ಬರ್ಮಿಂಗ್ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್ನ ಪ್ರಮುಖ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತಿದೆ. ಆಲ್‌ರೌಂಡ್ ಪ್ರದರ್ಶನದೊಂದಿಗೆ ಬಾರ್ಬಡೋಸ್ನ್ನು ಸೋಲಿಸಿದ ಭಾರತ ತಂಡ ಗ್ರೂಪ್-ಎಯಿಂದ ಸೆಮಿಸ್ಗೆ ಹಾರಿದೆ. ಬ್ಯಾಟಿಂಗ್‌ನಲ್ಲಿ ರೋಡ್ರಿಗಾಸ್ ಔಟಾಗದೇ 56 ಗಳಿಸಿದ್ರೆ, ಬೌಲಿಂಗ್ನಲ್ಲಿ ರೇಣುಕಾ ಸಿಂಗ್ 4 ವಿಕೆಟ್ ಪಡೆದು ವಿಜೃಂಭಿಸಿದರು.
ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಮಹಿಳಾ ತಂಡಕ್ಕೆ ಆರಂಭಿಕ ಆಘಾತ ಎದುರಿಸಿತು. ಶಕೆರಾ ಸೆಲ್ಮಾನ್ ಹಾಕಿದ ಎರಡನೇ ಓವರ್ನಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 5 ರನ್‌ಗಳಿಸಿ ಪೆವಿಲಿಯನ್ ಸೇರಿದರು. ತದನಂತರ ಶಫಾಲಿ ವರ್ಮ್ (43) ಮತ್ತು ರೋಡ್ರಿಗ್ರಾಸ್ (56*) ಬಿರುಸಿನ ಆಟವಾಡಿ ತಂಡದ ಮೊತ್ತವನ್ನು ಏರಿಸಿದರು.
ಇವರಿಬ್ಬರೂ ಒಟ್ಟಾಗಿ 71 ರನ್ ಕಲೆ ಹಾಕಿದರು. 9 ಓವರ್‌ಲೋ ಶಫಾಲಿ ರನೌಟ್ ಆದರು. ಬಳಿಕ ಬಂದ ನಾಯಕಿ ಹರ್ಮನ್ ಪ್ರೀತ್ ಕೌರ್ ಡಕೌಟ್ ಆದರು. ಆ ನಂತರ ತಾನಿಯಾ (6) ಕೂಡ ನಿರಾಶೆ ಮೂಡಿಸಿದರು. ರೋಡ್ರಿಗಾಸ್ ಜೊತೆಗೂಡಿದ ದೀಪ್ತಿ ಶರ್ಮಾ (31) ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾದರು. ಒಟ್ಟಿನಲ್ಲಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
163 ರನ್ ಗುರಿ ಬೆನ್ನತ್ತಿದ್ದ ಬಾರ್ಬಡೋಸ್ ಬ್ಯಾಟರ್‌ಗಳು ಭಾರತ ತಂಡದ ಬೌಲಿಂಗ್ ದಾಳಿಗೆ ಕುಸಿದರು. ಆರಂಭದಿಂದ ಭಾರತ ಬೌಲರ್‌ಗಳು ಕ್ರಮವಾಗಿ ವಿಕೆಟ್‌ಗಳು ತೆಗೆಯುತ್ತಲೇ ಮುಂದೆ ಸಾಗಿದರು. ನಿಗದಿತ 20 ಓವರ್ಗಳಿಗೆ ಬಾರ್ಬಡೋಸ್ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 62 ರನ್‌ಗಳಿಸಿ ಸೋಲು ಕಂಡಿತು.
ಬಾರ್ಬಡೋಸ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದರು. ಭಾರತದ ಪರ ರೇಣುಕಾ ಸಿಂಗ್ 4 ವಿಕೆಟ್‌ಗಳು ಪಡೆದು ಅದ್ಭುತ ಪ್ರದರ್ಶನ ನೀಡಿದ್ರು, ಮೇಘನಾ ಸಿಂಗ್, ಸ್ನೇಹ ರಾಣಾ, ರಾಧಾ ಯಾದ್, ಹರ್ಮನ್ ತಲಾ ಒಂದೊಂದು ವಿಕೆಟ್‌ಗಳನ್ನು ಪಡೆದರು. ಆಗಸ್ಟ್ 6 ರಂದು ಕಾಮನ್‌ವೆಲ್ತ್ ಗೇಮ್ಸ್ ಸೆಮಿಫೈನಲ್ಸ್ಗಳು ನಡೆಯಲಿವೆ.
ಓದಿ: ಆಸ್ಟ್ರೇಲಿಯಾ, ದ.ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಸರಣಿಗೆ ವೇಳಾಪಟ್ಟಿ ಪ್ರಕಟ