ಮುಂಬೈ : ಕಿವೀಸ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಮೊದಲನೇ ಟೆಸ್ಟ್ನಲ್ಲಿ ಭಾರತ ಗೆಲ್ಲುವ ಅವಕಾಶವನ್ನು ಕೂದಲೆಳೆಯಂತರದಿಂದ ಕಳೆದುಕೊಂಡಿತು.
ಇದೀಗ ಕಿವೀಸ್ ವಿರುದ್ಧ ಗೆದ್ದು ಮತ್ತೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂಬೈನ ವಾಂಖೆಡೆಯಲ್ಲಿ ಗೆಲ್ಲುವ ಆಲೋಚನೆಯಲ್ಲಿದೆ ಭಾರತ ತಂಡ.
ಇಂದಿನಿಂದ ನಡೆಯಲಿರುವ ನಿರ್ಣಾಯಕ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಟೀಂ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಮರಳಿರುವ ಬಲವಿದ್ದರೆ, ಇತ್ತ ಈವರೆಗೆ ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ನ್ಯೂಜಿಲ್ಯಾಂಡ್ ಪಡೆ ಐತಿಹಾಸಿಕ ಗೆಲುವನ್ನು ಎದುರು ನೋಡುತ್ತಿದೆ.
ಇದರ ನಡುವೆ ಮೊದಲ ಬಾರಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ವಿರಾಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಪ್ರದರ್ಶನ ಯಾವ ರೀತಿ ಇರಲಿದೆ ಎಂಬುದು ಕಾದು ನೋಡಬೇಕಿದೆ.
-
Captain @imVkohli wins the toss and #TeamIndia will bat first at the Wankhede.
— BCCI (@BCCI) December 3, 2021 " class="align-text-top noRightClick twitterSection" data="
Live - https://t.co/KYV5Z1jAEM #INDvNZ @Paytm pic.twitter.com/GTffaDWNPY
">Captain @imVkohli wins the toss and #TeamIndia will bat first at the Wankhede.
— BCCI (@BCCI) December 3, 2021
Live - https://t.co/KYV5Z1jAEM #INDvNZ @Paytm pic.twitter.com/GTffaDWNPYCaptain @imVkohli wins the toss and #TeamIndia will bat first at the Wankhede.
— BCCI (@BCCI) December 3, 2021
Live - https://t.co/KYV5Z1jAEM #INDvNZ @Paytm pic.twitter.com/GTffaDWNPY
2ನೇ ಟೆಸ್ಟ್ ಪಂದ್ಯಕ್ಕೆ ಖಾಯಂ ನಾಯಕ ವಿರಾಟ್ ಕೊಹ್ಲಿ ಮರಳಿರುವುದು ತಂಡಕ್ಕೆ ಸಂತಸ ತಂದಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಮೂವರು ಆಟಗಾರರನ್ನು ತಂಡ ಬದಲಿಸಿದೆ. ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ ಬದಲಿಗೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಜಯಂತ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ತಂಡದಲ್ಲಿ ನಾಯಕ ಕೇನ್ ವಿಲಿಯಮ್‌ಸನ್ ಮೊಣಕಾಲಿನ ಸಮಸ್ಯೆದಿಂದ ಬಳಲುತ್ತಿದ್ದಾರೆ. ಅವರ ಸ್ಥಾನಕ್ಕೆ ಡೇರಿಲ್ ಮಿಚೆಲ್ ಬಂದಿದ್ದಾರೆ. ಇನ್ನು ನ್ಯೂಜಿಲ್ಯಾಂಡ್ ತಂಡವನ್ನು ಟಾಮ್ ಲ್ಯಾಥಮ್ ಮುನ್ನಡೆಸಲಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗುವ ಸಾಧ್ಯತೆಯಿದೆ. ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್ ಸಿದ್ಧಗೊಳಿಸಲಾಗಿದೆ. ಆತಿಥೇಯ ತಂಡದ ಬಲಕ್ಕೆ ತಕ್ಕ ಪಿಚ್ ನಿರ್ಮಿಸಿದ್ದೇವೆ ಎಂದು ಮುಂಬೈನ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇದರಿಂದಾಗಿ ಈ ಬಾರಿ ಕಿವೀಸ್‌ಗೆ ಹೆಚ್ಚಿನ ಸ್ಪಿನ್ ಸವಾಲು ಎದುರಾಗುವ ನಿರೀಕ್ಷೆ ಇದೆ.
ಎರಡೂ ತಂಡಗಳ 11ರ ಬಳಗ :
ಭಾರತ : ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ (ನಾಯಕ), ವೃದ್ಧಿಮಾನ್ ಸಹಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ನ್ಯೂಜಿಲ್ಯಾಂಡ್: ಟಾಮ್ ಲ್ಯಾಥಮ್ (ನಾಯಕ), ಡಬ್ಲ್ಯೂ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲಸ್, ಟಾಮ್ ಬ್ಲಂಡೆಲ್, ಆರ್ ರವೀಂದ್ರ, ಟಿಮ್ ಸೌಥಿ, ಅಜಾಜ್ ಪಟೇಲ್, ಕೈಲ್ ಜೇಮಿಸನ್, ವಿಲ್ ಸೋಮರ್‌ವಿಲ್ಲೆ