ಲಖನೌ(ಉತ್ತರ ಪ್ರದೇಶ): ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲ್ಯಾಂಡ್ ಹಾರ್ದಿಕ್ ಪಡೆಗೆ 100 ರನ್ ಗೆಲುವಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಬ್ಲ್ಯಾಕ್ ಕ್ಯಾಪ್ಸ್ನ ಬೌಲರ್ಗಳು ಕಾಡಿದರು. 4 ವಿಕೆಟ್ ಕಳೆದು ಕೊಂಡ ಭಾರತ ಕೊನೆಯ ಒಂದು ಬಾಲ್ ಉಳಿಸಿಕೊಂಡು ಪಂದ್ಯದಲ್ಲಿ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ಅನ್ನು ಭಾರತದ ಬೌಲರ್ಗಳು 99 ರನ್ಗೆ ಕಟ್ಟಿ ಹಾಕಿದ್ದರು. ಈ ಗುರಿಯನ್ನು ಬೆನ್ನು ಹತ್ತಿದ ಬ್ಲೂ ಬಾಯ್ಸ್ನ ದ್ವಿಶತಕ ವೀರ ಆರಂಭಿಕ ಗಿಲ್ (11) ಬೇಗ ವಿಕೆಟ್ ಒಪ್ಪಿಸಿದರು. ಕಿಶನ್ (19) ಅವಸರದ ರನ್ ಗಳಿಸಲು ಹೋಗಿ ತಂಡ ಸುಸ್ಥಿತಿಯಲ್ಲಿದ್ದಾಗ ರನ್ ಔಟ್ ಆದರು. ನಂತರ ಬಂದ ತ್ರಿಪಾಠಿ(13) ಹೆಚ್ಚು ಹೊತ್ತು ಕ್ರೀಸ್ನಲಲ್ಲಿ ನಿಲ್ಲಲಿಲ್ಲ.
-
Innings Break!
— BCCI (@BCCI) January 29, 2023 " class="align-text-top noRightClick twitterSection" data="
An outstanding bowling performance from #TeamIndia! 🙌 🙌
2⃣ wickets for @arshdeepsinghh
1⃣ wicket each for @yuzi_chahal, @imkuldeep18, @HoodaOnFire, @Sundarwashi5 & @hardikpandya7
Scorecard ▶️ https://t.co/p7C0QbPSJs#INDvNZ | @mastercardindia pic.twitter.com/z8A9sMIEok
">Innings Break!
— BCCI (@BCCI) January 29, 2023
An outstanding bowling performance from #TeamIndia! 🙌 🙌
2⃣ wickets for @arshdeepsinghh
1⃣ wicket each for @yuzi_chahal, @imkuldeep18, @HoodaOnFire, @Sundarwashi5 & @hardikpandya7
Scorecard ▶️ https://t.co/p7C0QbPSJs#INDvNZ | @mastercardindia pic.twitter.com/z8A9sMIEokInnings Break!
— BCCI (@BCCI) January 29, 2023
An outstanding bowling performance from #TeamIndia! 🙌 🙌
2⃣ wickets for @arshdeepsinghh
1⃣ wicket each for @yuzi_chahal, @imkuldeep18, @HoodaOnFire, @Sundarwashi5 & @hardikpandya7
Scorecard ▶️ https://t.co/p7C0QbPSJs#INDvNZ | @mastercardindia pic.twitter.com/z8A9sMIEok
ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಸುಂದರ್ಗೆ ನಾಯಕ ಹಾರ್ದಿಕ್ ಬಡ್ತಿ ನೀಡಿದರು. ಸೂರ್ಯಕುಮಾರ್ ಯಾದವ್ ಜೊತೆಗೆ ಸುಂದರ್ ಇನ್ನಿಂಗ್ಸ್ ಕಟ್ಟುತ್ತಿದ್ದರು. ಈ ವೇಳೆ ಅನಗತ್ಯ ರನ್ ಕದಿಯಲು ಇಳಿದ ವಾಷಿಂಗ್ಟನ್ ಸುಂದರ್(10) ಸಹ ರನ್ ಔಟ್ಗೆ ಪೆವಿಲಿಯನ್ ದಾರಿ ಹಿಡಿದರು. ನಂತರ ಬಂದ ನಾಯಕ ಹಾರ್ದಿಕ್ ಉಪನಾಯಕ ಸೂರ್ಯನ ಜೊತೆಗೆ ಸೇರಿ ತಂಡವನ್ನು ಗೆಲುವಿಗೆ ತಂದರು. ಕೊನೆಯ ಓವರ್ನಲ್ಲಿ ಭಾರತದ ಗೆಲುವಿಗೆ ಆರು ಬಾಲ್ಗೆ 6 ರನ್ ಬೇಕಾಗಿದ್ದು, ಕೊನೆಯ ಒಂದು ಚೆಂಡನ್ನು ಉಳಿಸಿಕೊಂಡು ಭಾರತ ಗೆಲುವು ಸಾಧಿಸಿತು. ಸೂರ್ಯ ಕುಮಾರ್ ಯಾದವ್ 26 ರನ್ ಮತ್ತು ಹಾರ್ದಿಕ್ 15 ರನ್ ಗಳಿಸಿ ಅಜೇಯರಾಗಿ ಉಳಿದರು.
-
.@surya_14kumar hits the winning runs as #TeamIndia secure a 6-wicket win in Lucknow & level the #INDvNZ T20I series 1️⃣-1️⃣
— BCCI (@BCCI) January 29, 2023 " class="align-text-top noRightClick twitterSection" data="
Scorecard ▶️ https://t.co/p7C0QbPSJs#INDvNZ | @mastercardindia pic.twitter.com/onXTBVc2Wu
">.@surya_14kumar hits the winning runs as #TeamIndia secure a 6-wicket win in Lucknow & level the #INDvNZ T20I series 1️⃣-1️⃣
— BCCI (@BCCI) January 29, 2023
Scorecard ▶️ https://t.co/p7C0QbPSJs#INDvNZ | @mastercardindia pic.twitter.com/onXTBVc2Wu.@surya_14kumar hits the winning runs as #TeamIndia secure a 6-wicket win in Lucknow & level the #INDvNZ T20I series 1️⃣-1️⃣
— BCCI (@BCCI) January 29, 2023
Scorecard ▶️ https://t.co/p7C0QbPSJs#INDvNZ | @mastercardindia pic.twitter.com/onXTBVc2Wu
ಮೊದಲ ಇನ್ನಿಂಗ್ಸ್: ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ತಂಡದ ಪರ ನಾಯಕ ಮಿಚೆಲ್ ಸ್ಯಾಂಟ್ನರ್ ಸರ್ವಾಧಿಕ 19 ರನ್ ಗಳಿಸಿದರು. ಇನ್ನುಳಿದಂತೆ ಮಿಚೆಲ್ ಬ್ರೇಸ್ವೆಲ್ 14, ಫಿನ್ ಅಲೆನ್ 11, ಡೆವೊನ್ ಕಾನ್ವೆ 11, ಮಾರ್ಕ್ ಚಾಪ್ಮನ್ 14 ರನ್ ಗಳಿಸಿದರು. ಅಂತಿಮವಾಗಿ ಕಿವೀಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಭಾರತದ ಪರ ಅರ್ಷದೀಪ್ ಸಿಂಗ್ 7ಕ್ಕೆ 2 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಭಾರತ ತಂಡ: ಶುಭಮನ್ ಗಿಲ್, ಇಶಾನ್ ಕಿಶನ್(ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೇ(ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಇಶ್ ಸೋಧಿ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್
ಇದನ್ನೂ ಓದಿ: ನ್ಯೂಜಿಲ್ಯಾಂಡ್ ವಿರುದ್ಧದ ಸೋಲಿಗೆ ಮಾರಕವಾದ ಕೊನೆಯ ಓವರ್: ಸುಂದರ್ ಹೊಗಳಿದ ಪಾಂಡ್ಯ