ETV Bharat / sports

ಎರಡನೇ ಪಂದ್ಯದಲ್ಲಿ ಗಾಯಕ್ವಾಡ್​ಗೆ ಸಿಗಲಿದೆಯೇ ಆರಂಭಿಕನ ಸ್ಥಾನ: ಸರಣಿ ಗೆಲ್ಲಲು ಹಾರ್ದಿಕ್​ ಚಿಂತನೆ - ETV Bharath Karnataka

ಭಾರತ ಪ್ರವಾಸದಲ್ಲಿರುವ ಲಂಕಾಗೆ ನಾಳೆ ಎರಡನೇ ಟಿ20 ಕದನ - ಸರಣಿ ಸಮಬಲ ಸಾಧಿಸುವಲ್ಲಿ ಸಿಂಹಳೀಯರ ಕಣ್ಣು - ಗಿಲ್​ಗೆ ಬೆಂಚ್​ ಕಾಯಿಸಿ ಗಾಯಕ್ವಾಡ್​ಗೆ ಸಿಗಲಿದೆಯೇ ಸ್ಥಾನ - ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿ ಭಾರತ.

india vs sri lanka 2nd t20
ಸರಣಿ ಗೆಲ್ಲಲು ಹಾರ್ದಿಕ್​ ಚಿಂತನೆ
author img

By

Published : Jan 4, 2023, 7:07 PM IST

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಟಿ-20 ಸರಣಿಯ ಎರಡನೇ ಪಂದ್ಯ ಪುಣೆಯಲ್ಲಿ ನಡೆಯಲಿದೆ. ಭಾರತ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಎರಡು ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಶ್ರೀಲಂಕಾಗೆ 163 ರನ್‌ಗಳ ಗುರಿ ನೀಡಿತ್ತು. ಆದರೆ, ಇಡೀ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ವೇಗದ ಬೌಲರ್ ಶಿವಂ ಮಾವಿ ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ ಪಡೆದರು. ಹರ್ಷಲ್ ಮತ್ತು ಉಮ್ರಾನ್ ಮಲಿಕ್ ತಲಾ ಎರಡು ವಿಕೆಟ್ ಪಡೆದರು.

ಎರಡನೇ ಪಂದ್ಯಕ್ಕೆ ಭಾರತ ಬಹುತೇಕ ಗೆದ್ದ ತಂಡವನ್ನೇ ಇಳಿಸುವ ಸಾಧ್ಯತೆ ಇದೆ. ಆದರೆ, ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶುಭ್​ಮನ್​ ಗಿಲ್​ ವಿಫಲತೆ ಕಂಡಿರುವುದರಿಂದ ಅವರ ಜಾಗಕ್ಕೆ ಋತುರಾಜ್​ ಗಾಯಕ್ವಾಡ್ ಆಡಿಸುವ ಸಾಧ್ಯತೆ ಇದೆ. ಆದರೆ, ಒಂದೇ ಪಂದ್ಯದ ಆಟದಿಂದ ಗಿಲ್​ ಅವರನ್ನು ಕೈ ಬಿಡುವುದು ಸೂಕ್ತವಾಗಿರುವುದಿಲ್ಲ. ಅವರ ಬ್ಯಾಟಿಂಗ್​ ಮೇಲೆ ಭರವಸೆ ಹೆಚ್ಚಿರುವುದರಿಂದ ಇನ್ನೊಂದು ಅವಕಾಶ ನೀಡುವ ಸಾಧ್ಯತೆಯೂ ಇದೆ. ​

ರಿತುರಾಜ್ ಇದುವರೆಗೆ ಟೀಂ ಇಂಡಿಯಾ ಪರ 9 ಟಿ-20 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 16.88 ಸರಾಸರಿಯಲ್ಲಿ ಕೇವಲ 135 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕವನ್ನು ಗಳಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ರುತುರಾಜ್ ಗಾಯಕ್ವಾಡ್ ಕೊನೆಯ ಟಿ-20 ಪಂದ್ಯವನ್ನು ಆಡಿದ್ದರು.

ಭರವಸೆ ಹೆಚ್ಚಿಸಿದ ಬೌಲರ್​ಗಳು: ಪದಾರ್ಪಣೆ ಪಂದ್ಯದಲ್ಲೇ ನಾಲ್ಕು ವಿಕೆಟ್​ ಪಡೆಯುವ ಮೂಲಕ ಶಿವಂ ಮಾವಿ ಉತ್ತಮ ಎಂಟ್ರಿ ಪಡೆದಿದ್ದಾರೆ. ಐಪಿಎಲ್​ನಿಂದ ಉತ್ತಮ ಬೌಲಿಂಗ್​ ಮಾಡಿಕೊಂಡು ಬರುತ್ತಿರುವ ಮಾವಿಗೆ ಭಾರತದಲ್ಲಿ ಇನ್ನಷ್ಟು ಅವಕಾಶಗಳು ದೊರೆಯಲಿದೆ ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯಿಸುತ್ತಿದ್ದಾರೆ. ಅಲ್ಲದೇ ಯುವ ವೇಗಿ ಉಮ್ರನ್​ ಮಲಿಕ್​ ಮೊದಲ ಪಂದ್ಯದಲ್ಲಿ ಗಂಟೆಗೆ 155 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ, ಜಸ್‌ಪ್ರೀತ್‌ ಬೂಮ್ರಾ ಅವರ ದಾಖಲೆ ಅಳಿಸಿ ಹಾಕಿದ್ದಾರೆ.

ಎರಡನೇ ಇನ್ನಿಂಗ್ಸ್​ ವೇಳೆ ಇಬ್ಬನಿ ಇಂದ ರನ್ ಚೇಸ್​ ಮಾಡಲು ಸಹಕಾರಿಯಾಗಲಿದೆ ಎಂದು ಶನಕ ಅಭಿಪ್ರಾಯಿಸಿದ್ದರು. ಆದರೆ, ಭಾರತದ ಪರ ಬೌಲರ್​ಗಳು ಡ್ಯೂ ಇದ್ದರೂ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಮೂವರು ವೇಗಿಗಳು ವಿಕೆಟ್​ ಪಡೆದು ಲಂಕಾವನ್ನು 160ರನ್​ಗೆ ಕಟ್ಟಿಹಾಕಿದರು. ಈ ಮೂಲಕ ಚೇಸಿಂಗ್​ಗೆ ಹೆಚ್ಚು ಗೆಲುವು ಸಿಗುತ್ತಿದ್ದ ಪಿಚ್​ನಲ್ಲಿ ದಾಖಲೆ ತಿರುಚಿದ್ದಾರೆ.

ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡದ ನಡುವೆ ಇದುವರೆಗೆ 26 ಟಿ-20 ಪಂದ್ಯಗಳು ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 17 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ಎಂಟು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯಕ್ಕೆ ಫಲಿತಾಂಶ ಬಂದಿಲ್ಲ. 2022ರಲ್ಲಿ ಎರಡು ತಂಡಗಳ ನಡುವೆ ಮೂರು ಪಂದ್ಯಗಳ ಸರಣಿ ನಡೆದಿತ್ತು. ಇದನ್ನು ಭಾರತ ತಂಡ 3-0 ಅಂತರದಿಂದ ಗೆದ್ದುಕೊಂಡಿತು.

ಸಮಬಲ ಸಾಧಿಸಲು ಲಂಕಾ ಸಿದ್ಧತೆ: ಅನುಭವಿ ಮೆಂಡಿಸ್​, ನಾಯಕ ಶನಕ ಮತ್ತು ಆಲ್​ ರೌಂಡರ್​ಗಳಾದ ವನಿಂದು ಹಸರಂಗ, ಕರುಣಾ ರತ್ನೆ ತಂಡಕ್ಕೆ ಬಲವಾಗಿದ್ದಾರೆ. ಮೊದಲ ಪಂದ್ಯದ ಬೌಲಿಂಗ್​ನಲ್ಲಿ ಸಿಂಹಳೀಯರ ಐವರು ಬೌಲರ್​ಗಳು ಒಂದೊಂದು ವಿಕೆಟ್​ ಪಡೆದಿದ್ದಾರೆ. ಕಸುನ್ ರಜಿತ ಮಾತ್ರ 4 ಓವರ್​ಗೆ 47 ರನ್​ ಬಿಟ್ಟುಕೊಟ್ಟು ದುಬಾರಿಯಾದರು. ಅಲ್ಲದೇ ಮಿಕ್ಕ ಆಟಗಾರರು ಸಾಂಘಿಕ ಆಟ ಪ್ರದರ್ಶಿಸಿದರೂ ಗೆಲುವು ಸ್ವಲ್ಪದರಲ್ಲೇ ಕೈ ತಪ್ಪಿದೆ.

ಭಾರತದ ಸಂಭಾವ್ಯ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್.

ಸಂಭಾವ್ಯ ಶ್ರೀಲಂಕಾ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್​ ಕೀಪರ್​), ಧನಂಜಯ ಡಿ ಸಿಲ್ವಾ, ಭಾನುಕಾ ರಾಜಪಕ್ಸೆ, ಚರಿತ್ ಅಸ್ಲಂಕಾ, ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತಿಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ.

ಇದನ್ನೂ ಓದಿ: ಸಖತ್​ ಸದ್ದು ಮಾಡುತ್ತಿದೆ ಇಶಾನ್​ ರನ್ನಿಂಗ್​ ಕ್ಯಾಚ್​: ಫೀಲ್ಡಿಂಗ್ ಕೋಚ್ ಬಳಿ ಕಿಶನ್ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.