ETV Bharat / sports

"ಮೂರು ಇನ್ನಿಂಗ್ಸ್​ನಿಂದ ಫಾರ್ಮ್​ ಅಳೆಯಲಾಗದು": ವಾರ್ನರ್​ ಪರ ಖವಾಜಾ ಬ್ಯಾಟಿಂಗ್​

ವಾರ್ನರ್​ ಫಾರ್ಮ್​ ಬಗೆಗಿನ ಟೀಕೆಗೆ ಖವಾಜಾ ಪ್ರತಿಕ್ರಿಯೆ - ಮೂರು ಇನ್ನಿಂಗ್ಸ್​ನಿಂದ ಫಾರ್ಮ್​ ಅಳೆಯಲಾಗದು - ಆರಂಭಿಕರಾಗಿ ವಾರ್ನರ್​ಗೆ ಅಗಾಧ ಅನುಭವ ಇದೆ.

David Warner
ವಾರ್ನರ್​
author img

By

Published : Feb 18, 2023, 9:45 AM IST

ನವದೆಹಲಿ: ಎರಡನೇ ಟೆಸ್ಟ್‌ನ ಮೊದಲ ದಿನದಂದು ವಾರ್ನರ್​ಗೆ ಮೊಹಮ್ಮದ್ ಸಿರಾಜ್ ಬೌನ್ಸರ್‌ ಬಾಲ್​ಗಳ ದಾಳಿ ಮಾಡಿದರು. ಮೂರು ಬಾರಿ ವಾರ್ನರ್​ ಅವರ ತಲೆಗೆ ಚೆಂಡು ಬಡಿಯಿತು. ಒಂಬತ್ತನೇ ಓವರ್​ನಲ್ಲಿ ಬಲವಾಗಿ ವಾರ್ನರ್​ ತೆಲೆ ಬಡಿದ ನಂತರ ಫಿಸಿಯೋ ಬಂದು ಪರೀಕ್ಷಿಸಿದರು. ಹದಿನೈದನೇ ಓವರ್​ನಲ್ಲಿ 44 ಬಾಲ್​ ಎದುರಿಸಿ 15 ರನ್​ ಗಳಿಸಿ ಆಡುತ್ತಿದ್ದ ವಾರ್ನರ್​ ಮಹಮ್ಮದ್​ ಶಮಿಗೆ ವಿಕೆಟ್​ ಒಪ್ಪಿಸಿದರು.

15 ರನ್​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ದಾರಿ ಹಿಡಿದ ವಾರ್ನರ್​ ಅವರು ಫಾರ್ಮ್​ ಬಗ್ಗೆ ಟೀಕೆಗಳು ಕೇಳಿ ಬಂದವು. ಸತತ ಮೂರು ಇನ್ನಿಂಗ್ಸ್​ನಿಂದ ವಿಫಲವಾಗುತ್ತಿರುವುದು ಸಹ ಈ ಟೀಕೆಗೆ ಕಾರಣವಾಗಿದೆ. ಆದರೆ ಈ ಟೀಕೆಗಳಿಗೆ ಆಸ್ಟ್ರೇಲಿಯಾ ಆರಂಭಿಕ ಉಸ್ಮಾನ್​ ಖವಾಜಾ ಪ್ರತಿಕ್ರಿಯಿಸಿ "ಕೇವಲ ಮೂರು ಇನ್ನಿಂಗ್ಸ್​ನಿಂದ ಬ್ಯಾಟಿಂಗ್​ನ ಲಯದ ಬಗ್ಗೆ ಹೇಳಲಾಗುವುದಿಲ್ಲ ಎಂದಿದ್ದಾರೆ.

ವಾರ್ನರ್ ಭಾರತದ ಪ್ರವಾಸ ಸರಣಿಯಲ್ಲಿ 1, 10 ಮತ್ತು 15 ರನ್ ಗಳಿಸಿದ್ದಾರೆ. ನಿನ್ನೆ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸಿಸ್​ಗೆ ಆರಂಭಿಕರು 50 ರನ್ ಜೊತೆಯಾಟ ಮಾಡಿದರು. 15 ರನ್​ ಗಳಿಸಿದ್ದ ವಾರ್ನರ್​ ಈ ವೇಳೆ ಔಟ್​ ಆದರು ನಂತರ ಆಸ್ಟ್ರೇಲಿಯಾ ಸತತ ಕುಸಿತ ಕಂಡಿತಾದರೂ ಖವಾಜಾ 81 ರನ್​ ಗಳಿಸಿದ್ದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಸ್ಮಾನ್​ ಖವಾಜಾ ಅವರು, 'ವಾರ್ನರ್​ ಫಾರ್ಮ್​ ಕಂಡುಕೊಳ್ಳಲು ಕಷ್ಟ ಪಡುತ್ತಿದ್ದಾರೆ ಎಂದು ಹೇಳುತ್ತಿರುವುದನ್ನು ನಾನು ಒಪ್ಪುವುದಿಲ್ಲ. ಮೊದಲ ಪಂದ್ಯದಲ್ಲಿ ವಾರ್ನರ್​ ಅಶ್ವಿನ್ ಬೌಲಿಂಗ್​ನಲ್ಲಿ ಎರಡು ಬೌಂಡರಿ ಬಾರಿಸಿದ್ದರು. ಆದರೆ, ನಂತರ ಅವರು ಎಲ್​ಬಿಡಬ್ಲ್ಯುಗೆ ಔಟ್ ಆದರು. ಆದ್ದರಿಂದ ಅವರು ಆಕ್ರಮಣಕಾರಿ ಪ್ರದರ್ಶನವನ್ನು ತೋರಿಸುತ್ತಿದ್ದಾರೆ' ಎಂದರು.

ಪಂದ್ಯದ ಆರಂಭದಲ್ಲಿ ಹೊಸ ಬಾಲ್​ ಮತ್ತು ಪಿಚ್​ನ ಬಗ್ಗೆ ಅರಿಯಲು ಸಮಯ ಬೇಕಾಗುತ್ತದೆ. ಟೆಸ್ಟ್​ನಲ್ಲಿ ಪಂದ್ಯ ಆರಂಭಿಸುವುದು ಸುಲಭವಲ್ಲ. ಮೊದಲ ಮತ್ತು ಎರಡನೇ ಓವರ್​ನಲ್ಲಿ ಗಳಿಸಿದ ಬೌಂಡರಿಗಳು ಪಿಚ್​ ಬಗ್ಗೆ ಅರಿಯಲು ಸಹಕರಿಸಿತು. ಆ ಬೌಡರಿಗಳು ನನ್ನ ಲಯದ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿತು. ಇದರಿಂದ ಅರ್ಧಶತಕ ಗಳಿಸಲು ಸುಲಭವಾಯಿತು ಎಂದು ಖವಾಜಾ ಹೇಳಿದ್ದಾರೆ.

ವಾರ್ನರ್​ ಕಮ್​ಬ್ಯಾಕ್​ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಖವಾಜಾ,"ವಾರ್ನರ್​ಗೆ ಅಗಾಧ ಅನುಭವ ಇದೆ. ಅವರು ದೀರ್ಘಕಾಲದಿಂದ ಆಸ್ಟ್ರೇಲಿಯಾಕ್ಕಾಗಿ ಆಡುತ್ತಾ ಬದಿಂದಾರೆ. ಕೇವಲ ಮೂರು ಇನ್ನಿಂಗ್ಸ್​ನಿಂದ ಅವರ ಬ್ಯಾಟಿಂಗ್​ ಬಗ್ಗೆ ಅಳೆಯಲು ಸಾಧ್ಯವಿಲ್ಲ. ಆರಂಭಿಕರಾಗಿ ಪಿಚ್​ ಬಗ್ಗೆ ಅರಿತುಕೊಂಡು ಆಡುವುದು ಸರಳವಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎರಡನೇ ಟೆಸ್ಟ್​ನ ಮೊದಲ ದಿನವೇ ಭಾರತದ ಶಮಿ, ಅಶ್ವಿನ್​ ಮತ್ತು ಜಡೇಜಾ ಬೌಲಿಂಗ್​ಗೆ ನಲುಗಿದ ಆಸಿಸ್​ 263ರನ್​ಗೆ ಆಲ್​ಔಟ್​ ಆಗಿದೆ. ಭಾರತ ಬ್ಯಾಟಿಂಗ್​ ಇಳಿದಿದ್ದು 21 ರನ್​ ಗಳಿಸಿದೆ. ನಿನ್ನೆ ಭಾರತ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ್ದ ಶ್ರೇಯಸ್​ ಅಯ್ಯರ್​ ಅವರನ್ನು ಟಿ20 ಸ್ಪೆಷಲಿಸ್ಟ್​ ಸೂರ್ಯ ಕುಮಾರ್​ ಯಾದವ್​ ಅವರ ಜಾಗಕ್ಕೆ ತೆಗೆದುಕೊಳ್ಳಲಾಗಿದೆ. ಮೊದಲ ಪಂದ್ಯದಲ್ಲಿ ಯಾದವ್​ 8 ರನ್​ಗೆ ಔಟ್​ ಆಗಿದ್ದರು.

ಇದನ್ನೂ ಓದಿ: 2ನೇ ಟೆಸ್ಟ್​: ಶಮಿ, ಅಶ್ವಿನ್‌, ಜಡೇಜಾ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ; 263 ರನ್​ಗಳಿಗೆ ಆಲೌಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.