ದುಬೈ : ಟಿ20 ವಿಶ್ವಕಪ್ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಐಪಿಎಲ್ ಹಂಗಾಮಾದಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿರುವ ಭಾರತೀಯ ಕ್ರಿಕೆಟಿಗರು ಇದೀಗ ಮೂರು ದಿನಗಳ ಅಂತರದಲ್ಲಿ ಒಂದಾಗಿ ಬ್ಲ್ಯೂ ಜರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಪಂದ್ಯದಲ್ಲಿ ಎಲ್ಲಾ 15 ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶವಿದೆ. ಹಾಗಾಗಿ, ಫಾರ್ಮ್ನಲ್ಲಿರುವ ಆಟಗಾರರು, ಲಯಕ್ಕೆ ಮರಳಲು ಪರದಾಡುತ್ತಿರುವವರಿಗೆ ಅವಕಾಶ ಕೊಡುವ ನಿರೀಕ್ಷೆಯಿದೆ.
ಅಮೋಘ ಫಾರ್ಮ್ನಲ್ಲಿರುವ ಕೆ ಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ತಾವು 3ನೇ ಕ್ರಮಾಂಕದಲ್ಲಿ ಆಡುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ.
-
Hello & welcome from Dubai for #TeamIndia's first warm-up game against England 👋
— BCCI (@BCCI) October 18, 2021 " class="align-text-top noRightClick twitterSection" data="
🚨 Toss Update 🚨
India have won the toss and elected to bowl.#INDvENG #T20WorldCup pic.twitter.com/pxeCNoGj2C
">Hello & welcome from Dubai for #TeamIndia's first warm-up game against England 👋
— BCCI (@BCCI) October 18, 2021
🚨 Toss Update 🚨
India have won the toss and elected to bowl.#INDvENG #T20WorldCup pic.twitter.com/pxeCNoGj2CHello & welcome from Dubai for #TeamIndia's first warm-up game against England 👋
— BCCI (@BCCI) October 18, 2021
🚨 Toss Update 🚨
India have won the toss and elected to bowl.#INDvENG #T20WorldCup pic.twitter.com/pxeCNoGj2C
ಇನ್ನು ಈ ಪಂದ್ಯದಲ್ಲಿ ರೋಹಿತ್ ವರುಣ್ ಚಕ್ರವರ್ತಿ ಬಿಟ್ಟು ಉಳಿದೆಲ್ಲಾ ಆಟಗಾರರು ಆಡಲಿದ್ದಾರೆ. ಇಂಗ್ಲೆಂಡ್ ತಂಡವನ್ನು ವಿಕೆಟ್ ಕೀಪರ್ ಜೋಸ್ ಬಟ್ಲರ್ ಮುನ್ನಡೆಸುತ್ತಿದ್ದಾರೆ. ಈಗಷ್ಟೇ ಐಪಿಎಲ್ ಮುಗಿಸಿರುವ ಇಯಾನ್ ಮಾರ್ಗನ್ ವಿಶ್ರಾಂತಿಯಲ್ಲಿದ್ದಾರೆ.
ಭಾರತ ತಂಡ : ಕೆಎಲ್ ರಾಹುಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೀ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ರಾಹುಲ್ ಚಹರ್ , ವರುಣ್ ಚಕ್ರವರ್ತಿ
ಇಂಗ್ಲೆಂಡ್ ತಂಡ : ಜೇಸನ್ ರಾಯ್, ಡೇವಿಡ್ ಮಲನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್ (ವಿಕೀ/ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲೆ, ಮಾರ್ಕ್ ವುಡ್, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಸ್ಯಾಮ್ ಬಿಲ್ಲಿಂಗ್ಸ್
ಇದನ್ನು ಓದಿ:ಅರ್ಥಪೂರ್ಣ ದೀಪಾವಳಿ ಆಚರಿಸಲು ಟಿಪ್ಸ್ ಕೊಡ್ತೇನೆ ಎಂದು ಟ್ರೋಲ್ಗೆ ತುತ್ತಾದ ಕೊಹ್ಲಿ