ETV Bharat / sports

ವಿರಾಟ್ ಕೊಹ್ಲಿಯಂತೆ ಆಗಲು ಬಯಸುತ್ತಾರಂತೆ ಈ ವೇಗಿ: ಕೋಚ್​​ ಬಳಿ ಮನದಾಳದ ಮಾತು ಹೇಳಿದ್ದ ಈ ಬೌಲರ್​ ಯಾರು?

ಐಸಿಸಿ ರ್‍ಯಾಂಕಿಂಗ್​ನಲ್ಲಿ ವಿಶ್ವದ ನಂಬರ್ 1 ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ - ವಿರಾಟ್​ ಕೊಹ್ಲಿಯಂತೆ ಆಗ ಬಯಸುತ್ತೇನೆ ಎಂದಿದ್ದ ವೇಗಿ - ಸಿರಾಜ್​ ಇಚ್ಛೆಯ ಬಗ್ಗೆ ಮಾತನಾಡಿದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್

author img

By

Published : Feb 25, 2023, 12:15 PM IST

indian-pacer-mohammed-siraj-wants-to-become-like-virat-kohli
ವಿರಾಟ್ ಕೊಹ್ಲಿಯಂತೆ ಆಗಲು ಬಯಸುತ್ತಾರಂತೆ ಈ ವೇಗಿ

ನವದೆಹಲಿ: ರನ್​ ಮಷಿನ್​ ವಿರಾಟ್​ ಕೊಹ್ಲಿ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ. ಕ್ರಿಕೆಟಿಗರಿಗೆ ಮಾತ್ರವಲ್ಲದೇ ಅಭಿಮಾನಿಗಳಿಗೂ ವಿರಾಟ್​ ಅವರ ಕೆಲವು ನಡೆಗಳು ಇಷ್ಟ ಆಗುತ್ತದೆ. ಯುವ ಕ್ರಿಕೆಟರ್​ಗಳಿಗೆ ಬೆಂಬಲವಾಗಿ ನಿಲ್ಲುವ ವಿರಾಟ್​ ತಂಡದಲ್ಲಿ ಯಾರೇ ವಿಕೆಟ್ ತೆಗೆದರೂ, ಶತಕ ಗಳಿಸಿದರೂ ತಾವು ಮಾಡಿದ ಸಾಧನೆಯಂತೆ ಸಂಭ್ರಮಿಸಿ ಹುರಿದುಂಬಿಸುತ್ತಾರೆ.

ವಿರಾಟ್​ ಜೊತೆಗೆ ಕಾಲ ಕಳೆದವರು ಅವರ ಉತ್ತಮ ಗಣಗಳ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ವಿರಾಟ್ ಕೊಹ್ಲಿ ಅವರ ಅಗ್ರೆಸಿವ್​ ಆಟ, ತಂಡದ ಗೆಲುವಿಗಾಗಿ ಪಣ ತೊಡುವ ರೀತಿ, ಕೊನೆಯ ಕ್ಷಣದವರೆಗೂ ಪಂದ್ಯ ಬಿಟ್ಟುಕೊಡದೇ ಆಡುವ ಅವರ ಛಾತಿ ತಂಡದ ಸಹ ಆಟಗಾರರಿಗೂ ಹೆಚ್ಚು ಇಷ್ಟ ಆಗುವ ವಿಚಾರಗಳಾಗಿದೆ. ಕ್ರಿಕೆಟ್‌ನ ಉದಯೋನ್ಮುಖ ತಾರೆಯಾಗಿ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಅಲಂಕರಿಸಲು ಮತ್ತು ಟೀಂ ಇಂಡಿಯಾದಲ್ಲಿ ಆಡುವ ಮೂಲಕ ಕೊಹ್ಲಿಯಂತೆ ಹೆಸರು ಗಳಿಸಲು ಬಯಸುವ ಕೆಲವು ಕ್ರಿಕೆಟಿಗರೂ ಇದ್ದಾರೆ.

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್‌ಗೆ ಇದೇ ರೀತಿಯ ಕನಸನ್ನು ಕಂಡಿದ್ದು, ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್‌ಗೆ ಅಂತಹ ಕೊಡುಗೆಯನ್ನು ನೀಡಲು ಬಯಸಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿದ ಭಾರತ ಕ್ರಿಕೆಟ್ ತಂಡದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಅವರು ಮೊಹಮ್ಮದ್ ಸಿರಾಜ್, ವಿರಾಟ್ ಕೊಹ್ಲಿಯ ಪ್ರತಿಭೆಯಿಂದ ಪ್ರಭಾವಿತರಾಗಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

"ಮೊಹಮ್ಮದ್ ಸಿರಾಜ್ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದು, ಆರ್‌ಸಿಬಿ ಜೊತೆ ಆಡುವಾಗ. ನನ್ನ ಬಳಿ ಸಿರಾಜ್​ ನನಗೆ ವಿರಾಟ್ ಕೊಹ್ಲಿಯಂತೆ ಆಗಬೇಕು ಎಂದು ಹೇಳಿದ್ದರು. ಸಿರಾಜ್,​ ವಿರಾಟ್​ ಕೊಹ್ಲಿಯ ಸಾಧನೆಯನ್ನು ಕಂಡು ಕ್ರಿಕೆಟ್​ನಲ್ಲಿ ಆಡುತ್ತಿದ್ದರು. ಹೀಗಾಗಿ ಅವರಲ್ಲಿ ಕ್ರೀಡೆಯ ಬಗ್ಗೆ ಹೆಚ್ಚಿನ ಉತ್ಸುಕತೆ ಮತ್ತು ಉತ್ತಮ ಆಟಗಾರನಾಗಲು ತುಡಿತ ಕಂಡಿತ್ತು. ಅಂದು ವಿರಾಟ್​ರಂತೆ ಆಗಲು ಬಹಳಷ್ಟು ತ್ಯಾಗ ಮಾಡಬೇಕಾಗುತ್ತದೆ. ಆಗ ಮಾತ್ರ ಬಹಳ ದಿನಗಳ ಕಾಲ ಅಭಿಮಾನಿಗಳ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದು ಸಿರಾಜ್​ಗೆ ಹೇಳಿದ್ದೆ" ಎಂದು ಭರತ್​ ಹೇಳುತ್ತಾರೆ.

ಏಕದಿನ ಬೌಲಿಂಗ್​ ಶ್ರೇಯಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಸಿರಾಜ್​ ಭರತ್​ ಒಮ್ಮೆ "ಇಲ್ಲ ಸರ್, ನಾನು ಏನು ಮಾಡಬೇಕೆಂದು ಬಯಸುತ್ತೇನೋ, ನಾನು ಅದನ್ನು ಮಾಡುತ್ತೇನೆ. ಆದರೆ, ನಾನು ವಿರಾಟ್​ ಅವರನ್ನು ಅನುಸರಿಸಲು ಬಯಸುತ್ತೇನೆ" ಎಂದಿದ್ದರಂತೆ. 2018 ರಲ್ಲಿ​ ಆರ್​ಸಿಬಿಯ ಆಟಗಾರಾದ ಸಿರಾಜ್​ ವಿರಾಟ್​ರನ್ನು ಕಂಡಿದ್ದಾರೆ. 2017 ಏಪ್ರಿಲ್​ನಲ್ಲಿ ಐಪಿಎಲ್​ನಲ್ಲಿ ಪದಾರ್ಪಣೆ ಮಾಡಿದ ಸಿರಾಜ್ ಅದೇ ವರ್ಷ ನವೆಂಬರ್​ನಲ್ಲಿ ಅಂತಾರಾಷ್ಟ್ರೀಯ ಟಿ20ಗೂ ಪದಾರ್ಪಣೆ ಮಾಡಿದರು.

ನಂತರ ವಿರಾಟ್​ ನಾಯಕತ್ವದ ಅಡಿ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು ಮತ್ತು ಆರ್​ಸಿಬಿಯಲ್ಲಿ ವಿರಾಟ್​ ಜೊತೆಗೆ ಡ್ರೆಸಿಂಗ್​ ರೂಮ್​ ಹಂಚಿಕೊಳ್ಳುತ್ತಿದ್ದಾರೆ. ಐಸಿಸಿ ನಂಬರ್​ 1 ಪಟ್ಟವನ್ನು ಹೆಚ್ಚು ಸಮಯ ಮುಂದುವರೆಸುವ ಇಚ್ಛೆಯನ್ನು ಸಿರಾಜ್​ ಹೊಂದಿದ್ದಾರೆ. 21 ಏಕದಿನ ಪಂದ್ಯಗಳನ್ನು ಆಡಿರುವ ಸಿರಾಜ್​ 38 ವಿಕೆಟ್​ಗಳನ್ನು 4.62 ರ ಎಕಾನಮಿಯಲ್ಲಿ ಪಡೆದಿದ್ದಾರೆ. 32ರನ್​ ಬಿಟ್ಟುಕೊಟ್ಟು 4 ವಿಕೆಟ್​ ಪಡೆದಿರುವುದು ಸಿರಾಜ್​ ಅವರ ಉತ್ತಮ ಬೌಲಿಂಗ್​ ಪ್ರದರ್ಶನವಾಗಿದೆ.

ಇದನ್ನೂ ಓದಿ: ಪ್ಯಾಟ್​ ಕಮಿನ್ಸ್​ ನಾಯಕತ್ವ ತ್ಯಜಿಸಲಿ: ಮಾಜಿ ಕ್ರಿಕೆಟಿಗ ಇಯಾನ್ ಹೀಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.