ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ನೇಪಾಳ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಲ್ಪಮೊತ್ತಕ್ಕೆ ಕುಸಿದರೂ, ಭಾರತದ ಎದುರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕರು ಮತ್ತು ಟೇಲ್ ಎಂಡರ್ಗಳ ಬ್ಯಾಟಿಂಗ್ ಬಲದಿಂದ ನೇಪಾಳ 48.2 ಓವರ್ನಲ್ಲಿ 230 ರನ್ಗಳಿಸಿ ಆಲ್ಔಟ್ ಆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ನೇಪಾಳದ ಆರಂಭಿಕರು, ಶಮಿ ಮತ್ತು ಸಿರಾಜ್ ಬೌಲಿಂಗ್ಗೆ ನಿರಾಳವಾಗಿ ಬ್ಯಾಟ್ ಬೀಸಿದರು. ಮೊದಲ ಓವರ್ನ ಕೊನೆಯ ಬಾಲ್ನಲ್ಲಿ, ಎರಡನೇ ಮತ್ತು ಐದನೇ ಓವರ್ನಲ್ಲಿ ಕ್ಯಾಚ್ ಕೈಚೆಲ್ಲಿದ್ದರಿಂದ ನೇಪಾಳಿಗರಿಗೆ ಮೂರು ಜೀವದಾನ ಸಿಕ್ಕಿತು. ಇದನ್ನು ಸರಿಯಾಗಿ ಬಳಸಿಕೊಂಡ ಕುಶಾಲ್ ಭುರ್ಟೆಲ್ ಮತ್ತು ಆಸಿಫ್ ಶೇಖ್ 10ನೇ ಓವರ್ಗೆ 65ರನ್ ಜೊತೆಯಾಟ ಮಾಡಿದರು. ಪವರ್ ಪ್ಲೇಯ ಕೊನೆಯ ಓವರ್ನ ಅಂತಿಮ ಬಾಲ್ನಲ್ಲಿ ಕುಶಾಲ್ ಭುರ್ಟೆಲ್ (38) ಶಾರ್ದೂಲ್ ಬಾಲ್ನಲ್ಲಿ ಕಿಶನ್ ಕ್ಯಾಚ್ ಕೊಟ್ಟರು.
-
A solid opening partnership and some late striking by Sompal Kami has propelled Nepal to a total of 230!
— AsianCricketCouncil (@ACCMedia1) September 4, 2023 " class="align-text-top noRightClick twitterSection" data="
Will the Indian batters chase this down with ease, or can Nepal successfully defend the total and create history? 💪#AsiaCup2023 #INDvNEP pic.twitter.com/rsr6vIre8R
">A solid opening partnership and some late striking by Sompal Kami has propelled Nepal to a total of 230!
— AsianCricketCouncil (@ACCMedia1) September 4, 2023
Will the Indian batters chase this down with ease, or can Nepal successfully defend the total and create history? 💪#AsiaCup2023 #INDvNEP pic.twitter.com/rsr6vIre8RA solid opening partnership and some late striking by Sompal Kami has propelled Nepal to a total of 230!
— AsianCricketCouncil (@ACCMedia1) September 4, 2023
Will the Indian batters chase this down with ease, or can Nepal successfully defend the total and create history? 💪#AsiaCup2023 #INDvNEP pic.twitter.com/rsr6vIre8R
ಪವರ್ ಪ್ಲೇ ಮುಕ್ತಾಯದ ನಂತರ ದಾಳಿಗೆ ಬಂದ ಅನುಭವಿ ಆಲ್ರೌಂಡರ್ ಜಡೇಜಾ ನೇಪಾಳ ಆಟಗಾರರಿಗೆ ಕಠಿಣ ತುತ್ತಾದರು. ಭೀಮ್ ಶರ್ಕಿ(7), ರೋಹಿತ್ ಪೌಡೆಲ್(5) ಮತ್ತು ಕುಶಾಲ್ ಮಲ್ಲಾ (2) ಜಡೇಜಾ ಸ್ಪಿನ್ ಜಾದೂಗೆ ಮರುಳಾಗಿ ಪೆವಿಲಿಯನ್ ಪರೇಡ್ ಮಾಡಿದರು. ಆರಂಭಿಕರಾಗಿ ಮೈದಾನಕ್ಕೆ ಬಂದಿದ್ದ ಆಸಿಫ್ ಶೇಖ್ ಒಂದೆಡೆ ವಿಕೆಟ್ ಬಿದ್ದರೂ ತಾಳ್ಮೆಯಿಂದ ಭಾರತೀಯ ಬೌಲಿಂಗ್ ಅನ್ನು ಎದುರಿಸಿ ಅರ್ಧಶತಕ ದಾಖಲಿಸಿಕೊಂಡರು. 97 ಬಾಲ್ ಅಡಿದ ಅವರು 8 ಬೌಂಡರಿಯ ನೆರವಿನಿಂದ 58 ರನ್ ಗಳಿಸಿದರು. 30ನೇ ಓವರ್ ಮಾಡಲು ಬಂದ ಸಿರಾಜ್, ಆಸಿಫ್ ಶೇಖ್ ವಿಕೆಟ್ ಪಡೆದರು.
-
India rally back in the death overs but Nepal have enough runs on board for their bowlers to defend 🙌#AsiaCup2023 | 📝 #INDvNEP: https://t.co/J7utVQm3CV pic.twitter.com/t8cIGoY20t
— ICC (@ICC) September 4, 2023 " class="align-text-top noRightClick twitterSection" data="
">India rally back in the death overs but Nepal have enough runs on board for their bowlers to defend 🙌#AsiaCup2023 | 📝 #INDvNEP: https://t.co/J7utVQm3CV pic.twitter.com/t8cIGoY20t
— ICC (@ICC) September 4, 2023India rally back in the death overs but Nepal have enough runs on board for their bowlers to defend 🙌#AsiaCup2023 | 📝 #INDvNEP: https://t.co/J7utVQm3CV pic.twitter.com/t8cIGoY20t
— ICC (@ICC) September 4, 2023
ಭಾರತಕ್ಕೆ ಕಾಡಿದ ಟೇಲ್ ಎಂಡ್: ಮಧ್ಯಮ ಕ್ರಮಾಂಕ ಕುಸಿದರೂ ನೇಪಾಳದ ಟೇಲ್ ಎಂಡ್ ಬ್ಯಾಟರ್ಗಳು ಭಾರತದ ಬೌಲರ್ಗಳನ್ನು ಕಾಡಿದರು. 6ನೇ ವಿಕೆಟ್ ಆಗಿ ಬಂದ ಗುಲ್ಸನ್ ಝಾ ಭಾರತೀಯ ಬೌಲರ್ಗಳನ್ನು ಉತ್ತಮವಾಗಿ ಎದುರಿಸಿದರು. 3 ಬೌಂಡರಿಯಿಂದ 23 ರನ್ ಗಳಿಸಿ ಆಡುತ್ತಿದ್ದ ಗುಲ್ಸನ್ ಝಾ 35ನೇ ಬಾಲ್ ಎದುರಿಸುವಾಗ ಕ್ಯಾಚ್ ಕೊಟ್ಟು ಹೊರನಡೆದರು. 37.5 ಓವರ್ಗೆ ಮಳೆ ಅಡ್ಡಿ ಪಡಿಸಿದ ಕಾರಣ ಅರ್ಧ ಗಂಟೆ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಮಳೆ ಬಿಡುವು ಕೊಟ್ಟ ನಂತರ ಮೈದಾನಕ್ಕೆ ಬಂದ ಕೂಡಲೇ ಹಾರ್ದಿಕ್ ಪಾಂಡ್ಯ ದೀಪೇಂದ್ರ ಸಿಂಗ್ ಐರಿ (29) ಅವರ ವಿಕೆಟ್ ಪಡೆದರು. ಆದರೆ ಕೊನೆಯ ಓವರ್ಗಳಲ್ಲಿ ಸೋಂಪಾಲ್ ಕಾಮಿ ಭಾರತದ ಬೌಲರ್ಗಳನ್ನು ಕಾಡಿದರು. 48 ರನ್ ಗಳಿಸಿ ಔಟ್ ಆದ ಸೋಂಪಾಲ್ ಎರಡು ರನ್ನಿಂದ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಸಂದೀಪ್ ಲಮಿಚಾನೆ ಮತ್ತು ಲಲಿತ್ ರಾಜ್ಬನ್ಶಿ ವಿಕೆಟ್ ಕಳೆದುಕೊಂಡ ನೇಪಾಳ 48.2 ಓವರ್ಗೆ 230 ರನ್ ಗಳಿಸಿತು.
ಭಾರತದ ಪರ ಸಿರಾಜ್ ದುಬಾರಿ ಆದರು. ಆದರೆ 3 ವಿಕೆಟ್ ಕಬಳಿಸಿದರು. ಅನುಭವಿ ಜಡೇಜಾ ನೇಪಾಳದ ಮಧ್ಯಮ ಕ್ರಮಾಂಕದ ಮೂವರ ವಿಕೆಟ್ ಪಡೆದರೆ, ಶಾರ್ದೂಲ್, ಹಾರ್ದಿಕ್, ಶಮಿ ತಲಾ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: IND vs NEP: ಬುಮ್ರಾ ಬದಲು ಶಮಿ ಕಣಕ್ಕೆ.. ನೇಪಾಳದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮಾ