ETV Bharat / sports

ಭಾರತೀಯ ವೇಗಿಗಳು ನಮ್ಮವರಷ್ಟೇ ಪ್ರಬಲರು, ಆದರೆ ನಮ್ಮ ಗಮನ ಇವರಿಬ್ಬರ ಮೇಲೆಯೇ ಇದೆ: ನಿಕೋಲ್ಸ್

author img

By

Published : May 26, 2021, 5:39 PM IST

ಸೌತಾಂಪ್ಟನ್​ ಏಜಿಯಸ್ ಬೌಲ್​ನಲ್ಲಿ ನ್ಯೂಜಿಲ್ಯಾಂಡ್ ತಂಡ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ನಂಬರ್ 1 ಭಾರತ ತಂಡವನ್ನು ಎದುರಿಸಲಿದೆ. ಇಲ್ಲಿ ವಿಕೆಟ್​ ಇಂಗ್ಲೆಂಡ್​ನ ಪಿಚ್​ಗಳಲ್ಲಿ ಸ್ಲೋ ಬೌಲರ್​ಗಳಿಗೆ ನೆರವಾಗು ಬಲು ಅಪರೂಪದ್ದಾಗಿರುವುದರಿಂದ ಭಾರತದ ವೇಗಿಗಳಿಗಿಂತ ಸ್ಪಿನ್ನರ್​ಗಳ ಕಡೆಗೆ ನಮ್ಮ ಗಮನವಿದೆ ಎಂದು ನಿಕೋಲ್ಸ್ ತಿಳಿಸಿದ್ದಾರೆ.

ಹೆನ್ರಿ ನಿಕೋಲ್ಸ್
ಹೆನ್ರಿ ನಿಕೋಲ್ಸ್

ನವದೆಹಲಿ: ಭಾರತದ ವೇಗದ ಬೌಲಿಂಗ್ ದಾಳಿ ನ್ಯೂಜಿಲ್ಯಾಂಡ್​ನ ವಿಶ್ವಶ್ರೇಷ್ಠ ಸ್ವಿಂಗ್ ದಾಳಿಗೆ ಸಮಾನವಾಗಿದೆ. ಆದರೆ, ನಾವು ಸ್ಪಿನ್​ಬೌಲರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಕಿವೀಸ್ ಬ್ಯಾಟ್ಸ್​ಮನ್ ಹೆನ್ರಿ ನಿಕೋಲ್ಸ್​ ಹೇಳಿದ್ದಾರೆ.

ಸೌತಾಂಪ್ಟನ್​ ಏಜಿಯಸ್ ಬೌಲ್​ನಲ್ಲಿ ನ್ಯೂಜಿಲ್ಯಾಂಡ್ ತಂಡ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ನಂಬರ್ 1 ಭಾರತ ತಂಡವನ್ನು ಎದುರಿಸಲಿದೆ. ಇಲ್ಲಿ ವಿಕೆಟ್​ ಇಂಗ್ಲೆಂಡ್​ನ ಪಿಚ್​ಗಳಲ್ಲಿ ಸ್ಲೋ ಬೌಲರ್​ಗಳಿಗೆ ನೆರವಾಗು ಬಲು ಅಪರೂಪದ್ದಾಗಿರುವುದರಿಂದ ಭಾರತದ ವೇಗಿಗಳಿಗಿಂತ ಸ್ಪಿನ್ನರ್​ಗಳ ಕಡೆಗೆ ನಮ್ಮ ಗಮನವಿದೆ ಎಂದು ನಿಕೋಲ್ಸ್ ತಿಳಿಸಿದ್ದಾರೆ.

ಭಾರತ ಅತ್ಯುತ್ತಮ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ ಮತ್ತು ಜಡೇಜಾ ಮತ್ತು ಅಶ್ವಿನ್​ ಅಂತಹ ಅನುಭವಿ ಸ್ಪಿನ್ನರ್​ಗಳನ್ನು ಹೊಂದಿದೆ. ಅವರು ವಿಶ್ವದ ಎಲ್ಲ ಭಾಗಗಳಲ್ಲೂ ಸ್ಥಿರ ಪ್ರದರ್ಶನ ತೋರಿದ್ದಾರೆ. ಮತ್ತು ಉತ್ತಮ ಗುಣಮಟ್ಟದ ದಾಳಿಯನ್ನು ಹೊರ ಹಾಕಿದ್ದಾರೆ ಎಂದು ಟೆಸ್ಟ್​ ಕ್ರಿಕೆಟ್​ನಲ್ಲಿ ಕಿವೀಸ್​ನ ಬಲವಾಗಿರುವ ನಿಕೋಲ್ಸ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಕಳೆದ ಕೆಲವು ವರ್ಷಗಳಿಂದ ಅವರ ಗುಣಮಟ್ಟ ಸಾಬೀತು ಪಡಿಸಿದ್ದಾರೆ. ಅವರು ನಾವು ಹೆಮ್ಮಪಡುವ ನಮ್ಮ ವೇಗಿಗಳಾದ ಬೌಲ್ಟ್​, ಟಿಮ್ ಸೌಥಿ ಮತ್ತು ನೀಲ್ ವ್ಯಾಗ್ನರ್​ಗೆ ಸಮನಾಗಿದ್ದಾರೆ. ನೀವು ಅಂತಹ ಬೌಲಿಂಗ್ ಲೈನ್​ ಅಪ್ ಹೊಂದಿದ್ದಾಗ, ಅದೊಂದು ಉತ್ತೇಜಕ ಸವಾಲಾಗಿರಲಿದೆ ಮತ್ತು ಒಂದು ತಂಡವಾಗಿ ಅವರನ್ನು ಎದುರಿಸುವುದು ಕಠಿಣ, ಆದರೆ ಅವರ ಸವಾಲು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

2019-20 ತವರಿನ ಟೆಸ್ಟ್​ ಸರಣಿಯಲ್ಲಿ ಭಾರತವನ್ನು 2-0ಯಲ್ಲಿ ಮಣಿಸಿದ್ದು ನೆರವಾಗಲಿದೆಯಾ ಎಂದು ಕೇಳಿದ್ದಕ್ಕೆ, ನಾವು ಈ ಬಾರಿ ತಟಸ್ಥ ಸ್ಥಳದಲ್ಲಿ ಆಡಲಿದ್ದೇವೆ. ಎರಡೂ ತಂಡಕ್ಕೂ ಸವಾಲಾಗಲಿದೆ. ಆದರೆ, ನಾವು ಅವರನ್ನು 2-0 ಯಲ್ಲಿ ಹಿಂದೆ ಮಣಿಸಿದ್ದೇವೆ. ಅದು ವಿಭಿನ್ನ ವಾದ ಸವಾಲು ಎಂದು ನಾವು ಒಪ್ಪಿಕೊಳ್ಳಬೇಕಿದೆ. ಒಂದು ಗುಂಪಾಗಿ ನಾವು ಆ ಸರಣಿ ಜಯದಿಂದ ಹೆಚ್ಚು ವಿಶ್ವಾಸ ಪಡೆಯಲಿದ್ದೇವೆ. ಮೊದಲೆರಡು ಶ್ರೇಯಾಂಕದ ತಂಡಗಳು ಫೈನಲ್​ನಲ್ಲಿ ಆಡಲಿರುವುದರಿಂದ ಉತ್ತಮ ಪೈಪೋಟಿ ನಿರೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧದ ಟೆಸ್ಟ್,​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಸಜ್ಜಾಗಲು ಉತ್ತಮ ವೇದಿಕೆ: ಸೌಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.