ಮೊಹಾಲಿ(ಪಂಜಾಬ್): ಪ್ರವಾಸಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂದಿನಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿದೆ. ಮೊದಲ ದಿನದಾಟದ ಅಂತ್ಯಕ್ಕೆ ರೋಹಿತ್ ಪಡೆ 6 ವಿಕೆಟ್ ನಷ್ಟಕ್ಕೆ 357 ರನ್ಗಳಿಕೆ ಮಾಡಿ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಕೇವಲ 4 ರನ್ಗಳ ಅಂತರದಿಂದ ರಿಷಬ್ ಪಂತ್ ಶತಕ ವಂಚಿತರಾಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಬಳಿಕ ಉತ್ತಮವಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸುತ್ತಿರುವ ಪಂತ್ ಭರ್ಜರಿ ರನ್ಗಳಿಕೆ ಮಾಡ್ತಿದ್ದು, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ರಿಷಭ್ ಪಂತ್ಗೆ ನರ್ವಸ್ 90 ಕಂಟಕ?: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬೀಸಿ ತಂಡಕ್ಕೆ ಆಧಾರವಾಗ್ತಿರುವ ರಿಷಭ್ ಪಂತ್ಗೆ ನರ್ವಸ್ 90 ಸಮಸ್ಯೆ ಮತ್ತೊಮ್ಮೆ ಎದುರಾಗಿದೆ. ಈ ಹಿಂದೆಯೂ ಕೂಡ ವೆಸ್ಟ್ ಇಂಡೀಸ್ ವಿರುದ್ಧ 92(2018), ವೆಸ್ಟ್ ಇಂಡೀಸ್ 92(2018) ಆಸ್ಟ್ರೇಲಿಯಾ 97ರನ್ (2021), ಇಂಗ್ಲೆಂಡ್ 91ರನ್(2021)ಗಳಿಕೆ ಮಾಡಿ ವಿಕೆಟ್ ಒಪ್ಪಿಸಿರುವ ಪಂತ್, ಇಂದಿನ ಪಂದ್ಯದಲ್ಲೂ ಲಂಕಾ ವಿರುದ್ಧ 96ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದಾರೆ.
2018ರಲ್ಲಿ ಸತತ ವೆಸ್ಟ್ ಇಂಡೀಸ್ ವಿರುದ್ಧ ಸತತ ಎರಡು ಸಲ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದ್ದ ಪಂತ್, ತದನಂತರ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಕೂಡ ಈ ಸಮಸ್ಯೆ ಎದುರಿಸಿದ್ದರು. ಇಂದಿನ ಪಂದ್ಯದಲ್ಲಿ ಲಂಕಾ ವಿರುದ್ಧ ಕೂಡ ಅದೇ ರೀತಿಯ ಸಮಸ್ಯೆ ಎದುರಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮಾದರಿಯಲ್ಲೇ ಪಂತ್ಗೂ ನರ್ವಸ್ 90 ಕಾಡುತ್ತಿದೆ ಎಂದು ಹೇಳಲಾಗುತ್ತಿತ್ತು. ಈ ಹಿಂದೆ ಸಚಿನ್, ಧೋನಿ ಅವರು ಕೂಡ 90+ ರನ್ ಬಾರಿಸಿ ಅನೇಕ ಬಾರಿ ಔಟ್ ಆಗಿದ್ದಾರೆ.