ಬೆಂಗಳೂರು: ಕರ್ನಾಟಕದ ಅನುಭವಿ ಆಟಗಾರ ಪ್ರಕಾಶ್ ಜಯರಾಮಯ್ಯ, ಸುನೀಲ್ ರಮೇಶ್, ಲೋಕೇಶ್ ಹಾಗೂ ಬಸಪ್ಪ ವಡ್ಡಾಗೊಲ್, ಮಾರ್ಚ್ 13 ರಿಂದ 19 ರವರೆಗೆ ಶಾರ್ಜಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ತ್ರಿಕೋನ ಸರಣಿ ಯುಎಇಯಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ 6 ಪಂದ್ಯಗಳು ಹಾಗೂ ಮಾರ್ಚ್ 19 ರಂದು ಫೈನಲ್ ಪಂದ್ಯ ನಡೆಯಲಿದೆ. ಶಾರ್ಜಾದ ಸ್ಜೈಲೈನ್ ಯುನಿವರ್ಸಿಟಿ ಕಾಂಪಸ್ನಲ್ಲಿ ಟೂರ್ನಿ ಆಯೋಜನೆಯಾಗಿದೆ.
ಟೂರ್ನಿಯ ಪೂರ್ವಭಾವಿಯಾಗಿ ಮಾರ್ಚ್ 1 ರಿಂದ 11 ರವರೆಗೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ನಡೆಯಲಿದೆ ಎಂದು ಅಂಧರ ಕ್ರಿಕೆಟ್ ಆಯ್ಕೆ ಸಮಿತಿಯ ಸದಸ್ಯರು ಮಾಹಿತಿ ನೀಡಿದ್ದಾರೆ. ತಂಡದಲ್ಲಿರುವ 11 ಆಟಗಾರರಲ್ಲಿ ಸಂಪೂರ್ಣವಾಗಿ ಕುರುಡರಾಗಿರುವ ನಾಲ್ಕು ಆಟಗಾರರು (B1), ಭಾಗಶಃ ಕುರುಡು ಆಟಗಾರರು ಮೂವರು (B2), ಮತ್ತು ದೃಷ್ಟಿ ದೋಷ ಹೊಂದಿರುವ 4(B3) ಆಟಗಾರರಿರುತ್ತಾರೆ.
ಭಾರತ ಅಂಧರ ತಂಡ: ಬಿ1 ವರ್ಗ: ಕಲ್ಪೇಶ್ ನಿಂಬಾಡ್ಕರ್ (ಗುಜರಾತ್), ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಸುಜಿತ್ ಮುಂಡಾ (ಜಾರ್ಖಂಡ್), ಬಸಪ್ಪ ವಡ್ಡಗೋಲ್ (ಕರ್ನಾಟಕ), ಪ್ರೇಮ್ ಕುಮಾರ್ (ಆಂಧ್ರಪ್ರದೇಶ), ಪ್ರವೀಣ್ ಕುಮಾರ್ ಶರ್ಮಾ (ಹರಿಯಾಣ)
B2 ವರ್ಗ: ಡಿ ವೆಂಕಟೇಶ್ವರ ರಾವ್ (ಆಂಧ್ರ ಪ್ರದೇಶ), ಎ ಮನೀಶ್ (ಕೇರಳ), ಇರ್ಫಾನ್ ದಿವಾನ್ (ದೆಹಲಿ), ನಕುಲ್ ಬಡನಾಯಕ (ಒಡಿಶಾ), ಲೋಕೇಶ (ಕರ್ನಾಟಕ)
B3 ವರ್ಗ: ದೀಪಕ್ ಮಲಿಕ್ (ಹರಿಯಾಣ), ಪ್ರಕಾಶ ಜಯರಾಮಯ್ಯ (ಕರ್ನಾಟಕ), ಸುನಿಲ್ ರಮೇಶ್ (ಕರ್ನಾಟಕ), ದುರ್ಗಾ ರಾವ್ (ಆಂಧ್ರ ಪ್ರದೇಶ), ಚಂದನ್ (ಉತ್ತರ ಪ್ರದೇಶ), ರಂಬೀರ್ (ಹರಿಯಾಣ)
ಇದನ್ನೂ ಓದಿ: ಗಾಯಕ್ಕೊಳಗಾಗಿರುವ ಈ ಆಟಗಾರ ಶ್ರೀಲಂಕಾ ವಿರುದ್ಧದ ಸರಣಿಗೆ ಅಲಭ್ಯ?