ಟಿ20 ವಿಶ್ವಕಪ್ನಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋತು ಸುಣ್ಣವಾಗಿದೆ. ಹೀಗಾಗಿ ಪಾಕ್ ನಾಯಕ ಬಾಬರ್ ಅಜಂ ಹಾಗೂ ಬಳಗದ ವಿರುದ್ಧ ಇಡೀ ಪಾಕಿಸ್ತಾನವೇ ಬೆಂಕಿ ಉಗುಳುತ್ತಿದೆ. ಇದರ ನಡುವೆ ಮಾಜಿ ವೇಗಿ ಶೋಯಬ್ ಅಖ್ತರ್, ಟೀಂ ಇಂಡಿಯಾ ಬಗ್ಗೆ ಹೊಟ್ಟೆಕಿಚ್ಚಿನ ಮಾತುಗಳನ್ನಾಡಿದ್ದಾರೆ.
ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ತಂಡ ಸೋಲು ನಿಜವಾಗಿಯೂ ಕಂಗೆಡುವಂತೆ ಮಾಡಿದೆ. ನಾನು ಈ ಹಿಂದೆಯೇ ಪಾಕಿಸ್ತಾನ ತಂಡ ಇದೇ ವಾರ ಮನೆಗೆ ಬರಲಿದೆ ಎಂದು ಹೇಳಿದ್ದೆ. ಭಾರತ ತಂಡವೂ ಕೂಡ ಸೆಮಿಫೈನಲ್ಸ್ ಆಡಿ ಮುಂದಿನ ವಾರ ವಾಪಸ್ ಬರಲಿದೆ. ಅವರು ಅಷ್ಟೇನೂ ತೀಸ್ ಮಾರ್ಖಾನ್ಗಳಲ್ಲ ಎಂದು ಅಖ್ತರ್ ಯೂಟ್ಯೂಬ್ ಚಾನೆಲ್ವೊಂದರಲ್ಲಿ ಹೇಳಿದ್ದಾರೆ.
ಇದೇ ವೇಳೆ ಪಾಕ್ ತಂಡದ ಪ್ರದರ್ಶನ ಸಾಧಾರಣವಾಗಿತ್ತು. ಅನರ್ಹ ಆಟಗಾರರನ್ನು ಆಯ್ಕೆ ಮಾಡಿ, ಒಳ್ಳೆಯ ಆಟಗಾರರನ್ನು ಹೊರಗೆ ಕೂರಿಸಲಾಗಿದೆ. ನೀವು ಮಾಡಿದ ಕೆಲಸ ನಿಮ್ಮನ್ನು ನರಕಕ್ಕೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ದೇಶಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕ ನನಗಿದೆ. ನೀವು ಎಲ್ಲವನ್ನೂ ಹಾಳು ಮಾಡಿದ್ದೀರಿ ಎಂದೂ ಮಾಜಿ ವೇಗಿ ಪಾಕ್ ಕ್ರಿಕೆಟ್ ಬೋರ್ಡ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಮುಖಭಂಗ: ಪಿಸಿಬಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಪಾಕ್ ಮಾಜಿ ಕ್ರಿಕೆಟಿಗ