ಸಿಲ್ಹೆಟ್ ( ಬಾಂಗ್ಲಾದೇಶದ ) : ಏಷ್ಯಾ ಕಪ್ ಫೈನಲ್ನಲ್ಲಿ ಹರ್ಮನ್‌ಪ್ರೀತ್ ಕೌರ್ ತಂಡ ಶ್ರೀಲಂಕಾ ತಂಡವನ್ನು ಮಣಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ವತಿನಿತೆಯರು ಏಳನೇ ಬಾರಿ ಏಷ್ಯಾ ಕಪ್ ಗೆದ್ದು ದಾಖಲೆ ಬರೆದಿದ್ದಾರೆ. ಲಂಕಾ ನೀಡಿದ್ದ 65 ರನ್ಗಳ ಸುಲಭ ಗುರಿಯನ್ನು 8.3 ಓವರ್ನಲ್ಲೇ 2 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದರು. ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ಟೀಂ ಎಂಟು ವಿಕೆಟ್ಗಳ ಜಯಭೇರಿ ಭಾರಿಸಿದೆ.
ಮೊದಲು ಬ್ಯಾಟ್ ಮಾಡಿದ ಲಂಕಾ ವನಿತೆಯರನ್ನು ಭಾರತೀಯರು ಕಾಡಿದರು. 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 69 ರನ್ನ ಗುರಿಯನ್ನು ಭಾರತಕ್ಕೆ ನೀಡಿದರು. ಇದರಲ್ಲಿ ಓಡಾಡಿ ರಣಸಿಂಘೆ 13 ರನ್ ಮತ್ತು ಇನೋಕಾ ರಣವೀರಾ 18 ರನ್ ಗಳಿಸಿದ್ದು ಬಿಟ್ಟರೆ ಮತ್ತಾರು ಹತ್ತು ರನ್ ಗಡಿ ದಾಟಲಿಲ್ಲ.
-
#AsiaCup2022 𝗖𝗛𝗔𝗠𝗣𝗜𝗢𝗡𝗦 🏆
— BCCI Women (@BCCIWomen) October 15, 2022 " class="align-text-top noRightClick twitterSection" data="
Well done, #TeamIndia! 👏 👏#INDvSL pic.twitter.com/qYBP4t6WMV
">#AsiaCup2022 𝗖𝗛𝗔𝗠𝗣𝗜𝗢𝗡𝗦 🏆
— BCCI Women (@BCCIWomen) October 15, 2022
Well done, #TeamIndia! 👏 👏#INDvSL pic.twitter.com/qYBP4t6WMV#AsiaCup2022 𝗖𝗛𝗔𝗠𝗣𝗜𝗢𝗡𝗦 🏆
— BCCI Women (@BCCIWomen) October 15, 2022
Well done, #TeamIndia! 👏 👏#INDvSL pic.twitter.com/qYBP4t6WMV
ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ 8.3 ಓವರ್ನಲ್ಲಿ ಸ್ಮೃತಿ ಮಂಧಾನ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಗೆಲುವು ಸಾಧಿಸಿತು. ಸ್ಮೃತಿ ಮಂಧಾನ ಜೊತೆ ಆರಂಭಿಕರಾಗಿ ಬಂದ ಶೆಫಾಲಿ ವರ್ಮಾ (5) ಬೇಗ ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಜೆಮಿಮಾ ರಾಡ್ರಿಗಸ್ (2) ಕೂಡ ಜಾಸ್ತಿ ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ.
ಕೌರ್ ಮಂಧಾನ ಜೊತೆಯಾಟ : ಭಾರತ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಸ್ಮೃತಿ ಮಂಧಾನ ತಮ್ಮ ಬಿರುಸಿನ ಆಟವನ್ನು ಮುಂದುವರೆಸಿದ್ದರು. 32 ರನ್ಗೆ ಭಾರತ ಎರಡು ವಿಕೆಟ್ ಕಳೆದುಕೊಂಡಿತ್ತು. ಆಗ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಂಧಾನಗೆ ಜೊತೆಯಾದರು. ಬಿರುಸಿನಿಂದ ಆಡುತ್ತಿದ್ದ ಮಂಧಾನ 25 ಎಸೆತಗಳಲ್ಲಿ 6 ಬೌಡರಿ ಮತ್ತು 3 ಸಿಕ್ಸರ್ ಜೊತೆಗೆ 51ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು. ನಾಯಕಿ ಹರ್ಮನ್‌ಪ್ರೀತ್ ಕೌರ್ 11 ರನ್ ಗಳಿಸಿದರು.
-
🚨 𝗥𝗘𝗖𝗢𝗥𝗗 𝗔𝗟𝗘𝗥𝗧 🚨
— BCCI Women (@BCCIWomen) October 15, 2022 " class="align-text-top noRightClick twitterSection" data="
1⃣3⃣7⃣ T20Is & going strong! 🙌 🙌
Congratulations to #TeamIndia Captain @ImHarmanpreet as she becomes the Most Capped T20I Player in Women's Cricket. 🔝 👏
Follow the match ▶️ https://t.co/r5q0NTVLQC #AsiaCup2022 | #INDvSL pic.twitter.com/dPcECLVRFy
">🚨 𝗥𝗘𝗖𝗢𝗥𝗗 𝗔𝗟𝗘𝗥𝗧 🚨
— BCCI Women (@BCCIWomen) October 15, 2022
1⃣3⃣7⃣ T20Is & going strong! 🙌 🙌
Congratulations to #TeamIndia Captain @ImHarmanpreet as she becomes the Most Capped T20I Player in Women's Cricket. 🔝 👏
Follow the match ▶️ https://t.co/r5q0NTVLQC #AsiaCup2022 | #INDvSL pic.twitter.com/dPcECLVRFy🚨 𝗥𝗘𝗖𝗢𝗥𝗗 𝗔𝗟𝗘𝗥𝗧 🚨
— BCCI Women (@BCCIWomen) October 15, 2022
1⃣3⃣7⃣ T20Is & going strong! 🙌 🙌
Congratulations to #TeamIndia Captain @ImHarmanpreet as she becomes the Most Capped T20I Player in Women's Cricket. 🔝 👏
Follow the match ▶️ https://t.co/r5q0NTVLQC #AsiaCup2022 | #INDvSL pic.twitter.com/dPcECLVRFy
ಏಳನೇ ಬಾರಿ ಏಷ್ಯಾಕಪ್ : ಭಾರತ ಮಹಿಳಾ ತಂಡ ಶ್ರೀಲಂಕಾವನ್ನು ಸೋಲಿಸಿ ಏಳನೇ ಬಾರಿ ಕಪ್ ಮಡಿಲಿಗೆ ಹಾಕಿಕೊಂಡರು. ಪುರುಷರ ತಂಡ ಏಳು ಬಾರಿ ಏಷ್ಯಾಕಪ್ ಜಯಿಸಿದೆ. ವನಿತೆಯರೂ ಈ ದಾಖಲೆಯಲ್ಲಿ ಸಮಭಲ ಸಾಧಿಸಿದ್ದಾರೆ.
ಅತೀ ಹೆಚ್ಚು ಪಂದ್ಯಗಳನ್ನಾಡುದ ಸಾಧನೆ : ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಅತೀ ಹೆಚ್ಚು ಟಿ 20 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಅವರಿಗೆ ಇಂದಿನ ಪಂದ್ಯ 137 ಟಿ 20ಯ ಆಟವಾಗಿತ್ತು.
ಮೊದಲ ಇನ್ನಿಂಗ್ಸ್ : ಭಾರತೀಯ ವನಿತೆಯರ ಬಿರುಸಿನ ಬೌಲಿಂಗ್ ದಾಳಿಗೆ ಲಂಕಾ 65ರನ್ಗೆ ನಿಯಂತ್ರಣ ಗೊಂಡಿತು. ತಂಡ 9 ರನ್ ಗಳಿಸುವಷ್ಟರಲ್ಲಿ ನಾಯಕಿ ಚಾಮರಿ ಅಟಪಟ್ಟು(6), ಅನೌಷ್ಕಾ ಸಂಜೀವನಿ(2), ಮಾದವಿ(1) ಮತ್ತು ಹಾಸಿನಿ ಪೆರೇರಾ(0) ಔಟ್ ಆದರು.
ಮಧ್ಯಮ ಕ್ರಮಾಂಕವೂ ವಿಫಲ : ಆರಂಭಿಕರು ಮತ್ತು ಮುರು ನಾಲ್ಕನೇ ವಿಕೆಟ್ ಪತನವಾದಂತೆ ಮಧ್ಯಮ ಕ್ರಮಾಂಕವೂ ಕುಸಿತ ಕಂಡಿತು. ನೀಲಾಕ್ಷಿ ಡಿ ಸಿಲ್ವಾ(6), ಕವಿಶಾ ದಿಲ್ಹಾರಿ(1), ಓಡಾಡಿ ರಣಸಿಂಘೆ(13), ಮಲ್ಶಾ ಶೆಹಾನಿ (0), ಸುಗಂಧಾ ಕುಮಾರಿ(6) ವಿಕೆಟ್ ಒಪ್ಪಿಸಿದರು.
ಭಾರತದ ಪರ ರೇಣುಕಾ ಸಿಂಗ್ 3 ವಿಕೆಟ್ ಪಡೆದರು. ರಾಜೇಶ್ವರಿ ಗಾಯಕ್‌ವಾಡ್ ಮತ್ತು ಸ್ನೇಹ ರಾಣಾ ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್‌ಗಳು: ಶ್ರೀಲಂಕಾ 20 ಓವರ್‌ಗಳಲ್ಲಿ 65/9 (ರೇಣುಕಾ ಸಿಂಗ್ 3-5, ಸ್ನೇಹ್ ರಾಣಾ 2-13, ರಾಜೇಶ್ವರಿ ಗಾಯಕ್ವಾಡ್ 2-16) ಭಾರತಕ್ಕೆ 8.3 ಓವರ್‌ಗಳಲ್ಲಿ 71/2 (ಸ್ಮೃತಿ ಮಂಧಾನ 51*; ಇನೋಕಾ ರಣವೀರ 1-17 )
ಪಂದ್ಯ ಶ್ರೇಷ್ಠ : ಇಂದಿನ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ ರೇಣುಕಾ ಸಿಂಗ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಸರಣಿ ಶ್ರೇಷ್ಠ : ಏಷ್ಯಾ ಕಪ್ ಪಂದ್ಯಗಳಲ್ಲಿ 94 ರನ್ ಗಳಿಸಿ, 13 ವಿಕೆಟ್ ಪಡೆದು ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದ ದೀಪ್ತಿ ಶರ್ಮಾ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಫಲಿತಾಂಶ : ಭಾರತಕ್ಕೆ ಎಂಟು ವಿಕೆಟ್ಗಳ ಗೆಲುವು
ಇದನ್ನೂ ಓದಿ :ಏಷ್ಯಾ ಕಪ್ 2022: ಶ್ರೀಲಂಕಾ ವಿರುದ್ಧ ಭಾರತ ಫೈನಲ್: ಪುರುಷರ ದಾಖಲೆ ಸರಿಗಟ್ಟಲು ಕಣ್ಣಿಟ್ಟ ಮಹಿಳಾ ತಂಡ