ಸೇಂಟ್ ಲೂಸಿಯಾ: ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ಕ್ರಿಕೆಟ್ ಮಾಂತ್ರಿಕ ಕ್ರಿಸ್ ಗೇಲ್ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಕ್ರಿಸ್ ಗೇಲ್ 38 ಎಸೆತಗಳಲ್ಲಿ 67 ರನ್‌ಗಳ ಬಿರುಸಿನ ಆಟವಾಡಿ ಟಿ20 ಇತಿಹಾಸದಲ್ಲೇ 14 ಸಾವಿರ ರನ್ ಗಳಿಸಿರುವ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾರ್ಚ್ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 100 ರನ್ ಗಳಿಸಿದ ನಂತರ ಕ್ರಿಸ್ ಗೇಲ್ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ ಬಾರಿಗೆ 50 ರನ್ ಗಡಿ ದಾಟಿದರು. ಗೇಲ್ ಅವರ ಅದ್ಭುತ ಆಟದಿಂದಾಗಿ ವೆಸ್ಟ್ ಇಂಡೀಸ್ 6 ವಿಕೆಟ್ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.
-
Chris Gayle falls to Riley Meredith, but not before a trademark fifty, passing 14,000 T20 runs in the process!#WIvAUS | https://t.co/gtzSxh0BjZ pic.twitter.com/VY1N9XPczT
— ICC (@ICC) July 13, 2021 " class="align-text-top noRightClick twitterSection" data="
">Chris Gayle falls to Riley Meredith, but not before a trademark fifty, passing 14,000 T20 runs in the process!#WIvAUS | https://t.co/gtzSxh0BjZ pic.twitter.com/VY1N9XPczT
— ICC (@ICC) July 13, 2021Chris Gayle falls to Riley Meredith, but not before a trademark fifty, passing 14,000 T20 runs in the process!#WIvAUS | https://t.co/gtzSxh0BjZ pic.twitter.com/VY1N9XPczT
— ICC (@ICC) July 13, 2021
41 ವರ್ಷದ ಕ್ರಿಸ್ ಗೇಲ್ ಈಗ 431 ಟಿ 20 ಪಂದ್ಯಗಳಲ್ಲಿ 37.63 ಸರಾಸರಿಯಲ್ಲಿ 14,038 ರನ್ ಗಳಿಸಿದ್ದಾರೆ. ಗೇಲ್ ಇಲ್ಲಿಯವರೆಗೆ 22 ಶತಕ ಮತ್ತು 87 ಅರ್ಧಶತಕಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್ 545 ಪಂದ್ಯಗಳಲ್ಲಿ 10,836 ರನ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶೋಯೆಬ್ ಮಲಿಕ್ ಇದುವರೆಗೆ 425 ಟಿ 20 ಪಂದ್ಯಗಳಲ್ಲಿ 10,741 ರನ್ ಗಳಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್. ಕೊಹ್ಲಿ ಇದುವರೆಗೆ 310 ಟಿ20ಗಳಲ್ಲಿ ಐದು ಶತಕಗಳು ಮತ್ತು 72 ಅರ್ಧಶತಕಗಳನ್ನು ಒಳಗೊಂಡಂತೆ 9,922 ರನ್ ಗಳಿಸಿದ್ದಾರೆ. ಅವರು ಈ ರನ್‌ಗಳ ಸರಾಸರಿ 41.86 ರಷ್ಟಿದೆ. ಒಟ್ಟಾರೆ ಈ ಪಟ್ಟಿಯಲ್ಲಿ ಕೊಹ್ಲಿ ಐದನೇ ಸ್ಥಾನವನ್ನು ಪಡೆದಿರುವುದು ಖುಷಿಯ ಸಂಗತಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನಂತರ ಆಸ್ಟ್ರೇಲಿಯಾ 141/6 ಗಳಿಸಿತು. ಆಸ್ಟ್ರೇಲಿಯಾ ಪರ ಮೊಯಿಸಸ್ ಹೆನ್ರಿಕ್ಸ್ 33 ಮತ್ತು ನಾಯಕ ಆರನ್ ಫಿಂಚ್ 30 ರನ್ ಗಳಿಸಿದರು. ಹೇಡನ್ ವಾಲ್ಷ್ ಜೂನಿಯರ್ ವೆಸ್ಟ್ ಇಂಡೀಸ್ ಪರ ಅತಿ ಎರಡು ವಿಕೆಟ್ ಪಡೆದ ಮಿಂಚಿದರು.
ಇದಕ್ಕೆ ಉತ್ತರಿಸಿದ ವೆಸ್ಟ್ ಇಂಡೀಸ್ 14.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 142 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಗೇಲ್ 67 (38 ಎಸೆತಗಳಲ್ಲಿ, 4 ಬೌಂಡರಿ, 7 ಸಿಕ್ಸರ್‌ಗಳಲ್ಲಿ) ಮತ್ತು ನಾಯಕ ನಿಕೋಲಸ್ ಪೂರನ್ ಅಜೇಯ 32 ರನ್ ಗಳಿಸಿದರು. ಉಭಯ ತಂಡಗಳ ನಡುವಿನ ಸರಣಿಯ ನಾಲ್ಕನೇ ಪಂದ್ಯ ಜುಲೈ 15 ರಂದು ಸೇಂಟ್ ಲೂಸಿಯಾದಲ್ಲಿಯೇ ನಡೆಯಲಿದೆ.