ಮುಂಬೈ: ಟೆಸ್ಟ್ ಕ್ರಿಕೆಟ್ನ ಪ್ರಮುಖ ಟೂರ್ನಿಯಾಗಿರುವ ವಿಶ್ವ ಟೆಸ್ಟ್ ಚಾಂಪಿಯರ್ನ್ಶಿಪ್ ಫೈನಲ್ ಮೂರು ಪಂದ್ಯಗಳನ್ನು ಒಳಗೊಂಡಿದ್ದರೆ ಸೂಕ್ತವಾಗಿರುತ್ತಿತ್ತು ಎಂದು 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
"ಮಹತ್ವದ ಪ್ರಶಸ್ತಿಯನ್ನು ನಿರ್ಧರಿಸಲು ನಾನು ಕೇವಲ ಒಂದು ಪಂದ್ಯಕ್ಕಿಂತ ಹೆಚ್ಚಿನ ಒಂದ್ಯಗಳಿಗೆ ಆದ್ಯತೆ ನೀಡುತ್ತಿದ್ದೆ. ಖಂಡಿತ, ಈ ದಿನಗಳಲ್ಲಿ ಪಂದ್ಯಕ್ಕಾಗಿ ತಯಾರಿ ಮಾಡುವುದು ದೊಡ್ಡ ವಿಷಯವಲ್ಲ" ಎಂದು ಕಪಿಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಜನಪ್ರಿಯಗೊಳಿಸುವುದಕ್ಕೆ ಜನರ ಮುಂದೆ ಇಂತಹ ಒಳ್ಳೆಯ ಟೂರ್ನಿಯ ಆಯೋಜನೆ ಮಾಡಿರುವುದಕ್ಕೆ ಐಸಿಸಿಯನ್ನು ಭಾರತ ತಂಡದ ಮಾಜಿ ನಾಯಕ ಸ್ಮರಿಸಿದ್ದಾರೆ. ಆದರೆ, ಈ ಟೂರ್ನಿ ಕ್ರಿಕೆಟ್ ಸ್ವರ್ಗ ಲಾರ್ಡ್ಸ್‌ನಲ್ಲಿ ನಡೆದಿದ್ದರೆ ಅದ್ಭುತವಾಗಿರುತ್ತಿತ್ತು ಎಂದು ತಿಳಿಸಿದ್ದಾರೆ.
" ಇದು ಟೆಸ್ಟ್ ಪಂದ್ಯಗಳನ್ನು ಜನಪ್ರಿಯಗೊಳಿಸಲು ಐಸಿಸಿ ಈ ಯೋಜನೆ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಕ್ರಿಕೆಟ್ ಸಿಗುತ್ತದೆ ಎಂದು ನನಗೆ ಖಾತ್ರಿಯಿದೆ. ಆದರೆ, ಮೂರು ಟೆಸ್ಟ್ ಫೈನಲ್ ಪಂದ್ಯಗಳ ಫೈನಲ್ ಉತ್ತಮವಾಗಬಹುದೆಂದು ನಾನು ಭಾವಿಸುತ್ತೇನೆ " ಎಂದು ಕ್ರಿಕೆಟ್ ಕಂಡ ಪ್ರಸಿದ್ಧ ಆಲ್ರೌಂಡರ್ಹೇಳಿದ್ದಾರೆ.
ಹಾಗೆಯೇ ರೋಸ್ ಬೌಲ್ ಬದಲು ಇತಿಹಾಸ ಪ್ರಸಿದ್ಧ ಲಾರ್ಡ್ಸ್ ಅಥವಾ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಬಹುದಿತ್ತು. ಲಾರ್ಡ್ಸ್‌ನಲ್ಲಿ ಗೆದ್ದಾಗ ಸಿಗುವ ಸಂಭ್ರಮವೇ ಬೇರೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಇದನ್ನು ಓದಿ: ಈ ಕಾರಣದಿಂದ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕಿಂತ ನ್ಯೂಜಿಲ್ಯಾಂಡ್ಗೆ ಫೇವರಿಟ್: ಪ್ಯಾಟ್ ಕಮಿನ್ಸ್