ETV Bharat / sports

ಭಾರತದಲ್ಲಿ ರೂಟ್​, ಬಟ್ಲರ್​, ಸ್ಟೋಕ್ಸ್​​​ ಉತ್ತಮ ಪ್ರದರ್ಶನ ನೀಡುವುದು ಅಷ್ಟು ಸುಲಭವಲ್ಲ: ಕುಲದೀಪ್​ ಯಾದವ್ - Chinaman bowler Kuldeep Yadav

ಸೀಮಿತ ಓವರ್​​ಗಳ ಕ್ರಿಕೆಟ್ ಆಡುವಾಗ ಆತ್ಮವಿಶ್ವಾಸ ಸ್ವಯಂ ಆಗಿಯೇ ಪುಟಿದೇಳುತ್ತದೆ. ಒಂದು ವೇಳೆ ನಾನು ಮೊದಲ ಪಂದ್ಯವನ್ನು ಆಡಿದರೆ ಮುಂದಿನ ಪಂದ್ಯದಲ್ಲಿ ಉತ್ತಮ ಸ್ಥಾನ ಪಡೆಯುತ್ತೇನೆ. ಮಾನಸಿಕವಾಗಿ ನಿರಾಳವಾಗಿದ್ದು, ಆತ್ಮವಿಶ್ವಾಸದ ಮಟ್ಟವು ಉತ್ತುಂಗಕ್ಕೇರಿದೆ ಎಂದು ಕುಲದೀಪ್​ ಯಾದವ್ ಹೇಳಿದರು.

Kuldeep
ಕುಲದೀಪ್​ ಯಾದವ್
author img

By

Published : Feb 3, 2021, 6:16 PM IST

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್​ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಉತ್ತಮ ಲಯದಲ್ಲಿರುವ ಜೋ ರೂಟ್​, ಜೋಸ್​ ಬಟ್ಲರ್ ಮತ್ತು ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಅವರ ಪ್ರದರ್ಶನವು ಅಷ್ಟು ಸುಲಭವಾಗಿರುವುದಿಲ್ಲ ಎಂದು ಚೈನಾಮ್ಯಾನ್​​ ಖ್ಯಾತಿಯ​ ಬೌಲರ್​ ಕುಲದೀಪ್​ ಯಾದವ್​ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಆಡಿದ ಎರಡೂ ಟೆಸ್ಟ್​ ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್​ ಸರಣಿ ವಶಪಡಿಸಿಕೊಂಡಿತ್ತು. ಈ ಸರಣಿಯಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ 100ಕ್ಕೂ ಅಧಿಕ ಸರಾಸರಿಯಲ್ಲಿ 426 ರನ್ (ಒಂದು ಶತಕ, ಒಂದು ದ್ವಿಶತಕ ಸೇರಿದೆ) ಗಳಿಸಿದ್ದರು. ಬಟ್ಲರ್ ಆಡಿದ ಮೂರು ಇನ್ನಿಂಗ್ಸ್​​​ಗಳಲ್ಲಿ 131 ರನ್ ಗಳಿಸಿದ್ದರು. ಬೆನ್ ಸ್ಟೋಕ್ಸ್ ತಂಡದಲ್ಲಿ ಇರಲಿಲ್ಲ.

ಇಂಗ್ಲೆಂಡ್​ ತಂಡ ಶ್ರೀಲಂಕಾದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿತ್ತು. ಅವರು ಸ್ಪಿನ್​ ಬೌಲಿಂಗ್​ ಎದುರಿಸಿದ ರೀತಿ ಪರಿಣಾಮಕಾರಿಯಾದದ್ದು. ಹಾಗೆಯೇ ಅವರು ಉತ್ತಮ ಲಯದಲ್ಲಿದ್ದಾರೆ. ಬಹಳ ದಿನಗಳ ನಂತರ ಆಡುತ್ತಿದ್ದೇನೆ. ಇದು ನನಗೆ ಸ್ವಲ್ಪ ಸವಾಲು ಎನಿಸಿದೆ. ಅಲ್ಲದೆ ಅವರು ಶ್ರೀಲಂಕಾದೊಂದಿಗೆ ಏಕದಿನ ಪಂದ್ಯದಂತೆ ಬ್ಯಾಟ್​ ಬೀಸಿದರು. ಹೀಗಾಗಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಅವುಗಳನ್ನು ಅವರ ಮೇಲೆ ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಬಹಳ ಸಮಯದ ನಂತರ ಅವರು ಭಾರತದಲ್ಲಿ (ಟೆಸ್ಟ್ ಕ್ರಿಕೆಟ್‌ನಲ್ಲಿ) ಆಡುತ್ತಿದ್ದಾರೆ ಎಂಬುದನ್ನು ಪರಿಗಣಿಸಿ ಇಲ್ಲಿ ಪ್ರದರ್ಶನ ನೀಡುವುದು ಅಷ್ಟು ಸುಲಭವಲ್ಲ. ಅದೂ ಸಹ ಮುಖ್ಯ. ಬೌಲರ್​​ಗಳನ್ನು ಎದುರಿಸುವ, ನಿಯಂತ್ರಿಸುವ ಮತ್ತು ಒತ್ತಡದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುವ ರೂಟ್​, ಬಟ್ಲರ್, ಸ್ಟೋಕ್ಸ್​ ಅವರಿಗೆ ಇಲ್ಲಿ ಕಷ್ಟಕರವಾಗಲಿದೆ ಎಂದರು.

2016ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್​ ತಂಡವು 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 0-4 ಅಂತರದಲ್ಲಿ ಸೋಲು ಕಂಡಿತ್ತು. 2019ರ ನಂತರ ಕುಲದೀಪ್​ ಯಾದವ್​ ಕೂಡ ಭಾರತದಲ್ಲಿ ಒಂದು ಟೆಸ್ಟ್​ ಪಂದ್ಯ ಆಡಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್​ ಸರಣಿಯಲ್ಲಿ ಕುಲದೀಪ್​ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಆಡಿರಲಿಲ್ಲ. ಆದರೆ ಭಾರತ 2-1 ಅಂತರದಲ್ಲಿ ಸರಣಿ ಗೆದ್ದು ದಾಖಲೆ ಬರೆದಿತ್ತು.

ಜೂನ್​ನಲ್ಲಿ ಲಂಡನ್​​ನ ಲಾರ್ಡ್ಸ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಭಾರತ ಈ ಸರಣಿಯಲ್ಲಿ ಗೆಲ್ಲುವುದು ಅತೀ ಮುಖ್ಯವಾಗಿದೆ. ಇಂಗ್ಲೆಂಡ್‌ಅನ್ನು 2-0, 2-1, 3-0, 3-1 ಅಥವಾ 4-0 ಅಂತರದಲ್ಲಿ ಭಾರತ ಸೋಲಿಸಿದರೆ ಮಾತ್ರ ಫೈನಲ್​​​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೆಣಸಾಟ ನಡೆಸಲಿದೆ. 3-0, 3-1, 4-0 ಅಂತರದಲ್ಲಿ ಜಯಿಸಿದರೆ ಇಂಗ್ಲೆಂಡ್​ ಕೂಡ ಫೈನಲ್​​ಗೆ ಹೋಗಲಿದೆ. ದಕ್ಷಿಣ ಆಫ್ರಿಕಾಕ್ಕೆ ಆಸ್ಟ್ರೇಲಿಯಾದ ಪ್ರವಾಸವನ್ನು ಮುಂದೂಡಿದ ನಂತರ ನ್ಯೂಜಿಲೆಂಡ್ ಫೈನಲ್‌ಗೆ ಸ್ಥಾನ ಗಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.