ETV Bharat / sports

IND vs NZ 1st Test: ರೋಚಕ ಘಟ್ಟದತ್ತ ಉಭಯ ತಂಡಗಳು

ಕಾನ್ಪುರ​ದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲ್ಯಾಂಡ್​ ನಡುವಣ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಅಂತಿಮ ಕೊನೇ ದಿನದಾಟ ಆರಂಭವಾಗಿದ್ದು ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಿವೆ.

author img

By

Published : Nov 29, 2021, 1:22 PM IST

India vs New Zealand1st Test, Day 5 Live Score

ಕಾನ್ಪುರ್​: ಭಾರತ​ ಮತ್ತು ನ್ಯೂಜಿಲ್ಯಾಂಡ್ ನಡುವೆ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ 5ನೇ ದಿನದಾಟ ನಡೆಯುತ್ತಿದ್ದು, ಅಂತಿಮ ಘಟ್ಟಕ್ಕೆ ತಲುಪಿದೆ. ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದು, ಇಂದು ತೀರ್ಪು ಸಿಗಲಿದೆ. ಇಂದಿನ ದಿನದ ಆಟಕ್ಕೆ (ಊಟದ ಸಮಯ) 1 ವಿಕೆಟ್​ ಕಳೆದುಕೊಂಡಿತ್ತು. ಸದ್ಯ ನ್ಯೂಜಿಲ್ಯಾಂಡ್ ತಂಡ 2 ವಿಕೆಟ್​ ನಷ್ಟಕ್ಕೆ 84 ರನ್​ ಗಳಿಸಿದೆ.

ನಿನ್ನೆಯ ದಿನದ ಆಟಕ್ಕೆ ನ್ಯೂಜಿಲ್ಯಾಂಡ್ ತಂಡ 1 ವಿಕೆಟ್​ ಕಳೆದುಕೊಂಡು 4 ರನ್​ ಕಲೆ ಹಾಕಿತ್ತು. ಇಂದು ಮತ್ತೆ ಆಟವನ್ನು ಮುಂದುವರೆಸಿರುವ ನ್ಯೂಜಿಲ್ಯಾಂಡ್ ಬಳಗ ಗೆಲುವಿಗಾಗಿ ಹೋರಾಟ ನಡೆಸಿದೆ.

ಭಾರತ ತಂಡ ಅದಕ್ಕೂ ಮುನ್ನ ಡಿಕ್ಲರ್​ ಮಾಡಿಕೊಂಡಿದ್ದು 284 ರನ್​ ಗುರಿ ನೀಡಿದೆ. ಈ ಗುರಿ ಬೆನ್ನು ಹತ್ತಿದ ನ್ಯೂಜಿಲ್ಯಾಂಡ್ ತಂಡ ಗೆಲುವಿಗಾಗಿ ಅವಿರತ ಹೋರಾಟ ನಡೆಸಿದೆ. ಊಟದ ಸಮಯಕ್ಕೂ ಮುನ್ನ ವೇಗಿ ಉಮೇಶ್​ ಯಾದವ್ ಕಿವೀಸ್ ತಂಡ​ದ ವಿಲಿಯಂ ಸೊಮರ್ವಿಲ್ಲೆ (36) ವಿಕೆಟ್​ ಪಡೆದಿದ್ದು, ಟಾಮ್​ ಲಾಥಮ್​ ಮತ್ತು ಕೆನ್​ ಕೇನ್​ ವಿಲಿಯಮ್ಸನ್ ಕ್ರೀಸ್​ನಲ್ಲಿದ್ದಾರೆ.

ಭಾರತದ ಸ್ಪಿನ್ನರ್‌ಗಳ ಮೋಡಿ ಕಿವೀಸ್ ಗೆಲುವಿನ ಹಾದಿ ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಗೆಲುವಿಗಾಗಿ ನ್ಯೂಜಿಲ್ಯಾಂಡ್​ಗೆ ಇನ್ನೂ 200 ರನ್​ ಬಾಕಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.