ETV Bharat / sports

ಇಂಗ್ಲೆಂಡ್​ ವಿರುದ್ಧದ T20, ODI ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ, ಕಿರಣ್​ಗೆ ಚೊಚ್ಚಲ ಬುಲಾವ್​​ - ಜೂಲನ್​ ಗೋಸ್ವಾಮಿ

ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ಮಹಿಳಾ ತಂಡ ಪ್ರಕಟಗೊಂಡಿದೆ. ತಂಡದಿಂದ ಹೊರಗುಳಿದಿದ್ದ ಜೂಲನ್​ ಗೋಸ್ವಾಮಿ ಕಮ್​ಬ್ಯಾಕ್ ಮಾಡಿದ್ದಾರೆ.

India womens squads announced
India womens squads announced
author img

By

Published : Aug 19, 2022, 9:33 PM IST

ಮುಂಬೈ: ಸೆಪ್ಟೆಂಬರ್​ ತಿಂಗಳಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಟಿ20 ಹಾಗೂ ಏಕದಿನ ಕ್ರಿಕೆಟ್ ಸರಣಿಗೆ ಭಾರತದ ಮಹಿಳಾ ತಂಡ ಇಂದು ಪ್ರಕಟಗೊಂಡಿದೆ. ಟಿ20 ತಂಡದಲ್ಲಿ ನಾಗಾಲ್ಯಾಂಡ್​ನ ಸ್ಫೋಟಕ ಬ್ಯಾಟರ್​​​ ಕಿರಣ್​ ಪ್ರಭು ನವಗಿರೆಗೆ ಚೊಚ್ಚಲ ಬುಲಾವ್​ ನೀಡಲಾಗಿದೆ.

ಇತ್ತೀಚೆಗೆ ಇಂಗ್ಲೆಂಡ್​​ನಲ್ಲಿ ಮುಕ್ತಾಯಗೊಂಡ ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತ್ತು. ಈ ಸರಣಿಯಲ್ಲಿ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದ ಹರ್ಮನ್​​ಪ್ರೀತ್ ಕೌರ್ ಬಳಗ ಚೊಚ್ಚಲ ಪ್ರಯತ್ನದಲ್ಲೇ ಫೈನಲ್​ಗೆ ಲಗ್ಗೆ ಹಾಕಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು, ಚಿನ್ನದ ಪದಕ ಮಿಸ್ ಮಾಡಿಕೊಂಡಿತ್ತು.

ಕಾಮನ್​​ವೆಲ್ತ್​ ಕ್ರೀಡಾಕೂಟದಲ್ಲಿ ತಂಡದ ಭಾಗವಾಗಿದ್ದ ಹರ್ಲಿನ್ ಡಿಯೋಲ್​, ಯಾಸ್ತಿಕಾ ಭಾಟಿಯಾಗೆ ಕೊಕ್​​ ನೀಡಲಾಗಿದ್ದು, ಟಿ20 ತಂಡಕ್ಕೆ ರಿಚಾ ಘೋಷ್​​ ಕಮ್​​ಬ್ಯಾಕ್ ಮಾಡಿದ್ದಾರೆ. ತಂಡವನ್ನ ಹರ್ಮನ್​ಪ್ರೀತ್ ಕೌರ್​ ಮುನ್ನಡೆಸಲಿದ್ದು, ಉಪನಾಯಕಿಯಾಗಿ ಸ್ಮೃತಿ ಮಂಧಾನ ಇದ್ದಾರೆ.

  • ODI Squad:
    Harmanpreet Kaur (C), Smriti Mandhana (VC), Shafali Verma, S Meghana, Deepti Sharma, Taniyaa Bhatia (WK), Yastika Bhatia (WK), Pooja Vastrakar, Sneh Rana, Renuka Thakur, Meghna Singh, R Gayakwad, H Deol, D Hemalatha, Simran Dil Bahadur, Jhulan Goswami, J Rodrigues

    — BCCI Women (@BCCIWomen) August 19, 2022 " class="align-text-top noRightClick twitterSection" data=" ">

ಭಾರತದ T20I ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಜೆಮಿಮಾ ರಾಡ್ರಿಗಸ್, ಸ್ನೇಹ ರಾಣಾ, ರೇಣುಕಾ ಠಾಕೂರ್, ಮೇಘನಾ ಸಿಂಗ್, ರಾಧಾ ಯಾದವ್, ಸಬ್ಬಿನೇನಿ ಮೇಘನಾ, ರಾಜೇಶ್ವರಿ ಗಾಯಕ್ವಾಡ್, ದಯಾಳನ್ ಹೇಮಲತಾ, ಸಿಮ್ರಾನ್ ದಿಲ್ ಬಹದ್ದೂರ್, ರಿಚಾ ಘೋಷ್ (WK), ಕೆ.ಪಿ. ನವಗಿರೆ

ಇನ್ನೂ ಏಕದಿನ ಸರಣಿಗೂ ಮಹಿಳಾ ತಂಡ ಪ್ರಕಟಗೊಂಡಿದೆ. ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಅನುಭವಿ ಆಟಗಾರ್ತಿ ಜೂಲನ್​ ಗೋಸ್ವಾಮಿ ಹಾಗೂ ಜೆಮಿಯಾ ರಾಡ್ರಿಗಸ್​​ ಮರಳಿದ್ದಾರೆ. ಆದರೆ, ಅನುಭವಿ ಪೂನಂ ಯಾದವ್​ಗೆ ಮಣೆ ಹಾಕಿಲ್ಲ.

ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಕಾಂಗರೂ ವಿರುದ್ಧ ಮೊದಲ ಪಂದ್ಯ ಸೋತ ಭಾರತ

ಭಾರತದ ODI ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ (WK), ಯಾಸ್ತಿಕಾ ಭಾಟಿಯಾ (WK), ಪೂಜಾ ವಸ್ತ್ರಾಕರ್, ಸ್ನೇಹ್ ರಾಣಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ದಯಾಲನ್ ಹೇಮಲತಾ, ಸಿಮ್ರಾನ್ ದಿಲ್ ಬಹದ್ದೂರ್, ಜೂಲನ್ ಗೋಸ್ವಾಮಿ, ಜೆಮಿಮಾ ರೋಡ್ರಿಗಸ್

ಸೆಪ್ಟೆಂಬರ್​ ತಿಂಗಳಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತದ ಮಹಿಳಾ ತಂಡ ಐಸಿಸಿ ಚಾಂಪಿಯನ್​ಶಿಪ್​ನ ಭಾಗವಾಗಿ ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಸೆಪ್ಟೆಂಬರ್​ 10ರಿಂದ ಈ ಸರಣಿ ಆರಂಭಗೊಳ್ಳಲಿದೆ. ಸೆ. 10, 13, 15ರಂದು ಟಿ20 ಪಂದ್ಯಗಳು ನಡೆಯಲಿದ್ದು, ಸೆ. 18,21 ಹಾಗೂ 24ರಂದು ಕ್ರಮವಾಗಿ ಏಕದಿನ ಪಂದ್ಯಗಳು ಆಯೋಜನೆಗೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.