ETV Bharat / sports

ಲಕ್ಷ್ಮಣ್​, ದ್ರಾವಿಡ್​ ಆಗಮನದಿಂದ ಭಾರತೀಯ ಕ್ರಿಕೆಟ್ ಮತ್ತಷ್ಟು​ ಸುರಕ್ಷಿತವಾಗಿದೆ: ಗಂಗೂಲಿ

ಲಕ್ಷ್ಮಣ್​ ಒಬ್ಬ ಅದ್ಭುತ ಮನುಷ್ಯ. ಭಾರತೀಯ ಕ್ರಿಕೆಟ್​​ನಲ್ಲಿ ಅವರು ಅತ್ಯುನ್ನತ ಹಿರಿಮೆಯನ್ನು ಹೊಂದಿದ್ದಾರೆ. ಹಾಗಾಗಿ ಅವರ ಸಾಮರ್ಥ್ಯವೇ ಅವರನ್ನು ಆಯ್ಕೆ ಮಾಡಲು ನಮ್ಮನ್ನು ಪ್ರೇರೇಪಿಸಿತು. ರಾಹುಲ್(ದ್ರಾವಿಡ್​) ಎನ್​ಸಿಎನಲ್ಲಿ ​ಈಗಾಗಲೇ ಅತ್ಯುತ್ತಮವಾದ ಒಂದು ವ್ಯವಸ್ಥೆಯನ್ನು ರೂಪಿಸಿದ್ದಾರೆ. ಅದು ಖಂಡಿತವಾಗಿ ಲಕ್ಷ್ಮಣ್​ಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ನೆರವಾಗಲಿದೆ ಎಂದು ಬಿಸಿಸಿಐ ಮುಖ್ಯಸ್ಥ ಗಂಗೂಲಿ ತಿಳಿಸಿದ್ದಾರೆ.

Indian cricket in safe hands
Indian cricket in safe hands
author img

By

Published : Nov 17, 2021, 10:02 PM IST

ನವದೆಹಲಿ: ಭಾರತ ತಂಡದ ಪ್ರಸಿದ್ಧ ಆಟಗಾರರಾದ ರಾಹುಲ್ ದ್ರಾವಿಡ್​ ಮತ್ತು ವಿವಿಎಸ್​ ಲಕ್ಷ್ಮಣ್ (Rahul Dravid and VVS Laxman)​ ಅವರು ಎರಡು ವಿಭಿನ್ನ ಸ್ಥಾನಗಳನ್ನು ಅಲಂಕರಿಸಿರುವುದರಿಂದ ಭಾರತೀಯ ಕ್ರಿಕೆಟ್​ (Indian cricket) ಸುರಕ್ಷಿತವಾದ ಕೈಗಳಲ್ಲಿರಲಿದೆ ಮತ್ತು ಅವರು ಅದಕ್ಕಾಗಿ ತಮ್ಮಿಂದ ಸಾಧ್ಯವಾದುದನ್ನೆಲ್ಲಾ ನೀಡಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ (BCCI President Sourav Ganguly) ಹೇಳಿದರು.

ರವಿಶಾಸ್ತ್ರಿಯವರಿಂದ ತೆರವಾದ ಭಾರತ ತಂಡದ ಮುಖ್ಯ ಕೋಚ್​ ಸ್ಥಾನವನ್ನು ರಾಹುಲ್​ ದ್ರಾವಿಡ್ (India Head Coach Rahul Dravid) ಅಲಂಕರಿಸಿದ್ದರೆ, ದ್ರಾವಿಡ್​ ಅವರಿಂದ ತೆರವಾದ ಎನ್​ಸಿಎ ಮುಖ್ಯಸ್ಥ(NCA Chief) ಸ್ಥಾನಕ್ಕೇರಲು ಮಾಜಿ ಕ್ರಿಕೆಟಿಗ ಲಕ್ಷ್ಮಣ್​ ಸಿದ್ಧವಾಗಿದ್ದಾರೆ.

​ಗಂಗೂಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿವಿಎಸ್​ ಲಕ್ಷ್ಮಣ್​ ಅವರನ್ನು ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ನ 'ವಿಷನ್​ 2020' ಯೋಜನೆಗೆ ನೇಮಿಸಿ ಯುವ ಕ್ರಿಕೆಟಿಗರೊಂದಿಗೆ ಕೆಲಸ ಮಾಡಲು ಜವಾಬ್ದಾರಿ ವಹಿಸಿದ್ದರು. ಇದೀಗ ದ್ರಾವಿಡ್​ ಅವರು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದ ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಕೋಚ್​ ಆಗಲು ಮೊದಲು ಹಿಂದೇಟು ಹಾಕಿದ್ದ ರಾಹುಲ್ ದ್ರಾವಿಡ್ ಕೂಡ ದಾದಾ ಒತ್ತಾಯಕ್ಕೆ ಮಣಿದು ಕಳೆದ ತಿಂಗಳು ಒಪ್ಪಿಗೆ ಸೂಚಿಸಿದ್ದರು.

ಮುಖ್ಯ ಕೋಚ್​ ಮತ್ತು ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಅವರಿಬ್ಬರನ್ನು ನೇಮಕ ಮಾಡಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಏಕೆಂದರೆ, ಭಾರತೀಯ ಕ್ರಿಕೆಟ್​ನಲ್ಲಿ ಅವೆರಡು ಪ್ರಮುಖ ಸ್ಥಾನಗಳಾಗಿವೆ ಎಂದು ಗಂಗೂಲಿ ಪಿಟಿಐಗೆ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್‌ನಲ್ಲಿ 2025ರ ಐಸಿಸಿ ಚಾಂಪಿಯನ್​​ ಟ್ರೋಫಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದೇನು?

ದ್ರಾವಿಡ್​, ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್​ 1996ರಿಂದ 2008ರವರೆಗೆ ಭಾರತ ಕ್ರಿಕೆಟ್​ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ಥಂಭಗಳಾಗಿದ್ದರು. ಇಬ್ಬರು ಆಟಗಾರರ ಜೊತೆಗೂ ಮೈದಾನದಲ್ಲಷ್ಟೇ ಅಲ್ಲದೆ ಮೈದಾನದವರೆಗೂ ಅತ್ಯುತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿರುವ ದಾದಾ ಒಲ್ಲದ ಮನಸ್ಸಿನಲ್ಲಿದ್ದರೂ ದಾದಾ ಮಾತಿಗೆ ಬೆಲೆಕೊಟ್ಟು ಪ್ರಮುಖ ಹುದ್ದೆಗಳನ್ನು ಅಲಂಕರಿಸಲು ಸಿದ್ಧರಾಗಿದ್ದಾರೆ.

ದ್ರಾವಿಡ್ ಮತ್ತು ಲಕ್ಷ್ಮಣ್ ಇಬ್ಬರನ್ನೂ ಅವರವರ ಪಾತ್ರಗಳಿಗೆ ಒಪ್ಪಿಸುವುದು ಎಷ್ಟು ಕಷ್ಟವಾಗಿತ್ತು? ಎಂದು ಕೇಳಿದ್ದಕ್ಕೆ ಉತ್ತರಿಸಿದ ದಾದಾ, "ನೀವು ಅವರಿಗೆ ಆ ಜವಾಬ್ದಾರಿ ಎಷ್ಟು ಮಹೋನ್ನತವಾದದ್ದು ಎಂದು ಹೇಳಿದ್ರೆ, ಅದಕ್ಕೆ ಅವರು ಒಪ್ಪಿಕೊಳ್ಳುತ್ತಾರೆ. ಅವರಿಬ್ಬರನ್ನು ಪಡೆದಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಮತ್ತು ಭಾರತೀಯ ಕ್ರಿಕೆಟ್​ ಸುರಕ್ಷಿತ ಕೈಯಲ್ಲಿದೆ. ಭಾವನಾತ್ಮಕತೆಗಿಂತ ಅವರಿಬ್ಬರೂ ಭಾರತೀಯ ಕ್ರಿಕೆಟ್​ಗೆ ತಾವೂ ಏನಾದರೂ ಮಾಡಬೇಕೆಂದು ಬಯಸಿದ್ದಾರೆ ಎಂದು ಭಾರತ ಕ್ರಿಕೆಟ್​ಗೆ ಅದ್ಭುತ ತಳಪಾಯ ಹಾಕಕೊಟ್ಟ ನಾಯಕ ಹೇಳಿದ್ದಾರೆ.

ಲಕ್ಷ್ಮಣ್​ ಒಬ್ಬ ಅದ್ಭುತ ಮನುಷ್ಯ. ಭಾರತೀಯ ಕ್ರಿಕೆಟ್​​ನಲ್ಲಿ ಅವರು ಅತ್ಯುನ್ನತ ಹಿರಿಮೆ ಹೊಂದಿದ್ದಾರೆ. ಹಾಗಾಗಿ ಅವರ ಸಾಮರ್ಥ್ಯವೇ ಅವರನ್ನು ಆಯ್ಕೆ ಮಾಡಲು ನಮ್ಮನ್ನು ಪ್ರೇರೇಪಿಸಿತು. ರಾಹುಲ್(ದ್ರಾವಿಡ್​) ಎನ್​ಸಿಎನಲ್ಲಿ ​ಈಗಾಗಲೇ ಅತ್ಯುತ್ತಮವಾದ ಒಂದು ವ್ಯವಸ್ಥೆಯನ್ನು ರೂಪಿಸಿದ್ದಾರೆ. ಅದು ಖಂಡಿತವಾಗಿ ಲಕ್ಷ್ಮಣ್​ಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ ಎಂದು ಬಿಸಿಸಿಐ ಬಾಸ್ ತಿಳಿಸಿದ್ದಾರೆ.

ಲಾಭದಾಯಕ ಹುದ್ದೆಗಳನ್ನು ತ್ಯಾಗ ಮಾಡಲಿರುವ ಲಕ್ಷ್ಮಣ್​:

ದಾದಾ ಒತ್ತಾಯಕ್ಕೋ ಅಥವಾ ಭಾರತೀಯ ಕ್ರಿಕೆಟ್​ಗೆ ಸೇವೆ ಸಲ್ಲಿಸುವುದಕ್ಕೋ ಎನ್​ಸಿಎ ಮುಖ್ಯಸ್ಥ ಸ್ಥಾನವನ್ನು ಅಲಂಕರಿಸಿರುವ ಲಕ್ಷ್ಮಣ್​ ಈ ಹುದ್ದೆಗೇರುವ ಸಲುವಾಗಿ ತಮ್ಮ ಸಾಕಷ್ಟು ಹಣ ತಂದುಕೊಡುತ್ತಿದ್ದ ಸನ್​ರೈಸರ್ಸ್​ ಮೆಂಟರ್​ಶಿಪ್​, ಕಾಮೆಂಟೇಟರ್​ ಒಪ್ಪಂದ ಮತ್ತು ವಿವಿಧ ಸಂಸ್ಥೆಗಳಿಗೆ ಭಾರತೀಯ ಕ್ರಿಕೆಟ್​ ಬಗ್ಗೆ ಬರೆಯುತ್ತಿದ್ದ ಕಾಲಂಗಳನ್ನು ತ್ಯಜಿಸಲಿದ್ದಾರೆ. ಜೊತೆಗೆ, ಮುಂದಿನ ಮೂರು ವರ್ಷ ಅವರು ಭಾರತೀಯ ಕ್ರಿಕೆಟ್​ಗೆ ಸೇವೆ ಸಲ್ಲಿಸಲು ಹೈದರಾಬಾದ್​ನಿಂದ ಬೆಂಗಳೂರಿಗೆ ಕುಟುಂಬಸಮೇತರಾಗಿ ಶಿಫ್ಟ್​ ಆಗಲಿದ್ದಾರೆ. ಭಾರತೀಯ ಕ್ರಿಕೆಟ್​ಗೆ ನಿಷ್ಠರಾಗದಿದ್ದರೆ ಅದೆಲ್ಲಾ ಸುಲಭವಲ್ಲ ಎಂದು ಗಂಗೂಲಿ ಹೇಳಿದರು.

ಇದನ್ನೂ ಓದಿ: ಅನಿಲ್ ಕುಂಬ್ಳೆಯಿಂದ ತೆರವಾದ ಐಸಿಸಿ ಪುರುಷರ ಕ್ರಿಕೆಟ್​ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.