ETV Bharat / sports

ಆಂಗ್ಲೋ - ಇಂಡಿಯಾ ಕದನ: ಸಚಿನ್, ದ್ರಾವಿಡ್​​​ರ ಈ ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಲಿರುವ ಕಿಂಗ್​ ಕೊಹ್ಲಿ - virat kohli 8000 runs

ಭಾರತ ತಂಡ ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕೊಹ್ಲಿ ಪಡೆ 1-4 ರ ಅಂತರದಲ್ಲಿ ಸರಣಿ ಕಳೆದುಕೊಂಡಿತ್ತು. ಆದರೆ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ನಾಯಕ ಕೊಹ್ಲಿ 5 ಪಂದ್ಯಗಳಿಂದ 2 ಶತಕ ಮತ್ತು 3 ಅರ್ಧಶತಕಗಳ ಸಹಿತ 593 ರನ್​ಗಳಿಸಿದ್ದರು.

Kohli eyes on  historical records
ವಿರಾಟ್ ಕೊಹ್ಲಿ ದಾಖಲೆಗಳು
author img

By

Published : Aug 3, 2021, 7:10 PM IST

ಲಂಡನ್: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಮೊದಲ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಬುಧವಾರ ಮುಖಾಮುಖಿಯಾಗುತ್ತಿವೆ. ಈ ಟೆಸ್ಟ್ ಸರಣಿಯಲ್ಲಿ ನಾಯಕ ವಿರಾಟ್​ ಕೊಹ್ಲಿ, ಅಶ್ವಿನ್ ಸೇರಿದಂತೆ ಹಲವು ಕ್ರಿಕೆಟಿಗರು ನೂತನ ಮೈಲಿಗಲ್ಲು ಸ್ಥಾಪಿಸಿಲಿದ್ದಾರೆ.

ಭಾರತ ತಂಡ ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕೊಹ್ಲಿ ಪಡೆ 1-4 ರ ಅಂತರದಲ್ಲಿ ಸರಣಿ ಕಳೆದುಕೊಂಡಿತ್ತು. ಆದರೆ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ನಾಯಕ ಕೊಹ್ಲಿ 5 ಪಂದ್ಯಗಳಿಂದ 2 ಶತಕ ಮತ್ತು 3 ಅರ್ಧಶತಕಗಳ ಸಹಿತ 593 ರನ್​ಗಳಿಸಿದ್ದರು. ಇದೀಗ ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದು, ಈ ಬಾರಿ ಕೂಡ ಕೆಲವು ಮೈಲಿಗಲ್ಲುಗಳನ್ನು ಸಾಧಿಸುವ ಹಾದಿಯಲ್ಲಿದ್ದಾರೆ.

ರಿಕಿ ಪಾಂಟಿಂಗ್ ಹಿಂದಿಕ್ಕಲು ಬೇಕು 1 ಶತಕ

ವಿರಾಟ್​ ಕೊಹ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 70 ಶತಕ ಬಾರಿಸಿದ್ದು, ಇನ್ನೊಂದು ಶತಕ ಬಾರಿಸಿದರೆ, ವಿಶ್ವದಲ್ಲಿ ಗರಿಷ್ಠ ಶತಕ ಬಾರಿಸಿದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹಿಂದಿಕ್ಕಿ 2ನೇ ಬ್ಯಾಟ್ಸ್​ಮನ್​ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ಶತಕ ದಾಖಲಿಸಿದ್ದಾರೆ. ಸಚಿನ್​ ತೆಂಡೂಲ್ಕರ್​ 100 ಶತಕ ಬಾರಿಸಿ ಗರಿಷ್ಠ ಶತಕದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಟೆಸ್ಟ್​ನಲ್ಲಿ 8000 ರನ್​

ಪ್ರಸ್ತುತ ವಿರಾಟ್ ಕೊಹ್ಲಿ 92 ಟೆಸ್ಟ್​ ಪಂದ್ಯಗಳಿಂದ 7,547 ರನ್​ಗಳಿಸಿದ್ದಾರೆ. ಇದೀಗ 5 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 453 ರನ್​ಗಳಿಸಿದರೆ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ 8 ಸಾವಿರ ಮೈಲಿಗಲ್ಲನ್ನು ತಲುಪಲಿದ್ದಾರೆ. ​ಈ ಮೂಲಕ ಭಾರತದ ಪರ ಈ ಸಾಧನೆ ಮಾಡಿದ 6ನೇ ಬ್ಯಾಟ್ಸ್​ಮನ್ ಎನಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಗರಿಷ್ಠ ರನ್

ಕೊಹ್ಲಿ ಪ್ರಸ್ತುತ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್ ಗಳಲ್ಲಿ 1,742 ರನ್ ಗಳಿಸಿದ್ದು, ಮುಂದಿನ 5 ಟೆಸ್ಟ್​ ಪಂದ್ಯಗಳಲ್ಲಿ 258 ರನ್ ಗಳನ್ನು ಗಳಿಸಿದರೆ ಆಂಗ್ಲರ ವಿರುದ್ಧ ಗರಿಷ್ಠ ರನ್​ ಮತ್ತು 2000 ರನ್‌ ಪೂರೈಸಿದ ಏಕೈಕ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್​ ಇಂಗ್ಲೆಂಡ್ ವಿರುದ್ಧ 1950 ರನ್ ರನ್​ಗಳಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಗರಿಷ್ಠ ಶತಕ

ಕೇವಲ ರನ್​ಗಳಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧ 10 ಇನ್ನಿಂಗ್ಸ್​ಗಳಲ್ಲಿ 2 ಶತಕ ಸಿಡಿಸಿದರೆ ಸಚಿನ್​ ಮತ್ತು ದ್ರಾವಿಡ್​ ದಾಖಲೆಯನ್ನು ಸರಿಗಟ್ಟಲಿದ್ದಾರೆ. ದಿಗ್ಗಜರಾದ ಸಚಿನ್ ಮತ್ತು ದ್ರಾವಿಡ್​​ ಇಂಗ್ಲೆಂಡ್ ವಿರುದ್ಧ ತಲಾ ಏಳು ಶತಕಗಳನ್ನು ಸಿಡಿಸಿದ್ದಾರೆ. ಕೊಹ್ಲಿ ಐದು ಈಗಾಗಲೇ 5 ಶತಕಗಳನ್ನು ಸಿಡಿಸಿದ್ದು, ಸರಣಿಯಲ್ಲಿ 3 ಶತಕ ಬಾರಿಸಿದರೆ ಮಹತ್ವದ ದಾಖಲೆ ಕೊಹ್ಲಿ ಪಾಲಾಗಲಿದೆ.

ಇದನ್ನು ಓದಿ:ಗಾಯದ ಮೇಲೆ ಬರೆ.. ಮೊದಲ ಟೆಸ್ಟ್​ ಪಂದ್ಯದಿಂದ ಹೊರಬಿದ್ದ ಕನ್ನಡಿಗ ಮಯಾಂಕ್​ ಅಗರವಾಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.