ETV Bharat / sports

24 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್‌ ಸರಣಿಗೆ ಆಸ್ಟ್ರೇಲಿಯಾ ಒಪ್ಪಿಗೆ

author img

By

Published : Nov 8, 2021, 5:59 PM IST

ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಆಸ್ಟ್ರೇಲಿಯಾ ಒಪ್ಪಿಕೊಂಡಿದೆ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

Australia set to tour Pakistan after 24 years
24 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಕ್ರಿಕೆಟ್‌ ಸರಣಿಗೆ ಆಸ್ಟ್ರೇಲಿಯಾ ಒಪ್ಪಿಗೆ

ಲಾಹೋರ್(ಪಾಕಿಸ್ತಾನ): 24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್‌ ಒಪ್ಪಿಕೊಂಡಿದೆ. ಈ ತಂಡ 1998ರಲ್ಲಿ ಕೊನೆಯದಾಗಿ ಪಾಕ್‌ ಪ್ರವಾಸ ಕೈಗೊಂಡಿತ್ತು.

ಆಸ್ಟ್ರೇಲಿಯಾ, 2022ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಕರಾಚಿ (ಮಾರ್ಚ್ 3-7), ರಾವಲ್ಪಿಂಡಿ (ಮಾರ್ಚ್ 12-16) ಮತ್ತು ಲಾಹೋರ್ (ಮಾರ್ಚ್ 21-25) ನಲ್ಲಿ ಮೂರು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಮಾರ್ಚ್ 29ರಿಂದ ಏಪ್ರಿಲ್ 5 ರವರೆಗೆ ನಡೆಯಲಿರುವ ನಾಲ್ಕು ವೈಟ್‌ಬಾಲ್ ಪಂದ್ಯಗಳಿಗೆ ಲಾಹೋರ್ ವೇದಿಕೆಯಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸೋಮವಾರ ಪ್ರಕಟಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡ ಭದ್ರತೆಯ ಕಾರಣ ನೀಡಿ ಯಾವುದೇ ಪಂದ್ಯವನ್ನಾಡದೆ ತವರಿಗೆ ವಾಪಸ್‌ ಆಗಿತ್ತು. ಇದಾದ ಕೆಲವೇ ದಿನಗಳ ಅಂತರದಲ್ಲಿ ಇಂಗ್ಲೆಂಡ್ ಕೂಡ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಪಾಕ್‌ಗೆ ಪ್ರವಾಸ ಮಾಡುವುದಿಲ್ಲ ಎಂದು ಘೋಷಿಸಿತ್ತು. ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಆಂಗ್ಲನ್ನರ ನಿರ್ಧಾರ ಭಾರಿ ಹಿನ್ನಡೆ ಉಂಟುಮಾಡಿತ್ತು. ಇದೀಗ ಉತ್ತಮ ಗುಣಮಟ್ಟದ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ತಮ್ಮ ದೇಶಕ್ಕೆ ತರುವಲ್ಲಿ ಪಿಸಿಬಿಯ ಪ್ರಯತ್ನಗಳು ಮುಂದುವರಿಯುತ್ತಿವೆ.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿದ ನಂತರ ಆಸೀಸ್ ಪಾಕಿಸ್ತಾನಕ್ಕೆ ಬರುತ್ತಿರುವುದು ದೇಶಕ್ಕೆ ದೊಡ್ಡ ಗೆಲುವೆಂದೇ ಇತ್ತೀಚೆಗೆ ನೇಮಕವಾಗಿದ್ದ ಪಿಸಿಬಿ ಮುಖ್ಯಸ್ಥ ರಮಿಜ್ ರಾಜಾ ಹೇಳಿದ್ದಾರೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯೊಂದಿಗೆ ಇಲ್ಲಿಗೆ ಮುಗಿಯುವುದಿಲ್ಲ ಎಂದೂ ರಾಜಾ ಹೇಳಿದ್ದು, ಇನ್ನೂ ಹಲವು ಸರಣಿಗಳ ಮೂಲಕ ಇತರೆ ದೇಶಗಳನ್ನು ಪಾಕ್‌ಗೆ ಆಹ್ವಾನಿಸುವ ಮುನ್ಸೂಚನೆ ನೀಡಿದ್ದಾರೆ.

'ಪಾಕ್‌ನ ಗೌರವ, ಪ್ರೀತಿ, ಆತಿಥ್ಯ ಆನಂದಿಸಲು ಉತ್ತಮ ಅವಕಾಶ'

ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡುವ ತಂಡಗಳಲ್ಲಿ ಒಂದಾಗಿದೆ. ಅವರು 24 ವರ್ಷಗಳ ಸುದೀರ್ಘ ಅಂತರದ ನಂತರ ಮೊದಲ ಬಾರಿಗೆ ನಮ್ಮ ನೆಲದಲ್ಲಿ ಆಡುತ್ತಿರುವುದು ಅಭಿಮಾನಿಗಳಿಗೆ ವಿಶೇಷ ಸತ್ಕಾರವಾಗಲಿದೆ. ಅಂತೆಯೇ ಆಸ್ಟ್ರೇಲಿಯಾದ ಕ್ರಿಕೆಟಿಗರು ನಮ್ಮ ಐಕಾನಿಕ್ ಸ್ಥಳಗಳಲ್ಲಿ ಆಡಲು ಮಾತ್ರವಲ್ಲದೆ ಈ ಮಹಾನ್ ದೇಶವು ನೀಡುವ ಗೌರವ, ಪ್ರೀತಿ ಮತ್ತು ಆತಿಥ್ಯವನ್ನು ಅನುಭವಿಸಲು ಹಾಗೂ ಆನಂದಿಸಲು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ಅವರು ತಮ್ಮ ತಂಡಕ್ಕೆ ಪೂಲ್‌ಫ್ರೂಫ್‌ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪಿಸಿಬಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರವಾಸಕ್ಕೂ ಮುನ್ನ ಕ್ರಿಕೆಟ್‌ ಆಸ್ಟ್ರೇಲಿಯಾ ನಿಯೋಗ ಭೇಟಿ

ಪ್ರವಾಸಕ್ಕಾಗಿ ಯೋಜಿಸುವಲ್ಲಿ ಪಿಸಿಬಿ ನಡೆಸುತ್ತಿರುವ ಗಣನೀಯ ಪ್ರಯತ್ನಗಳಿಗಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ. ಅಗತ್ಯ ಕಾರ್ಯಾಚರಣೆಗಳು, ಲಾಜಿಸ್ಟಿಕ್ಸ್, ಭದ್ರತೆ ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಅಂತಿಮಗೊಳಿಸಲು ಮುಂಬರುವ ತಿಂಗಳುಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ನಿಕ್ ಮಾಹಿತಿ ನೀಡಿದರು.

ನಮ್ಮ ಆಟಗಾರರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿ ಉಳಿದಿದೆ. ಪ್ರವಾಸಕ್ಕೆ ಸೂಕ್ತವಾದ ಮತ್ತು ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಪಿಸಿಬಿ ಮತ್ತು ಸಂಬಂಧಿತ ಏಜೆನ್ಸಿಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಕ್ರಿಕೆಟ್‌ ಆಸ್ಟ್ರೇಲಿಯಾ ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡಿ ಪಿಸಿಬಿ, ಪ್ರಾಂತೀಯ ಹಾಗೂ ಫೆಡರಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

1998-99ರಲ್ಲಿ ಟೇಲರ್ ನಾಯಕತ್ವದ ಆಸೀಸ್‌ಗೆ ಗೆಲುವು

1998-99ರಲ್ಲಿ ಮಾರ್ಕ್ ಟೇಲರ್ ನಾಯಕತ್ವದ ಆಸೀಸ್‌ ತಂಡ ಪಾಕಿಸ್ತಾನದಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ 1-0 ಸರಣಿ ಜಯಿಸಿತ್ತು. ರಿಚಿ ಬೆನಾಡ್ ಅವರ ತಂಡವು 1959-60ರ ಸರಣಿಯಲ್ಲಿ ಫಜಲ್ ಮಹಮೂದ್ ನೇತೃತ್ವದ ಪಾಕ್‌ ತಂಡವನ್ನು 2-0 ಅಂತರದಿಂದ ಸೋಲಿಸಿತ್ತು. ಆ ಬಳಿಕ ಕಂಡ ಆಸೀಸ್‌ಗೆ ಪಾಕ್‌ ನೆಲದಲ್ಲಿ ಬೆನಾಡ್‌ ಮೊದಲ ಗೆಲುವು ತಂದುಕೊಟ್ಟಿದ್ದರು.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ನಡೆದ ಭಯೋತ್ಪಾದಕರ ದಾಳಿಯ ನಂತರ ಪಾಕಿಸ್ತಾನದಲ್ಲಿ ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜಿಸಲಾಗಿರಲಿಲ್ಲ. 2002ರಲ್ಲಿ ಆಸ್ಟ್ರೇಲಿಯಾದ ನಿಗದಿತ ಪ್ರವಾಸಕ್ಕೂ ಮುನ್ನ ಕರಾಚಿಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಿಂದ ಸರಣಿಯನ್ನು ಕೊಲಂಬೊ ಹಾಗೂ ಯುಎಇಗೆ ಸ್ಥಳಾಂತರಿಸುವಂತೆ ಒತ್ತಾಯಿಸಿತ್ತು.

ವಿದೇಶದಲ್ಲಿ ಆಸೀಸ್‌-ಪಾಕ್‌ನ ಕೊನೆಯ ನಾಲ್ಕು ಸರಣಿಗಳು

2002 ರಿಂದ 2003ರವರೆಗೆ (ಕೊಲಂಬೊ ಹಾಗೂ ಶಾರ್ಜಾ, ಪಾಕಿಸ್ತಾನಕ್ಕೆ 3-0 ಅಂತರದಲ್ಲಿ ಸೋಲು), 2010 (ಇಂಗ್ಲೆಂಡ್‌ನಲ್ಲಿ 1-1 ಡ್ರಾ), 2014-15 (ಯುಎಇಯಲ್ಲಿ 2-0 ಅಂತರದಲ್ಲಿ ಗೆಲುವು) ಹಾಗೂ 2018 -19 (ಯುಎಇಯಲ್ಲಿ 1-0 ಗೆಲುವು). 2009ರಲ್ಲಿ ನಡೆದ ಬಸ್ ದಾಳಿಯ ನಂತರ ಪಾಕ್‌ ಪ್ರವಾಸ ಕೈಗೊಂಡ ಮೊದಲ ದೇಶ ಜಿಂಬಾಬ್ವೆ. 2015ರಲ್ಲಿ ಜಿಂಬಾಬ್ವೆ ಪಾಕ್‌ ಆತಿಥ್ಯ ಸ್ವೀಕರಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.