ನವದೆಹಲಿ: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್ ಗವಾಸ್ಕರ್ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ದೀರ್ಘ ಕಾಲದವರೆಗೆ ಜಡೇಜಾ ಗಾಯಗೊಂಡಿದ್ದು, ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಅವರನ್ನು ತಂಡದ ಭಾಗವಾಗಿ ಆಡಲಿದ್ದಾರೆ. ಇದೇ ಸಮಯದಲ್ಲಿ ಜಡೇಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಟೀಮ್ ಇಂಡಿಯಾದ ಭವಿಷ್ಯದ ಆಟಗಾರರನ ಬಗ್ಗೆ ಮಾತನಾಡಿದ್ದಾರೆ.
ಹೌದು, ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಯಂಗ್ ಸ್ಟಾರ್ ತಿಲಕ್ ವರ್ಮಾ ಬಗ್ಗೆ ಆಲ್‌ರೌಂಡರ್ ಆಟಗಾರ ಜಡೇಜಾ ಮಾತನಾಡಿದ್ದಾರೆ. ತಿಲಕ್ ವರ್ಮಾ ಅವರ ಪ್ರದರ್ಶನವನ್ನು ಆಧರಿಸಿ, ಜಡೇಜಾ ಅವರನ್ನು ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ಆಟಗಾರ ಎಂದು ಬಣ್ಣಿಸಿದ್ದಾರೆ. ರವೀಂದ್ರ ಜಡೇಜಾ ಅವರು ತಿಲಕ್ ವರ್ಮಾ ಅವರೊಂದಿಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಚಿತ್ರಕ್ಕೆ ಜಡೇಜಾ ಮುದ್ದಾದ ಶೀರ್ಷಿಕೆಯನ್ನೂ ನೀಡಿದ್ದಾರೆ. ‘ಭಾರತದ ಭವಿಷ್ಯದೊಂದಿಗೆ ಸಂಭ್ರಮಿಸುತ್ತಿರುವುದಾಗಿ’ ಬರೆದಿದ್ದಾರೆ. ತಿಲಕ್ ವರ್ಮಾ 2022 ರಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಈಗ ತಿಲಕ್ ಐಪಿಎಲ್ನಲ್ಲಿ ಹೈದರಾಬಾದ್ ಪರ ಆಡುತ್ತಿದ್ದಾರೆ.
- " class="align-text-top noRightClick twitterSection" data="
">
ಎಡಗೈ ಬ್ಯಾಟ್ಸ್‌ಮನ್ ಆಗಿರುವ ತಿಲಕ್ ವರ್ಮಾ ಅವರು ತಮ್ಮ ಮೊದಲ ಋತುವಿನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ರವೀಂದ್ರ ಜಡೇಜಾ ಕೂಡ ಅವರ ಬ್ಯಾಟಿಂಗ್‌ನ ಅಭಿಮಾನಿಯಾಗಿದ್ದಾರೆ. ತಿಲಕ್ ಅವರ ಬ್ಯಾಟಿಂಗ್‌ನಿಂದ ಪ್ರಭಾವಿತರಾದ ಜಡೇಜಾ ಅವರನ್ನು ಭಾರತ ತಂಡದ ಭವಿಷ್ಯದ ಆಟಗಾರರೆಂದು ಎಂದು ಕರೆದಿದ್ದಾರೆ.
IPL 2022 ಮುಂಬೈ ಇಂಡಿಯನ್ಸ್‌ನಲ್ಲಿ ತಿಲಕ್ ಅವರು ಉತ್ತಮ ಪ್ರದರ್ಶನ ನೀಡದಿರಬಹುದು. ಆದರೆ 20 ವರ್ಷದ ತಿಲಕ್ ವರ್ಮಾ ಅವರು ಇತರೆ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದರು. ತಿಲಕ್ 2022 ರಲ್ಲಿ ಮುಂಬೈ ಪರ ಆಡಿದರು, 14 ಪಂದ್ಯಗಳಲ್ಲಿ 36.09 ಸರಾಸರಿಯಲ್ಲಿ ಮತ್ತು 131.02 ಸ್ಟ್ರೈಕ್ ರೇಟ್‌ನಲ್ಲಿ 397 ರನ್ ಗಳಿಸಿದರು. ಇದರಲ್ಲಿ ತಿಲಕ್ ಅವರು ಎರಡು ಅರ್ಧಶತಕಗಳನ್ನು ಸಹ ಗಳಿಸಿದ್ದರು ಮತ್ತು ಅವರ ಒಟ್ಟು ಗರಿಷ್ಠ ಸ್ಕೋರ್ 61 ರನ್ ಆಗಿತ್ತು.
ತಿಲಕ್ ಅವರು ತಮ್ಮ ದೇಶೀಯ ವೃತ್ತಿ ಜೀವನದಲ್ಲಿ ಒಟ್ಟು 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 11 ಇನ್ನಿಂಗ್ಸ್‌ಗಳಲ್ಲಿ 40.90 ಸರಾಸರಿಯಲ್ಲಿ ಒಟ್ಟು 409 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕ ಸೇರ್ಪಡೆಯಾಗಿವೆ. ಈ ಇನ್ನಿಂಗ್ಸ್‌ಗಳಲ್ಲಿ ಅವರ ಗರಿಷ್ಠ ಸ್ಕೋರ್ 121 ರನ್ ಆಗಿದೆ. ತಿಲಕ್ ಅವರು ಮುಂದಿನ ದಿನಗಳಲ್ಲಿ ಭಾರತ ತಂಡದ ಭವಿಷ್ಯದ ಆಟಗಾರನಾಗಿ ಹೊರ ಹೊಮ್ಮಲಿದ್ದಾರೆ ಎಂಬ ಮಾತು ಜಡೇಜಾ ಅವರದ್ದಾಗಿದೆ.
ಓದಿ: ICC T20 ranking: ಅಗ್ರ ಸ್ಥಾನಕ್ಕೇರಲು ದೀಪ್ತ ಶರ್ಮಾಗೆ ಇನ್ನೊಂದೇ ಮೆಟ್ಟಿಲು..