ETV Bharat / sports

ಮಂಧಾನಾ - ಶೆಫಾಲಿ ಸ್ಫೋಟಕ ಆಟ: ಲಂಕಾ ವಿರುದ್ಧ 2ನೇ ಏಕದಿನ ಗೆದ್ದು ಸರಣಿ ಕೈವಶ ಮಾಡಿಕೊಂಡ ಕೌರ್ ಬಳಗ - ಭಾರತ ಮಹಿಳಾ ತಂಡ

ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಹರ್ಮನ್​ ಪ್ರೀತ್ ಕೌರ್ ಬಳಗ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.

India Women win against Sri lanka i
India Women win against Sri lanka i
author img

By

Published : Jul 4, 2022, 4:39 PM IST

ಪಲ್ಲೆಕೆಲೆ(ಶ್ರೀಲಂಕಾ): ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ 10 ವಿಕೆಟ್​ಗಳ ಗೆಲುವು ದಾಖಲು ಮಾಡಿರುವ ಭಾರತ, ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 25.4 ಓವರ್​​ಗಳಲ್ಲಿ ಗುರಿ ಬೆನ್ನತ್ತಿದ ಭಾರತ ಭರ್ಜರಿ ಗೆಲುವು ದಾಖಲು ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮಹಿಳೆಯರ ತಂಡ 50 ಓವರ್​​ಗಳಲ್ಲಿ 10 ವಿಕೆಟ್ ಕಳೆದುಕೊಂಡು ಕೇವಲ 173ರನ್​ ಮಾತ್ರ ಗಳಿಸಲು ಶಕ್ತವಾಯಿತು. ತಂಡದ ಪರ ನಾಯಕಿ ಅಥಾಪತ್ತು(27), ಅನುಷ್ಕಾ(25), ಸಿಲ್ವಾ(32) ಹಾಗೂ ಕಾಂಚನಾ(47)ರನ್​ಗಳಿಕೆ ಮಾಡಿದರು. ಭಾರತದ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ರಿಂಕು ಸಿಂಗ್​​ 4 ವಿಕೆಟ್​​ ಪಡೆದುಕೊಂಡರೆ, ಮೇಘನಾ ಸಿಂಗ್ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ: ಲಂಕಾ ವಿರುದ್ಧ ಗೆದ್ಧ ಭಾರತೀಯ ವನಿತೆಯರು; ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ

174 ರನ್​​ಗಳ ಗುರಿ ಬೆನ್ನತ್ತಿದ ಭಾರತ ಯಾವುದೇ ವಿಕೆಟ್​ನಷ್ಟವಿಲ್ಲದೇ 25.4 ಓವರ್​​ಗಳಲ್ಲಿ 174ರನ್​​ಗಳಿಕೆ ಮಾಡಿ, ಗೆಲುವಿನ ನಗೆ ಬೀರಿತು. ತಂಡದ ಪರ ಆರಂಭಿಕರಾದ ಶೆಫಾಲಿ ಶರ್ಮಾ ಅಜೇಯ 71ರನ್​ ಹಾಗೂ ಸ್ಮೃತಿ ಮಂಧಾನ ಅಜೇಯ 94 ರನ್​​ಗಳಿಕೆ ಮಾಡಿ, ತಂಡವನ್ನ ಗೆಲುವಿನ ದಡ ಸೇರಿಸಿದರು. ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ ರಿಂಕು ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳ ಗೆಲುವು ದಾಖಲು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.