಬಲ್ಲದು..

World Cup in 2023 definitely on radar, says Ross Taylor
ರಾಸ್ ಟೇಲರ್

ಆಕ್ಲೆಂಡ್ : ನ್ಯೂಜಿಲೆಂಡ್‌ ತಂಡದ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಮುಂಬರುವ (2023ರ) ಏಕದಿನ ವಿಶ್ವಕಪ್​ ಬಗ್ಗೆ ತಮ್ಮಲ್ಲಿರುವ ಅನುಮಾನ ಹಾಗೂ ಉತ್ಸಾಗಳನ್ನು ಹೊರ ಹಾಕಿದ್ದಾರೆ. ಕ್ರಿಕೆಟ್​ ಜಗತ್ತಿನ ತಮ್ಮ ನಿವೃತ್ತಿಯ ಹೊಸ್ತಿಲಲ್ಲಿರುವ ರಾಸ್‌ ಟೇಲರ್‌, ಕೋವಿಡ್​-19 ಬಳಿಕ ತಮ್ಮ ವೃತ್ತಿಜೀವನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಆಶಯವನ್ನು ಸಹ ಹೊರ ಹಾಕಿದ್ದಾರೆ.

ಇದನ್ನೂ ಓದಿ: 'ಕಣಿವೆಯಲ್ಲಿ ಗನ್​ ಬದಲಾಗಿ ಪೆನ್​ ಸಿಗಬೇಕು'; ಶಹನಾವಾಜ್ ಹುಸೇನ್

ಭಾರತದಲ್ಲಿ ನಡೆಯಲಿರುವ ಮುಂಬರುವ (2023ರ) ವಿಶ್ವಕಪ್​ಗೆ ಇನ್ನೂ ಮೂರು ವರ್ಷಗಳ ಕಾಲ ಬಾಕಿ ಇದೆ. ಇಷ್ಟು ವರ್ಷಗಳ ಕಾಲ ಮುಂದುವರಿವುದೆಂದರೆ ಇದೊಂಥರ ಸವಾಲಿನ ಕೆಲಸವೇ.. ಆದರೆ, ನಾನೋರ್ವ ಉತ್ಸಾಹಿ ಕ್ರಿಕೆಟ​ರ್​ ಆಗಿದ್ದರಿಂದ ಆಡಬಲ್ಲೆ ಎಂದು ಖಂಡಿತವಾಗಿಯೂ ಹೇಳಬಲ್ಲೆ ಎಂದಿದ್ದಾರೆ.

ಕ್ರಿಕೆಟರ್​ ಆಗಿ ಹಲವು ಸಣ್ಣ ಹಾಗೂ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕಿದೆ. ಇದೇ ಉತ್ಸಾಹ ಬರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನಾಡಿಸಬಹುದು. ನನಗೆ ವಯಸ್ಸು ಸಹ ಕಡಿಮೆಯಾಗುತ್ತಿಲ್ಲ. ಖಂಡಿತವಾಗಿ ವಿಶ್ವಕಪ್‌ ಆಡಬಲ್ಲೆ ಎಂದು ಹೇಳುವುದು ಅಷ್ಟು ಸುಲಭವಲ್ಲ. ಆದರೆ, ವಿಶ್ವಕಪ್‌ ಆಡಬೇಕೆನ್ನುವುದು ನನ್ನ ಗುರಿಗಳಲ್ಲಿ ಒಂದು ಎಂದಿದ್ದಾರೆ.

ನವೆಂಬರ್ 27ರಿಂದ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಟಿ-20 ಟೂರ್ನಿಗಳು ಪ್ರಾರಂಭವಾಗಲಿದ್ದು, ಇದಕ್ಕೂ ಮುನ್ನ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಮುಂಬರುವ ವೃತ್ತಿ ಜೀವನ ಹೇಗಿರಲಿದೆ ಎಂಬುದರ ಬಗ್ಗೆ ಹಂಚಿಕೊಂಡರು.

2023ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ನಿವೃತ್ತಿಯ ಅಂಚಿನಲ್ಲಿರುವ 36 ವರ್ಷದ ರಾಸ್‌ ಟೇಲರ್‌ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿವುದು ಕಷ್ಟ. ಆದರೆ, ನನ್ನಲ್ಲಿನ ಕುಂದದ ಉತ್ಸಾಹ ಮುಂಬರುವ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಿಸಬಲ್ಲದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡೇನಿಯಲ್ ವೆಟ್ಟೋರಿ ಕಿವೀಸ್‌ ಪರ ಒಟ್ಟು 437 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ದಾಖಲೆ ಇದೆ. ಇನ್ನು ಕೇವಲ ಐದು ಪಂದ್ಯಗಳನ್ನು ಆಡಿದರೆ ಈ ದಾಖಲೆ ತಮ್ಮ ಹೆಸರಿನಲ್ಲಿ ಬರೆದುಕೊಳ್ಳುತ್ತಾರೆ.

ಇದನ್ನೂ ಓದಿ: ಮೂರು ಮಾದರಿಯ ಕ್ರಿಕೆಟ್‍ನಲ್ಲಿ ದಶಕದ ಆಟಗಾರ ಪ್ರಶಸ್ತಿಗಳ ಪಟ್ಟಿಯಲ್ಲಿ ಕೊಹ್ಲಿಗೆ ಅಗ್ರಸ್ಥಾನ!

2006ರಲ್ಲಿ ನೇಪಿಯರ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಾರಾಷ್ಟ್ರೀಯ ಚೊಚ್ಚಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಕ್ರಿಕೆಟ್​ ಕೆರಿಯರ್​ ಆರಂಭಿಸಿರುವ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌, 101 ಟೆಸ್ಟ್, 232 ಏಕದಿನ ಮತ್ತು 100 ಟಿ-20-ಪಂದ್ಯಗಳನ್ನು ಆಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.