ETV Bharat / sports

IND vs NZ 1st T20: ರಾಂಚಿಯಲ್ಲಿ ಭಾರತದ ಉತ್ತಮ ರೆಕಾರ್ಡ್​, ಟಿಕೆಟ್​ಗಾಗಿ ಫೈಟ್​

author img

By

Published : Jan 25, 2023, 7:31 PM IST

ಮಾಜಿ ನಾಯಕ ಧೋನಿ ಊರಿನಲ್ಲಿ ಕಿವೀಸ್​ ವಿರುದ್ಧದ ಮೊದಲ ಪಂದ್ಯ - ರಾಂಚಿಯಲ್ಲಿ ಭಾರತದ್ದೇ ಪಾರಮ್ಯದ ಇತಿಹಾಸ - ಇದೇ ಕ್ರಿಡಾಂಗಣದಲ್ಲಿ 2021ರಲ್ಲಿ 7 ವಿಕೆಟ್‌ಗಳ ಸೋಲನುಭವಿಸಿದ್ದ ನ್ಯೂಜಿಲ್ಯಾಂಡ್​

India vs New Zealand 1st T20
ರಾಂಚಿಯಲ್ಲಿ ಭಾರತದ ಉತ್ತಮ ರೆಕಾರ್ಡ್

ನವದೆಹಲಿ: ಟಿ-20 ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತವನ್ನು ಐದನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್​ ಜನವರಿ 27 ರಂದು ಚುಕುಟು ಕ್ರಿಕೆಟ್​ನಲ್ಲಿ ಎದುರಿಸಲಿದೆ. ಏಕದಿನ ಸರಣಿಯಲ್ಲಿ ವೈಟ್​ವಾಶ್​ ಆದ ಕಿವೀಸ್​ ಟಿ20ಯಲ್ಲಿ ಪುಟಿದೇಳುವ ಭರವಸೆಯಲ್ಲಿದೆ. ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್​ ನಾಯಕತ್ವ ಇರಲಿದೆ.

ಈ ಟೂರ್ನಿಯ ಮೊದಲ ಪಂದ್ಯ ಜನವರಿ 27ರಂದು ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಲ್ಲಿ ಭಾರತ ತಂಡದ ದಾಖಲೆ ಉತ್ತಮವಾಗಿದೆ. ಜೆಎಸ್​ಸಿಎ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಟಿ-20 ಪಂದ್ಯವನ್ನು ಸೋತಿಲ್ಲ. ಅಷ್ಟೇ ಅಲ್ಲ ಇಲ್ಲಿ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಜನವರಿ 27 ರಂದು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ರಾಂಚಿಯಲ್ಲಿ ಟೀ ಇಂಡಿಯಾ ಮೈದಾನಕ್ಕಿಳಿಯಲಿದೆ. ಈ ಸರಣಿಯ ಎರಡನೇ ಪಂದ್ಯ ಜನವರಿ 29 ರಂದು ಲಕ್ನೋದಲ್ಲಿ ಮತ್ತು ಮೂರನೇ ಟಿ20 ಪಂದ್ಯ ಅಹಮದಾಬಾದ್‌ನಲ್ಲಿ ಫೆಬ್ರವರಿ 1 ರಂದು ನಡೆಯಲಿದೆ.

ರಾಂಚಿಯಲ್ಲಿ ಉತ್ತಮ ರೆಕಾರ್ಡ್​: ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಭಾರತ ಟಿ20 ಪಂದ್ಯಗಳ ದಾಖಲೆ ಉತ್ತಮವಾಗಿದೆ. ಇಲ್ಲಿಯವರೆಗೂ ಇಲ್ಲಿ ಟೀಂ ಇಂಡಿಯಾ ಒಂದೇ ಒಂದು ಟಿ20 ಪಂದ್ಯವನ್ನು ಸೋತಿಲ್ಲ. ಬ್ಲೂ ಬಾಯ್ಸ್​ ಆಡಿದ 3 ಪಂದ್ಯಗಳಲ್ಲಿ ಎಲ್ಲವೂ ಗೆಲುವಾಗಿದೆ. ಭಾರತ 2016 ಫೆಬ್ರವರಿಯಲ್ಲಿ ಶ್ರೀಲಂಕಾವನ್ನು 69 ರನ್‌ಗಳಿಂದ, 2017 ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಮತ್ತು 2021ರಲ್ಲಿ ನ್ಯೂಜಿಲ್ಯಾಂಡ್​ ಅನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು.

2021ರ ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್​ 153 ರನ್ ಗಳಿಸಿತ್ತು. ಭಾರತ 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅರ್ಧಶತಕ ಸಿಡಿಸಿದ್ದರು. ರೋಹಿತ್ 36 ಎಸೆತಗಳಲ್ಲಿ 55 ರನ್ ಗಳಿಸಿದ್ದರು.

ಕ್ರಿಡಾಂಗಣದ ಸುತ್ತ ಭದ್ರತೆ: ಗಣರಾಜ್ಯೋತ್ಸವದ ಮಾರನೇ ದಿನ ನಡೆಯಲಿರುವ ಪಂದ್ಯಕ್ಕೆ ಪೊಲೀಸರು ಇಂದಿನಿಂದಲೇ ತಯಾರಿ ಮಾಡಿಕೊಂಡಿದ್ದಾರೆ. ಕ್ರಿಡಾಂಗಣದ ಒಳಗೆ ಮತ್ತು ಹೊರಗೆ ಪೊಲೀಸ್ ಭದ್ರತೆ ಮಾಡಲಾಗಿದೆ. ವಿಮಾನ ನಿಲ್ದಾಣದಿಂದ ಹೋಟೆಲ್‌ವರೆಗೆ ಮತ್ತು ಹೋಟೆಲ್‌ನಿಂದ ಜೆಎಸ್‌ಸಿಎ ಕ್ರೀಡಾಂಗಣದವರೆಗೆ ಪೊಲೀಸ್ ಅಧಿಕಾರಿಗಳು ಭದ್ರತೆಗೆ ನಿಯೋಜಿಸಿದ್ದಾರೆ.

ಇಂದು ರಾಂಚಿಗೆ ತಲುಪಲಿರುವ ತಂಡಗಳು: ಎರಡೂ ತಂಡಗಳು ಇಂದು ರಾಂಚಿ ತಲುಪಲಿದೆ. ಏರ್‌ಪೋರ್ಟ್‌ನಿಂದ ಹೋಟೆಲ್‌ವರೆಗೆ ಆಟಗಾರರ ಭದ್ರತೆಗೆ ಮತ್ತು ಅಭ್ಯಾಸದ ಸಮಯದಲ್ಲಿ ಕ್ರೀಡಾಂಗಣಕ್ಕೆ ಹೋಗುವಾಗಲೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ರಾಂಚಿ ಎಸ್‌ಎಸ್‌ಪಿ ಕಿಶೋರ್ ಕೌಶಲ್ ತಿಳಿಸಿದ್ದಾರೆ.

ಟಿಕೆಟ್​ಗಾಗಿ ಕಲಹ: ಸುಮಾರು ಎರಡು ವರ್ಷದ ನಂತರ ನಡೆಯುತ್ತಿರುವ ಕ್ರಿಕೆಟ್​ ನೂಡಲು ಟಿಕೆಟ್​ಗಾಗಿ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ನಿನ್ನೆಯಿಂದ ಆಫ್​ ಲೈನ್​ ಟಿಕೆಟ್​ ಮಾರಾಟ ಆಂಭವಾಗಿದ್ದು, ಕೌಂಟರ್​ನಲ್ಲಿ ಜನಸಂದಣಿ ಉಂಟಾಗಿತ್ತು. ಪೊಲೀಸರು ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇದರ ನಡುವೆ ಯುವಕನೊಬ್ಬ ಟಿಕೆಟ್​ ಸಾಲಿನಲ್ಲಿ ನಿಲ್ಲದೇ ಒಳಗೆ ನುಗ್ಗಿ ಗಲಾಟೆ ಮಾಡಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯ ಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್​), ಆರ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ, ಮುಖೇಶ್ ಕುಮಾರ್

ನ್ಯೂಜಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕಲ್ ರಿಪ್ಪೋನ್, ಹೆನ್ರಿ ಸೋ ಶಿಧಿಪಾನ್, ಹೆನ್ರಿ ಸೋ ಶಿಧಿಪಾನ್ ಬ್ಲೇರ್ ಟಿಕ್ನರ್

ಇದನ್ನೂ ಓದಿ: ICC ODI Ranking : ಬೌಲಿಂಗ್​ನಲ್ಲಿ ಸಿರಾಜ್​ಗೆ ಅಗ್ರಸ್ಥಾನ, ಬ್ಯಾಟಿಂಗ್​ನಲ್ಲಿ ವಿರಾಟ್​ ಹಿಂದಿಕ್ಕಿದ ಗಿಲ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.