ಸೆಂಚುರಿಯನ್: ಭಾರತ ತಂಡದ ಆರಂಭಿಕ ಬ್ಯಾಟರ್, ಕನ್ನಡಿಗ ಕೆ ಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಹರಿಣಗಳ ಬೌಲರ್ಗಳ ವಿರುದ್ಧ ಪ್ರಾಬಲ್ಯ ಸಾಧಿಸಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಸೆಂಚುರಿಯನ್ನ ಸೂಪರ್ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ತಮ್ಮ ವೃತ್ತಿ ಜೀವನದ 7ನೇ ಶತಕ ಬಾರಿಸಿದ್ದಾರೆ. ಮಯಾಂಕ್ ಅಗರ್ವಾಲ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ರಾಹುಲ್ ತಮ್ಮ 218ನೇ ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು.
ಮೊದಲ ವಿಕೆಟ್ಗೆ 117 ರನ್ಗಳ ಜೊತೆಯಾಟ
ಖಾಯಂ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕರ್ನಾಟಕ ಜೋಡಿ ಮೊದಲ ವಿಕೆಟ್ಗೆ 40 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿ 117 ರನ್ಗಳ ಉತ್ತಮ ಜೊತೆಯಾಟ ನಡೆಸಿತು. ಆದರೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಮಯಾಂಕ್ 123 ಎಸೆತಗಳಲ್ಲಿ 6 ಬೌಂಡರಿ ಸಹಿತ 60 ರನ್ಗಳಿಸಿದ್ದ ವೇಳೆ ಲುಂಗಿ ಎಂಗಿಡಿ ಬೌಲಿಂಗ್ನಲ್ಲಿ ಎಲ್ಬಿ ಡಬ್ಲ್ಯೂ ಬಲೆಗೆ ಬಿದ್ದರು.
-
💯
— BCCI (@BCCI) December 26, 2021 " class="align-text-top noRightClick twitterSection" data="
A phenomenal century by @klrahul11 here at the SuperSport Park.
This is his 7th Test ton 👏👏#SAvIND pic.twitter.com/mQ4Rfnd8UX
">💯
— BCCI (@BCCI) December 26, 2021
A phenomenal century by @klrahul11 here at the SuperSport Park.
This is his 7th Test ton 👏👏#SAvIND pic.twitter.com/mQ4Rfnd8UX💯
— BCCI (@BCCI) December 26, 2021
A phenomenal century by @klrahul11 here at the SuperSport Park.
This is his 7th Test ton 👏👏#SAvIND pic.twitter.com/mQ4Rfnd8UX
ಏಷ್ಯಾದಿಂದಾಚೆ ಗರಿಷ್ಠ ಶತಕ ಸಿಡಿಸಿದ ಓಪನರ್ಸ್
15- ಸುನೀಲ್ ಗವಾಸ್ಕರ್(81 ಇನ್ನಿಂಗ್ಸ್)
5- ಕೆ ಎಲ್ ರಾಹುಲ್(34)
4 -ವೀರೇಂದ್ರ ಸೆಹ್ವಾಗ್(59)
3 ವಿನೂ ಮಂಕಡ್(19)/ರವಿ ಶಾಸ್ತ್ರಿ(19)
ಇದನ್ನೂ ಓದಿ: ತಮಿಳುನಾಡುಗೆ ಮುಖಭಂಗ : ಚೊಚ್ಚಲ ವಿಜಯ ಹಜಾರೆ ಟ್ರೋಫಿ ಎತ್ತಿ ಹಿಡಿದ ಹಿಮಾಚಲಪ್ರದೇಶ