ನವದೆಹಲಿ : ಟೀಂ ಇಂಡಿಯಾ ಕ್ರಿಕೆಟ್ನ ಆಲ್ರೌಂಡರ್ ಅಕ್ಸರ್ ಪಟೇಲ್ ಹುಟ್ಟುಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್ ತಮ್ಮ ಬಹುದಿನದ ಗೆಳತಿ ಮೇಹಾ ಜೊತೆ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಮೇಹಾ ನವದೆಹಲಿಯಲ್ಲಿ ವಾಸವಾಗಿದ್ದು, ಆಹಾರ ತಜ್ಞೆ ಮತ್ತು ಪೌಷ್ಟಿಕತಜ್ಞೆಯಾಗಿದ್ದಾರೆ.
ಜನವರಿ 20ರಂದು 28ನೇ ವಸಂತಕ್ಕೆ ಕಾಲಿಟ್ಟಿರುವ ಅಕ್ಸರ್ ಪಟೇಲ್, ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದು ನನ್ನ ಜೀವನದ ಹೊಸ ಆರಂಭ. ಶಾಶ್ವತವಾಗಿ ಒಟ್ಟಿಗೆ ಜೀವನ ನಡೆಸಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಆಲ್ರೌಂಡರ್ ಅಕ್ಸರ್ ಪಟೇಲ್ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅನೇಕರು ವಿಶ್ ಮಾಡಿದ್ದು, ಪ್ರಮುಖವಾಗಿ ರಿಷಬ್ ಪಂತ್, ಉಮೇಶ್ ಯಾದವ್, ಉನದ್ಕತ್ ಮತ್ತು ಇಶನ್ ಕಿಶನ್ ಅಭಿನಂದಿಸಿದ್ದಾರೆ.
ಇದನ್ನೂ ಓದಿರಿ: 'ಸಿಎಂ ಅಭ್ಯರ್ಥಿಯಾಗಿ ನನ್ನ ಮುಖ ನೋಡಬಹುದಲ್ಲವೇ?' ಪ್ರಿಯಾಂಕಾ ಗಾಂಧಿ ಅಚ್ಚರಿಯ ಹೇಳಿಕೆ
2015ರಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಇವರು 2021ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದು, ಈವರೆಗೆ 5 ಟೆಸ್ಟ್ ಪಂದ್ಯಗಳಿಂದ 36 ವಿಕೆಟ್ ಪಡೆದುಕೊಂಡಿದ್ದಾರೆ. ಏಕದಿನದಲ್ಲಿ ಭಾರತದ ಪರ 38 ಪಂದ್ಯಗಳನ್ನಾಡಿರುವ ಅಕ್ಸರ್ ಪಟೇಲ್ 45 ವಿಕೆಟ್ ಪಡೆದುಕೊಂಡಿದ್ದು, 15 ಟಿ20 ಪಂದ್ಯಗಳಿಂದ 13 ವಿಕೆಟ್ ಕಿತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಅಕ್ಸರ್ ಪಟೇಲ್ ಮಿಂಚು ಹರಿಸಿದ್ದಾರೆ.
- " class="align-text-top noRightClick twitterSection" data="
">
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ