ಗುವಾಹಟಿ (ಬರ್ಸಾಪರಾ): ಇಂದಿನಿಂದ ಶ್ರೀಲಂಕಾ ವಿರುದ್ಧ ಆರಂಭವಾಗಿರುವ ಏಕದಿನ ಸರಣಿಯಲ್ಲಿ ಭಾರತ ತಂಡದ ಮಾಜಿ ನಾಯಕ ರನ್ ಮಷಿನ್ ವಿರಾಟ್ ಕೊಹ್ಲಿ ಶತಕ ದಾಖಲಿಸಿ ದಾಖಲೆ ನಿರ್ಮಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ವಿರಾಟ್ ಮುರಿದಿದ್ದಾರೆ. ತಮ್ಮ 45ನೇ ಏಕದಿನ ಶತಕವನ್ನು ಕೊಹ್ಲಿ ಪೂರೈಸಿದ್ದಾರೆ.
ಟಾಸ್ ಸೊತು ಮೊದಲು ಬ್ಯಾಟ್ ಮಾಡಿದ ಭಾರತ ಏಳು ವಿಕೆಟ್ ನಷ್ಟಕ್ಕೆ 373 ರನ್ ದಾಖಲಿಸಿದೆ. ಭಾರತ ಉತ್ತಮ ಆರಂಭಿಕ ಜೊತೆಯಾಟ ಕಂಡ ನಂತರ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಸರೆ ಆದರು. ಒಂದು ಕಡೆ ವಿಕೆಟ್ಗಳನ್ನು ಭಾರತ ಕಳೆದು ಕೊಳ್ಳುತ್ತಿದ್ದರೆ, ಕೊಹ್ಲಿ ಬಲವಾಗಿ ನಿಂತು ಶತಕ ದಾಖಲಿಸಿದರು.
ಒಂದು ದೇಶದ ಮೇಲೆ ಹೆಚ್ಚು ಶತಕ ದಾಖಲಿಸಿದ ಕೊಹ್ಲಿ: ವಿರಾಟ್ ಕೊಹ್ಲಿಯ ಏಕದಿನ ವೈಯುಕ್ತಿಕ 45ನೇ ಶತಕ ಇದಾಗಿದೆ. ಒಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 73ನೇ ಶತಕ ಇದಾಗಿದೆ. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಶತಕ ದಾಖಲಿಸಿದ್ದರು. ವಿರಾಟ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೇ ಸಚಿನ್ ತೆಂಡೂಲ್ಕರ್ ಲಂಕಾ ವಿರುದ್ಧ 8 ಶತಕಗಳನ್ನು ದಾಖಲಿಸಿದ್ದರು. ವಿರಾಟ್ ಕೊಹ್ಲಿಯ ಈ ಶತಕದಿಂದ ಸಿಂಹಳೀಯರ ವಿರುದ್ಧ ದಾಖಲಿಸಿದ 9ನೇ ಶತಕ ಇದಾಗಿದೆ. ಈ ಮೂಲಕ ಲಂಕನ್ನರ ವಿರುದ್ಧ ಸಚಿನ್ ಅವರು ದಾಖಲಿಸಿದ್ದ ಶತಕದ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ವಿರಾಟ್ ವೆಸ್ಟ ಇಂಡೀಸ್ ಮೇಲೆ 9 ಶತಕ ದಾಖಲಿಸಿದ ದಾಖಲೆ ಈ ಹಿಂದೆಯೇ ಮಾಡಿದ್ದರು.
-
𝐂𝐄𝐍𝐓𝐔𝐑𝐘 𝐍𝐎.𝟕𝟑 𝐟𝐨𝐫 𝐕𝐈𝐑𝐀𝐓 𝐊𝐎𝐇𝐋𝐈 🫡🫡
— BCCI (@BCCI) January 10, 2023 " class="align-text-top noRightClick twitterSection" data="
A brilliant hundred from @imVkohli as he brings up his 45th ODI ton.
Live - https://t.co/262rcUdafb #INDvSL @mastercardindia pic.twitter.com/n1Kc9BCBwO
">𝐂𝐄𝐍𝐓𝐔𝐑𝐘 𝐍𝐎.𝟕𝟑 𝐟𝐨𝐫 𝐕𝐈𝐑𝐀𝐓 𝐊𝐎𝐇𝐋𝐈 🫡🫡
— BCCI (@BCCI) January 10, 2023
A brilliant hundred from @imVkohli as he brings up his 45th ODI ton.
Live - https://t.co/262rcUdafb #INDvSL @mastercardindia pic.twitter.com/n1Kc9BCBwO𝐂𝐄𝐍𝐓𝐔𝐑𝐘 𝐍𝐎.𝟕𝟑 𝐟𝐨𝐫 𝐕𝐈𝐑𝐀𝐓 𝐊𝐎𝐇𝐋𝐈 🫡🫡
— BCCI (@BCCI) January 10, 2023
A brilliant hundred from @imVkohli as he brings up his 45th ODI ton.
Live - https://t.co/262rcUdafb #INDvSL @mastercardindia pic.twitter.com/n1Kc9BCBwO
ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್ ದೇವರು 9 ಶತಕ ಗಳಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಾಂಗರೂಗಳ ವಿರುದ್ಧ 8 ಶತಕ ಗಳಿಸಿದ್ದಾರೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ನಡೆಯಲಿರುವ ಪಂದ್ಯದಲ್ಲಿ ಯಾರು ಶತಕ ದಾಖಲಿಸಿ ಸಚಿನ್ ದಾಖಲೆ ಮುರಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ತವರು ನೆದಲ್ಲಿ 20 ಶತಕ ಗಳಿಸಿದ ದಾಖಲೆ: ಭಾರತದಲ್ಲಿ ಆಡಿದ 99 ಇನ್ನಿಂಗ್ಸ್ನಲ್ಲಿ 20 ಶತಕಗಳನ್ನು ಕೊಹ್ಲಿ ದಾಖಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ 160 ಇನ್ನಿಂಗ್ಸ್ನಿಂದ 20 ಶತಕ ದಾಖಲಿಸಿದ್ದರು. ಆಶಿಮ್ ಆಮ್ಲ ದಕ್ಷಣ ಆಫ್ರಿಕಾದಲ್ಲಿ 69 ಇನ್ನಿಂಗ್ಸ್ನಿಂದ 14 ಶತಕ ಮತ್ತು ರಿಕ್ಕಿ ಪಾಂಟಿಂಗ್ 151 ಇನ್ನಿಂಗ್ಸ್ನಿಂದ 14 ಶತಕಗಳನ್ನು ಆಸ್ಟ್ರೇಲಿಯಾದಲ್ಲೇ ಗಳಿಸಿದ್ದಾರೆ.
ಉತ್ತಮ ಆರಂಭ ಪಡೆದ ಭಾರತ: ಆರಂಭಿಕರಾಗಿ ಕಣಕ್ಕಿಳಿದ ಗಿಲ್ ಮತ್ತು ರೋಹಿತ್ ಶರ್ಮಾ 143ರನ್ಗಳ ಆರಂಭಿಕ ಜೊತೆಯಾಟ ಮಾಡಿದ್ದರು. ಮೂರನೇ ಟಿ20 ಪಂದ್ಯದಿಂದ ಬ್ಯಾಟಿಂಗ್ ಲಯ ಕಂಡುಕೊಂಡಿದ್ದ ಶುಭಮನ್ ಗಿಲ್ ಇಂದು ನಿಧಾನ ಗತಿಯಲ್ಲಿ 11 ಬೌಂಡರಿಯ ಸಹಾಯದಿಂದ 60 ಎಸೆತದಲ್ಲಿ 70 ರನ್ ದಾಖಲಿಸಿದ್ದರು. 70ರನ್ ಗಳಿಸಿ ಆಡುತ್ತಿದ್ದ ವೇಳೆ ಲಂಕಾ ನಾಯಕ ಶನಕ ಅವರ ಎಸೆತಕ್ಕೆ ಎಲ್ಬಿಡ್ಲ್ಯೂಗೆ ವಿಕೆಟ್ ಒಪ್ಪಿಸಿದರು. ನಂತರ ಶತಕದ ಸನಿಹದಲ್ಲಿದ್ದ ರೋಹಿತ್ ಶರ್ಮಾ 83 ರನ್ಗೆ ಔಟ್ ಆದರು.
ಮೂರನೇ ವಿಕೆಟ್ ಆಗಿ ಬಂದ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ನ್ನು ಮುಂದುವರೆಸಿದರು. ನಿಧಾನ ಗತಿಯಲ್ಲಿ ಲಂಕಾ ಬೌಲರ್ಗಳನ್ನು ದಂಡಿಸಿದ ಮಾಜಿ ನಾಯಕ 87 ಎಸೆತದಲ್ಲಿ 113ರನ್ ಗಳಿಸಿದರು. ಇದು ಅಂತಾರಾಷ್ಟ್ರೀಯ ಪಂದ್ಯದ 73ನೇ ಶತಕ ಮತ್ತು ಏಕದಿನ ಕ್ರಿಕೆಟ್ನ 45ನೇ ಶತಕವಾಗಿದೆ. ಒಂದೆಡೆ ವಿರಾಟ್ ನಿಂತು ಆಡುತ್ತಿದ್ದರೆ ಶ್ರೇಯಸ್ ಅಯ್ಯರ್(28), ರಾಹುಲ್ (39), ಹಾದಿಕ್ ಪಾಂಡ್ಯ(14) ಮತ್ತು ಅಕ್ಷರ್(9) ರನ್ಗೆ ವಿಕೆಟ್ ಕಳೆದು ಕೊಂಡರು. ಶಮಿ ಮತ್ತು ಸಿರಾಜ್ ಅಜೇಯರಾಗಿ ಉಳಿದರು.
ಭಾರತದ ಸಂಕ್ಷಿಪ್ತ ಸ್ಕೋರ್: 373ಕ್ಕೆ 7 - ಶುಭಮನ್ ಗಿಲ್ 70, ರೋಹಿತ್ ಶರ್ಮಾ 83, ಶ್ರೇಯಸ್ ಅಯ್ಯರ್ 28, ಕೆ ಎಲ್ ರಾಹುಲ್ 39, ಹಾರ್ದಿಕ್ ಪಾಂಡ್ಯ 14, ಅಕ್ಷರ್ ಪಟೇಲ್ 9, ವಿರಾಟ್ ಕೊಹ್ಲಿ 113 ರನ್ ಹೊಡೆದು ಔಟ್ ಆಗಿದ್ದಾರೆ. ಸಿರಾಜ್ 4 ಮತ್ತು ಶಮಿ 7 ರನ್ ದಾಖಲಿಸಿ ಅಜೇಯರಾಗಿ ಉಳಿದಿದ್ದಾರೆ.
ಲಂಕಾಪರ ರಜಿತ್ ಅವರು 10 ಓವರ್ನಲ್ಲಿ 88 ರನ್ ಕೊಟ್ಟು ದುಬಾರಿ ಆದರೂ ಮೂರು ವಿಕೆಟ್ ಪಡೆದರು. ಚೊಚ್ಚಲ ಪಂದ್ಯದಲ್ಲಿ ಬೌಲ್ ಮಾಡಿದ ದಿಲ್ಶನ್ ಮಧುಶಂಕ 6 ಓವರ್ಗೆ 43 ರನ್ ಕೊಟ್ಟು ಒಂದು ವಿಕೆಟ್ ಪಡೆದರು. ಇನ್ನು ಉಳಿದಂತೆ ಕರುಣರತ್ನೆ, ಶನಕ ಮತ್ತು ಸಿಲ್ವ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: IND vs SL 1st ODI: ಟಾಸ್ ಗೆದ್ದು ಶ್ರೀಲಂಕಾ ಬೌಲಿಂಗ್, ವಿಶ್ವಕಪ್‌ಗೆ ಟೀಂ ಇಂಡಿಯಾ ಕಸರತ್ತು ಶುರು