ETV Bharat / sports

ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಗೆಲುವಿನ ನಿರೀಕ್ಷೆ: ಭಾರತೀಯರ ಸ್ಪಿನ್​ ಬಲೆಗೆ ಬೀಳುತ್ತಾ ಕಾಂಗರೂ ಪಡೆ? - ಶುಭಾ ಸತೀಶ್

India Women vs Australia Women Test: ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯವನ್ನು ಬೃಹತ್​ ರನ್​ ಅಂತರದಿಂದ ಗೆದ್ದ ಭಾರತ ತಂಡ ಅದೇ ಆತ್ಮವಿಶ್ವಾಸದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ.

India Women vs Australia Women Test
India Women vs Australia Women Test
author img

By ETV Bharat Karnataka Team

Published : Dec 20, 2023, 10:47 PM IST

ಮುಂಬೈ (ಮಹಾರಾಷ್ಟ್ರ): ಇಂಗ್ಲೆಂಡ್‌ ಮಣಿಸಿದ ನಂತರ ಸಾಂಪ್ರದಾಯಿಕ ಕ್ರಿಕೆಟ್​ ಮಾದರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಗೆಲುವು ಸಾಧಿಸುವ ಗುರಿಯೊಂದಿಗೆ ಹರ್ಮನ್​ಪ್ರೀತ್​ ಕೌರ್​ ಪಡೆ ಮೈದಾನಕ್ಕಿಳಿಯುತ್ತಿದೆ. ಗುರುವಾರದಿಂದ (ಡಿ.21) ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗಲಿದೆ. 40 ವರ್ಷದ ನಂತರ (1984ರಲ್ಲಿ ಇಲ್ಲಿ ಆಡಿದ್ದರು) ಮುಂಬೈನ ವಾಂಖೆಡೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿವೆ.

46 ವರ್ಷಗಳ ಕಾಲ ನಡೆದ ಎರಡು ತಂಡ 10 ಟೆಸ್ಟ್‌ಗಳಲ್ಲಿ ಮುಖಾಮುಖಿ ಆಗಿದ್ದು, ಭಾರತ ಒಂದೂ ಗೆಲುವನ್ನು ಸಾಧಿಸಿಲ್ಲ. ಐಸಿಸಿ ಟೂರ್ನಿಗಳಿಂದ ಹಿಡಿದು, ದ್ವಿಪಕ್ಷೀಯ ಸರಣಿಯಳಲ್ಲೂ ಆಸೀಸ್​ ವನಿತೆಯರು ಬಲಿಷ್ಟವಾಗಿದ್ದಾರೆ. ಹೀಗಾಗಿ ಭಾರತಕ್ಕೆ ಈ ಸರಣಿ ಕಠಿಣವಾಗಿರುವುದಂತೂ ಪಕ್ಕಾ. ಆದರೆ ಇಂಗ್ಲೆಂಡ್​ ವಿರುದ್ಧ ಭಾರತದ ಸ್ಪಿನ್ನರ್​ಗಳು ಮಾಡಿದ ಕಮಾಲ್​ ಆಸ್ಟ್ರೇಲಿಯಾ ಮೇಲೂ ನಡೆದರೆ ತಂಡದ ಗೆಲುವಿನ ಸಾಧ್ಯತೆ ಹೆಚ್ಚಿದೆ.

ಕಳೆದ ವಾರ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬೌಲರ್‌ಗಳು, ವಿಶೇಷವಾಗಿ ದೀಪ್ತಿ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದರು. ಆಂಗ್ಲ ವನಿತೆಯರ ವಿರುದ್ಧ ಭಾರತ 347 ರನ್‌ಗಳ ಬೃಹತ್ ಜಯವನ್ನು ಗಳಿಸಿತು. ಇದು ಮಹಿಳಾ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಅಂತರದ ಗೆಲುವಾಗಿದೆ. ಈಗ ಅದೇ ತಂಡ ಆಸೀಸ್​ ವಿರುದ್ಧವೂ ಆಡುತ್ತಿದ್ದು ವಾಂಖೆಡೆ ಮೈದಾನದಲ್ಲಿ ಮತ್ತೊಮ್ಮೆ ಸ್ಪಿನ್​ ವರ್ಕ್​ ಆದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಬಹುದು.

ಬೌಲಿಂಗ್​ ಮೇಲೆ ಭರವಸೆ: ತವರಿನ ಪಿಚ್​ನಲ್ಲಿ ಭಾರತದ ಬೌಲಿಂಗ್​ ಮೇಲೆ ಒಂದಂಶ ಹೆಚ್ಚಿನ ಭರವಸೆ ಇದೆ. ಇಂಗ್ಲೆಂಡ್​ಗೆ ಕಾಡಿದ ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್ ಮತ್ತು ಪೂಜಾ ವಸ್ತ್ರಾಕರ್ ಎದುರಾಳಿಗಳಿ ಮಾರಕರಾಗಬಹುದು. ಇಂಗ್ಲೆಂಡ್​ ವಿರುದ್ಧ ಇದೇ ತ್ರಿವಳಿ ಅಸ್ತ್ರಗಳು ಕೆಲಸ ಮಾಡಿತ್ತು. ಆಸೀಸ್​ ತಂಡವನ್ನೂ ಇವರೇ ಕಾಡುವ ನಿರೀಕ್ಷೆ ಇದೆ.

ಶುಭಾ ಅನುಮಾನ: ಹರ್ಮನ್‌ಪ್ರೀತ್ ಕೌರ್ (49 ಮತ್ತು 44 ನಾಟೌಟ್), ಜೆಮಿಮಾ ರಾಡ್ರಿಗಸ್ (68) ಮತ್ತು ಯಾಸ್ತಿಕಾ ಭಾಟಿಯಾ (66) ಮತ್ತು ಶುಭಾ ಸತೀಶ್ (69) ಇಂಗ್ಲೆಂಡ್ ವಿರುದ್ಧ ಉತ್ತಮ ಪರಿಣಾಮಕಾರಿ ಬ್ಯಾಟಿಂಗ್ ಮಾಡಿದ್ದರು. ಶುಭಾ ಸತೀಶ್ ಆಂಗ್ಲರ ವಿರುದ್ಧ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದು ನಾಳಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಅವರ ಬದಲಿಯಾಗಿ ತಂಡಕ್ಕೆ ಪ್ರಿಯಾ ಪುನಿಯಾ ಅಥವಾ ಹರ್ಲೀನ್ ಡಿಯೋಲ್ ಸೇರಿಕೊಳ್ಳುವ ನಿರೀಕ್ಷೆ ಇದೆ.

ಉತ್ತಮ ಆರಂಭದ ಕೊರತೆ: ಆಂಗ್ಲರ ವಿರುದ್ಧ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಭಾರತಕ್ಕೆ ದೊಡ್ಡ ಆರಂಭವನ್ನು ಕೊಡುವಲ್ಲಿ ಎರಡೂ ಇನ್ನಿಂಗ್ಸ್​ನಲ್ಲಿ ಎಡವಿದ್ದಾರೆ. ಹೀಗಾಗಿ ಈ ಇಬ್ಬರ ಮೇಲೆ ಹೆಚ್ಚಿನ ಒತ್ತಡ ಇದ್ದು ಮೊದಲ ವಿಕೆಟ್​ ಕನಿಷ್ಟ 100 ರನ್​ಗಳ ಪಾಲುದಾರಿಕೆ ಮಾಡಿಕೊಡಬೇಕಿದೆ.

ಹೀಲಿ ನಾಯಕತ್ವಕ್ಕೆ ಪರೀಕ್ಷೆ: 40 ವರ್ಷಗಳ ನಂತರ ಮುಂಬೈನ ವಾಂಖೆಡೆಯಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಆಡುತ್ತಿದೆ. ಈ ಟೆಸ್ಟ್ ಅಲಿಸ್ಸಾ ಹೀಲಿ ನಾಯಕತ್ವಕ್ಕೆ ದೊಡ್ಡ ಪರೀಕ್ಷೆಯಾಗಿದೆ. ಆಸೀಸ್​ ತಂಡದ ಯಶಸ್ವಿ ನಾಯಕಿ ಮೆಗ್ ಲ್ಯಾನಿಂಗ್ ನಿವೃತ್ತಿಯ ನಂತರ ಅಲಿಸ್ಸಾ ಹೀಲಿ ಮುಂದಾಳತ್ವದಲ್ಲಿ ತಂಡ ಮೊದಲ ಪ್ರವಾಸ ಇದಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್ ಎರಡು ವರ್ಷಗಳ ಹಿಂದೆ ಕರಾರಾದಲ್ಲಿ ನಡೆದಿತ್ತು. ಇದರಲ್ಲಿ ಸ್ಮೃತಿ ಮಂಧಾನ ಗಳಿಸಿದ 127 ಪಂದ್ಯದಲ್ಲಿ ಡ್ರಾ ಸಾಧಿಸಲು ಭಾರತಕ್ಕೆ ನೆರವಾಗಿತ್ತು.

ಆದರೆ ಅನುಭವಿ ಎಲಿಸ್ ಪೆರ್ರಿ, ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಆಸ್ಟ್ರೇಲಿಯಾ ತಂಡದ ಬಲವಾಗಿದೆ. ಆಸ್ಟ್ರೇಲಿಯದನ ವನಿತೆಯರಿಗೆ ಭಾರತದ ಈ ಪಿಚ್​ನಲ್ಲಿ ವೈಟ್​ ಬಾಲ್​ ಕ್ರಿಕೆಟ್​ನ ಅನುಭವ ಇದೆ. ಉದ್ಘಾಟನಾ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯೂಪಿಎಲ್) ಆಸೀಸ್​ ತಂಡದ ಹೆಚ್ಚಿನ ಆಟಗಾರ್ತಿಯರು ಭಾಗವಹಿಸಿದ್ದರು. ಹೀಗಾಗಿ ಕಾಂಗರೂ ಪಡೆ ಕಠಿಣ ಸವಾಲಾಗುವುದರಲ್ಲಿ ಅನುಮಾನ ಇಲ್ಲ.

ತಂಡಗಳು- ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್​ ಕೀಪರ್​), ರಿಚಾ ಘೋಷ್, ಸ್ನೇಹ ರಾಣಾ, ಶುಭಾ ಸತೀಶ್, ಹರ್ಲೀನ್ ಡಿಯೋಲ್, ಸೈಕಾ ಇಶಾಕ್, ರೇಣುಕಾ ಸಿಂಗ್ ಠಾಕೂರ್, ಟೈಟಾಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್

ಆಸ್ಟ್ರೇಲಿಯಾ: ಡಾರ್ಸಿ ಬ್ರೌನ್, ಲಾರೆನ್ ಚೀಟಲ್, ಹೀದರ್ ಗ್ರಹಾಂ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಅಲಿಸ್ಸಾ ಹೀಲಿ (ನಾಯಕಿ & ವಿಕೆಟ್​ ಕೀಪರ್​), ಜೆಸ್ ಜೊನಾಸ್ಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಾಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲ್ಲಿಸ್ ಪೆರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್.

ಪಂದ್ಯ: ಡಿ.21ರಿಂದ 25, ಬೆಳಿಗ್ಗೆ 9:30ಕ್ಕೆ

ಎಲ್ಲಿ: ಮುಂಬೈನ ವಾಂಖೆಡೆ ಮೈದಾನ

ವೀಕ್ಷಿಸುವುದು ಎಲ್ಲಿ?: ಜಿಯೋಸಿನಿಮಾ ಡಿಜಿಟಲ್​ ವೇದಿಕೆ ಹಾಗೂ ಸ್ಪೋರ್ಟ್ಸ್​ 18 ಚಾನಲ್​ನಲ್ಲಿ ಲಭ್ಯ. ​

ಇದನ್ನೂ ಓದಿ: ನಾಳೆ ದ.ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯ​​: ಉತ್ತಮ ಆರಂಭದ ನಿರೀಕ್ಷೆಯಲ್ಲಿ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.