ETV Bharat / sports

India vs West Indies: ಗಯಾನ ಮೈದಾನದಲ್ಲಿ ಭಾರತಕ್ಕೆ ಮುಂದಿನ ಎರಡು ಟಿ20 ಸವಾಲು!.. ಪಿಚ್​ ಹಿನ್ನೆಲೆ ಹೀಗಿದೆ.. - ETV Bharath Karnataka

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಎರಡು ಮತ್ತು ಮೂರನೇ ಟಿ20 ಪಂದ್ಯಗಳು ನಡೆಯಲಿವೆ. ಗಯಾನಾ ಕ್ರಿಡಾಂಗಣದ ಅಂಕಿ-ಅಂಶ ಇಂತಿದೆ..

india vs west indies 2nd and 3rd T20 at providence stadium guyana

author img

By

Published : Aug 5, 2023, 7:49 PM IST

ಗಯಾನಾ (ವೆಸ್ಟ್​ ಇಂಡೀಸ್​): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವಿಂಡೀಸ್ 1-0ಯಿಂದ ಮುನ್ನಡೆಯಲ್ಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಗಯಾನದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿವೆ. ದ್ವಿತೀಯ ಪಂದ್ಯ ನಾಳೆ ಮತ್ತು ಮೂರನೇ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ. ಪ್ರಾವಿಡೆನ್ಸ್ ಸ್ಟೇಡಿಯಂನ ಹಿಂದಿನ ಪಂದ್ಯಗಳಲ್ಲಿ ಟಿ20 ಸರಾಸರಿ ಸ್ಕೋರ್​ಗಳು ಬಂದಿವೆ. ಹೀಗಾಗಿ ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಣ ಪಂದ್ಯ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.

ಗಯಾನಾದಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂ ಅನ್ನು 2006 ರಲ್ಲಿ ನಿರ್ಮಿಸಲಾಯಿತು. ಈ ಮೈದಾನದಲ್ಲಿ ನಡೆಯುವ ಪಂದ್ಯವನ್ನು ಒಟ್ಟು 15000 ಪ್ರೇಕ್ಷಕರು ಕುಳಿತುಕೊಂಡು ವೀಕ್ಷಿಸಬಹುದಾಗಿದೆ. ಈ ಮೈದಾನದಲ್ಲಿ ಮೂರು ಮಾದರಿಯ ಕ್ರಿಕೆಟ್​ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿ 2010 ಏಪ್ರಿಲ್ 30 ರಂದು ಮೊದಲ ಟಿ20 ಪಂದ್ಯವನ್ನು ಆಡಿಸಲಾಗಿ​ತ್ತು. ಇದರಲ್ಲಿ ನ್ಯೂಜಿಲೆಂಡ್​ ವೆಸ್ಟ್​ ಇಂಡೀಸ್​ ವಿರುದ್ಧ 2 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಕೊನೆಯದಾಗಿ ಇಲ್ಲಿ 2022 ಜುಲೈ 7ರಂದು ವಿಂಡೀಸ್​ ಮತ್ತು ಬಾಂಗ್ಲಾದೇಶ ಪಂದ್ಯವನ್ನಾಡಿತ್ತು. ಇದರಲ್ಲಿ ವೆಸ್ಟ್​​ ಇಂಡೀಸ್​ ತಂಡ 5 ವಿಕೆಟ್​ಗಳ ಗೆಲುವನ್ನು ದಾಖಲಿಸಿತ್ತು.

ಪ್ರಾವಿಡೆನ್ಸ್ ಸ್ಟೇಡಿಯಂ ಗಯಾನಾದ ಈ ಮೈದಾನದಲ್ಲಿ ಇದುವರೆಗೆ ಒಟ್ಟು 11 ಟಿ 20 ಪಂದ್ಯಗಳನ್ನು ಆಡಿಸಲಾಗಿದೆ. 7 ಪಂದ್ಯಗಳನ್ನು ವೆಸ್ಟ್ ಇಂಡೀಸ್ ತಂಡ ಆಡಿದ್ದು, ಅದರಲ್ಲಿ 3 ಗೆದಿದೆ ಮತ್ತು 2 ರಲ್ಲಿ ಸೋತಿದೆ. ಹಾಗೇ ಎರಡು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಮೈದಾನದಲ್ಲಿ ಭಾರತೀಯ ಕ್ರಿಕೆಟ್ ತಂಡ 6 ಆಗಸ್ಟ್ 2019 ರಂದು ಒಂದು ಟಿ20 ಪಂದ್ಯವನ್ನು ಆಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 7 ವಿಕೆಟ್​ನಿಂದ ಮಣಿಸಿತ್ತು.

ಪ್ರಾವಿಡೆನ್ಸ್ ಸ್ಟೇಡಿಯಂ ಪಿಚ್ ವರದಿ: ಪ್ರಾವಿಡೆನ್ಸ್ ಸ್ಟೇಡಿಯಂ ಪಿಚ್ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಮೈದಾನದಲ್ಲಿ ಟಿ20 ಸರಾಸರಿಯ ಸ್ಕೋರ್​ ದಾಖಲಾಗಿದ್ದು, 123 ಇಲ್ಲಿನ ಸರಾಸರಿಯಾಗಿದೆ. ಪಿಚ್​ ಹಳೆಯದಾಗುತ್ತ ನಿಧಾನ ಆಗುವುದರಿಂದ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಪಿನ್​ಗೆ ಸಹಾಯಾಗುವ ಸಾಧ್ಯತೆ ಇದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 4 ಬಾರಿ ಗೆದ್ದಿದ್ದು, ಗುರಿ ಬೆನ್ನಟ್ಟಿದ ತಂಡಗಳು 4 ಬಾರಿ ಗೆದ್ದಿವೆ. ಉಳಿದ 3 ಪಂದ್ಯಗಳನ್ನು ರದ್ದುಗೊಳಿಸಲಾಗಿದೆ.

ಪ್ರಾವಿಡೆನ್ಸ್ ಸ್ಟೇಡಿಯಂ ಹವಾಮಾನ ಮುನ್ಸೂಚನೆ: ಗಯಾನಾದ ಜಾರ್ಜ್‌ಟೌನ್‌ನಲ್ಲಿ ಹವಾಮಾನ ಮುನ್ಸೂಚನೆಯ ಪ್ರಕಾರ 32 ಡಿಗ್ರಿ ಸೆಲ್ಸಿಯಸ್​ ತಾಪಮಾನ ಇರುವ ನಿರೀಕ್ಷೆ ಇದೆ. ನಾಳೆ ಮೋಡ ಕವಿದ ವಾತಾವರಣ ಹಾಗೂ ಲಘು ಮಳೆಯಾಗುವ ಸಾಧ್ಯತೆಯಿದೆ. ಮಳೆ ಮುನ್ಸೂಚನೆ ಮುಂಜಾನೆ 10ಕ್ಕೆ ಇರುವುದರಿಂದ ಪಂದ್ಯಕ್ಕೆ ಅಡಚಣೆ ಆಗುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಟಿ- 20ಯಲ್ಲಿ ಅಲ್ಪ ಮೊತ್ತದ ಗುರಿಯೊಂದಿಗೆ ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿದ ತಂಡಗಳು ಇವೇ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.