ಅಹಮದಾಬಾದ್ (ಗುಜರಾತ್): ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಏಕದಿನ ಕ್ರಿಕೆಟ್ ಜಾತ್ರಗೆ ನಾಳೆ ತೆರೆ ಬೀಳಲಿದೆ. ಈ ಜಾತ್ರೆಯ ಅಂತಿಮ ಅದ್ಭುತ ಮನರಂಜನೆಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮತ್ತು ಪ್ಯಾಟ್ ಕಮಿನ್ಸ್ ಮುಂದಾಳತ್ವದ ಆಸ್ಟ್ರೇಲಿಯಾ ಸಜ್ಜಾಗಿದೆ. 2003ರ ವಿಶ್ವಕಪ್ ಫೈನಲ್, 2015ರ ವಿಶ್ವಕಪ್ ಸೆಮೀಸ್ ಮತ್ತು 2023ರ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಸ್ ಸೋಲಿನ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ರೆಡಿಯಾಗಿದೆ.
- — BCCI (@BCCI) November 17, 2023 " class="align-text-top noRightClick twitterSection" data="
— BCCI (@BCCI) November 17, 2023
">— BCCI (@BCCI) November 17, 2023
ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಎರಡು ತಂಡಗಳು 13ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 10 ಪಂದ್ಯದಲ್ಲಿ ಗೆದ್ದಿರುವ ಭಾರತ ಗೆಲ್ಲುವ ಫೇವ್ರಿಟ್ ಆಗಿದ್ದರೆ, ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾವು ಬಲಿಷ್ಠವಾಗಿದೆ. ವಿಶ್ವಕಪ್ಗೂ ಮುನ್ನ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಸೀಸ್ 1-2ರಿಂದ ಸೋಲು ಕಂಡಿತ್ತು. ವಿಶ್ವಕಪ್ ಲೀಗ್ ಹಂತದಲ್ಲೂ ಆಸ್ಟ್ರೇಲಿಯಾ ಸೋಲು ಕಂಡಿತ್ತು. ಈ ಎಲ್ಲ ಅಂಶಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ.
ಬಲಿಷ್ಠ ಬ್ಯಾಟಿಂಗ್: ಭಾರತದ ಆರಂಭಿಕರಾದ ಶುಭಮನ್ ಗಿಲ್, ರೋಹಿತ್ ಶರ್ಮಾ ಉತ್ತಮ ಆರಂಭ ನೀಡುತ್ತಿದ್ದಾರೆ. ರೋಹಿತ್ ಅಬ್ಬರದ ಇನ್ನಿಂಗ್ಸ್ ತಂಡಕ್ಕೆ ಪವರ್ ಪ್ಲೇ ಹಂತದಲ್ಲಿ ನೆರವಾಗುತ್ತಿದೆ. ಈ ವರ್ಷ ಗೋಲ್ಡನ್ ಫಾರ್ಮನಲ್ಲಿರುವ ಗಿಲ್ ಸಹ ಶರ್ಮಾಗೆ ಸಾಥ್ ನೀಡುತ್ತಿದ್ದಾರೆ. ಆಸ್ಟ್ರೇಲಿಯಾಕ್ಕೂ ಅನುಭವಿ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಆರಂಭವನ್ನು ನೀಡಿದ್ದಾರೆ. ಆದರೆ ಭಾರತದ ಜೋಡಿಯ ರೀತಿ ಪಾಲುದಾರಿಕೆ ಹಂಚಿಕೊಂಡಿಲ್ಲ.
ರನ್ ಮಷಿನ್ ವಿರಾಟ್ ಆಧಾರ: ಮೂರನೇ ವಿಕೆಟ್ಗೆ ಬ್ಯಾಟಿಂಗ್ ಬರುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಆಸರೆ ಆಗಿದ್ದಾರೆ. ಟೂರ್ನಿಯಲ್ಲಿ ಈ ವರೆಗೆ 3 ಶತಕ, 4 ಅರ್ಧಶತಗಳ ನೆರವಿನಿಂದ 711 ರನ್ ಕಲೆಹಾಕಿರುವ ಅವರು, ವಿಶ್ವಕಪ್‌ನ ಟಾಪ್ ಸ್ಕೋರರ್ ಆಗಿದ್ದಾರೆ. ಈ ವಿಶ್ವಕಪ್ನಲ್ಲಿ ಕ್ರಿಕೆಟ್ ಜಗತ್ತು ಕರೆಯುತ್ತಿದ್ದ ಫ್ಯಾಬ್ ಫೋರ್ನಲ್ಲಿ ಯಶಸ್ವಿ ಆದದ್ದು ವಿರಾಟ್ ಮಾತ್ರ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಈ ವಿಶ್ವಕಪ್ನಲ್ಲಿ ಹೆಚ್ಚು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ.
-
India and Australia are brimming with bowlers who could influence the #CWC23 finale at any point 🔥
— ICC (@ICC) November 18, 2023 " class="align-text-top noRightClick twitterSection" data="
The five epic duels that could swing the epic showdown 👉 https://t.co/jB1RlZImt1 pic.twitter.com/VaShEza5kk
">India and Australia are brimming with bowlers who could influence the #CWC23 finale at any point 🔥
— ICC (@ICC) November 18, 2023
The five epic duels that could swing the epic showdown 👉 https://t.co/jB1RlZImt1 pic.twitter.com/VaShEza5kkIndia and Australia are brimming with bowlers who could influence the #CWC23 finale at any point 🔥
— ICC (@ICC) November 18, 2023
The five epic duels that could swing the epic showdown 👉 https://t.co/jB1RlZImt1 pic.twitter.com/VaShEza5kk
ಅಯ್ಯರ್- ರಾಹುಲ್ ಬಲ: ಗಾಯದಿಂದ ಚೇತರಿಸಿಕೊಂಡು ವಿಶ್ವಕಪ್ ವೇಳೆಗೆ ತಂಡಕ್ಕೆ ಸೇರ್ಪಡೆ ಆದ ಅಯ್ಯರ್ - ರಾಹುಲ್ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದರೂ ರಾಹುಲ್ ಒಂದು ಶತಕ ಸಿಡಿಸಿದರೆ, ಅಯ್ಯರ್ ಬ್ಯಾಟ್ನಿಂದ ಬೆನ್ನು ಬೆನ್ನಿಗೆ ಎರಡು ಶತಕಗಳು ಬಂದಿವೆ. ಆಸೀಸ್ನಲ್ಲಿ ಮಾರ್ಷ, ಲಬುಶೇನ್, ಮ್ಯಾಕ್ಸ್‌ವೆಲ್, ಇಂಗ್ಲಿಸ್ ಕಡೆಯಿಂದ ಸ್ಥಿರ ಪ್ರದರ್ಶನ ಬಂದಿಲ್ಲ. ಅಲ್ಲೊಂದು ಇಲ್ಲೊಂದು ಪಂದ್ಯದಲ್ಲಿ ಮಾತ್ರ ಆಡಿದ್ದಾರೆ. ತಂಡದ ಆಟಗಾರರಿಂದ ಸ್ಥಿರ ಪ್ರದರ್ಶನ ಬಂದಿಲ್ಲ ಎಂದು ಸ್ವತಃ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಬೌಲಿಂಗ್ ಬಲ: ಭಾರತ ಆಡಿದ 9 ಲೀಗ್ ಪಂದ್ಯದಲ್ಲಿ ಎದುರಾಳಿಯನ್ನು 300ರ ಗಡಿದಾಟದಂತೆ ಬೌಲಿಂಗ್ ಮಾಡಿದ್ದಾರೆ. ಶಮಿ 6 ಪಂದ್ಯದಿಂದ 23 ವಿಕೆಟ್ ಕಬಳಿಸಿದ್ದರೆ, ಜಸ್ಪ್ರೀತ್ ಬುಮ್ರಾ 10 ಪಂದ್ಯದಿಂದ 18 ವಿಕೆಟ್ ಮತ್ತು ಜಡೇಜಾ 16 ವಿಕೆಟ್ ಪಡೆದಿದ್ದಾರೆ. ಲೀಗ್ ಹಂತದಲ್ಲಿ ಎರಡು ತಂಡವನ್ನು ಮಾತ್ರ ಆಲ್ಔಟ್ ಮಾಡಲು ಟೀಮ್ ಇಂಡಿಯಾಕ್ಕೆ ಸಾಧ್ಯವಾಗಲಿಲ್ಲ. ಸೆಮೀಸ್ ಸೇರಿದಂತೆ 8 ಎದುರಾಳಿಗಳನ್ನು ಸರ್ವಪತನ ಮಾಡಿದ್ದಾರೆ. ಆಸ್ಟ್ರೇಲಿಯಾದ ಆಡಮ್ ಝಂಪಾ 22 ವಿಕೆಟ್ ಪಡೆದು ಅತಿ ಎಹಚ್ಚು ವಿಕೆಟ್ ಪಡೆದ ಎರಡನೇ ಸ್ಥಾನದಲ್ಲಿದ್ದಾರೆ. ಅವರನ್ನು ಬಿಟ್ಟರೆ ಮತ್ತಾರಿಂದಲೂ ವಿಕೆಟ್ ಪಡೆಯುವಂತಹ ಪ್ರದರ್ಶನ ಬಂದಿಲ್ಲ.
ತಂಡಗಳ ಬಲಾಬಲ ನೋಡಿದರೆ, ಭಾರತವೇ ಸ್ಥಿರತೆಯಲ್ಲಿ ಬಲಿಷ್ಠ ತಂಡವಾಗಿದೆ. 8 ಪಂದ್ಯಗಳನ್ನು ಆಸ್ಟ್ರೇಲಿಯಾ ಸತತವಾಗಿ ಗೆದ್ದಿದ್ದರೂ ಯಾವುದೇ ಆಟಗಾರರೂ ಸ್ಥಿರ ಪ್ರದರ್ಶನ ನೀಡಿಲ್ಲ. ಹೀಗಾಗಿ ನಾಳೆ ಟೀಮ್ ಇಂಡಿಯಾ ಆಸೀಸ್ನ ಆಟಗಾರರನ್ನು ವಿಕೆಟ್ ಕಾಯ್ದುಕೊಳ್ಳದಂತೆ ಮಾಡಿದರೆ. ಚಾಂಪಿಯನ್ ಆಗಿ ಹೊರಹೊಮ್ಮಬಹುದು.
ತಂಡಗಳು ಇಂತಿವೆ: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್.
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೇನ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ, ಮಿಚೆಲ್ ಸ್ಟಾರ್.
ಪಂದ್ಯ: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಮಧ್ಯಹ್ನಾ 2ಕ್ಕೆ ಆರಂಭವಾಗಲಿದೆ. ಡಿಸ್ನಿ + ಹಾಟ್ಸ್ಟಾರ್ ಹಾಗೂ ಸ್ಟಾರ್ಸ್ಪೋರ್ಟ್ಸ್, ಡಿಡಿ ಚಂದನ ನೇರ ಪ್ರಸಾರ ಲಭ್ಯವಿರಲಿದೆ.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಬೌಲಿಂಗ್ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿದೆ: ರೋಹಿತ್ ಶರ್ಮಾ